ಕಿಚ್ಚ ಸುದೀಪ್ ಜಾಹೀರಾತು ಪ್ರಸಾರಕ್ಕೆ ತಡೆಯಿಲ್ಲ

ಯುವ ಭಾರತ ಸುದ್ದಿ ದೆಹಲಿ :
ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡುವ ಕಿಚ್ಚ ಸುದೀಪ್ ಅವರ ಜಾಹೀರಾತು, ಸಿನಿಮಾ ಪ್ರದರ್ಶನಕ್ಕೆ ಯಾವುದೇ ತಡೆಯಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಕಿಚ್ಚ ಸುದೀಪ್ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಲು ಘೋಷಣೆ ಮಾಡಿರುವ ಕಾರಣಕ್ಕೆ ಅವರ ಜಾಹೀರಾತು, ಸಿನಿಮಾ ಪೋಸ್ಟರ್ ಗೆ ತಡೆ ನೀಡಬೇಕು ಎಂದು ಜೆಡಿಎಸ್ ಹಾಗೂ ಕೆಲವು ವಕೀಲರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಈಗ ಚುನಾವಣಾ ಆಯೋಗ ಈ ಕುರಿತು ಆದೇಶ ನೀಡಿದೆ.
YuvaBharataha Latest Kannada News