ಮಾಹಿತಿ ಹಕ್ಕು ಅಧಿನಿಯಮ 2005 ಕಾಯ್ದೆ ಅನ್ವಯ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಕರ್ನಾಟಕ ಮಾಹಿತಿ ಆಯೋಗಕ್ಕೆ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತು ರಾಜ್ಯ ಮಾಹಿತಿ ಆಯುಕ್ತರನ್ನು ನೇಮಕ ಮಾಡಿದ್ದಾರೆ.
ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದ್ದು, ನಿವೃತ್ತ ಐಪಿಎಸ್ ಅಧಿಕಾರಿ ಆಶಿತ್ ಮೋಹನ್ ಪ್ರಸಾದ್ ಅವರನ್ನು ರಾಜ್ಯ ಮುಖ್ಯ ಮಾಹಿತಿ ಆಯುಕ್ತರನ್ನಾಗಿ ಮತ್ತು ಉಳಿದ ಏಳು ರಾಜ್ಯ ಮಾಹಿತಿ ಆಯುಕ್ತರ ಸ್ಥಾನಕ್ಕೆ ವಿವಿಧ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ರಾಜ್ಯ ಮಾಹಿತಿ ಆಯುಕ್ತರು
ರಾಮನ್. ಕೆ.
ಡಾ.ಹರೀಶ್ ಕುಮಾರ್.
ರುದ್ರಣ್ಣ ಹರ್ತಿಕೋಟೆ.
ನಾರಾಯಣ ಜಿ. ಚನ್ನಲ್.
ರಾಜಶೇಖರ ಎಸ್.
ಬದ್ರುದ್ದೀನ್ ಕೆ.
ಡಾ.ಮಮತಾ ಬಿ.ಆರ್. ನಿವೃತ್ತ ಐಎಎಸ್ ಅಧಿಕಾರಿ
ಕೇಂದ್ರ ಮಾಹಿತಿ ಆಯೋಗ ಮತ್ತು ಹಲವು ರಾಜ್ಯ ಮಾಹಿತಿ ಆಯೋಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸುಪ್ರೀಂ ಕೋರ್ಟ್ 2024 ಡಿಸೆಂಬರ್ 5ರಂದು ಆದೇಶ ನೀಡಿತ್ತು. ಮಹಾರಾಷ್ಟ್ರದಲ್ಲಿ ಏಳು, ಕರ್ನಾಟಕದಲ್ಲಿ ಎಂಟು, ಛತ್ತೀಸ್‌ಗಢದಲ್ಲಿ ಎರಡು, ಬಿಹಾರದಲ್ಲಿ ಒಂದು, ಪಶ್ಚಿಮ ಬಂಗಾಳದಲ್ಲಿ ನಾಲ್ಕು, ಒಡಿಶಾದಲ್ಲಿ ಐದು ಮತ್ತು ತಮಿಳುನಾಡಿನಲ್ಲಿ ಎರಡು ಸೇರಿದಂತೆ ರಾಜ್ಯ ಮಾಹಿತಿ ಆಯೋಗಗಳಲ್ಲಿ ಹುದ್ದೆಗಳು ಖಾಲಿ ಇದ್ದವು.
ವರದಿ. ಸುನಿಲ ಮುಂಜಾಲೆ
YuvaBharataha Latest Kannada News