Breaking News

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಗ್ರಂಥಾಲಯ ಆ್ಯಪ್ ಬಿಡುಗಡೆ!

Spread the love

ವಿದ್ಯಾರ್ಥಿಗಳಿಗೆ, ವಿವಿ ಬಳಕೆದಾರರಿಗೆ ಮಾಹಿತಿ ಲಭ್ಯತೆಗೆ ಬಹಳ ಅನುಕೂಲ: ಡಾ.ಅಶೋಕ ಶೆಟ್ಟರ್

ಯುವ ಭಾರತ ಸುದ್ದಿ ಬೆಳಗಾವಿ: ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯವು ಗ್ರಂಥಾಲಯ ವಿಭಾಗದ ಹೊಸ ಮೊಬೈಲ್ ಅಪ್ಲಿಕೇಶನ್ ಆ್ಯಪ್ ಆರಂಭಿಸಿದ್ದು, ವಿದ್ಯಾರ್ಥಿಗಳಿಗೆ ಮತ್ತು ವಿವಿ ಬಳಕೆದಾರರಿಗೆ ಮಾಹಿತಿ ಲಭ್ಯತೆಗೆ ಬಹಳ ಅನುಕೂಲವಾಗಿದೆ ಎಂದು ಕೆಎಲ್‌ಇ. ಸಂಸ್ಥೆಯ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ಅಶೋಕ ಶೆಟ್ಟರ್ ಹೇಳಿದರು.
ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎಂ.ಎಸ್.ಶೇಷಗಿರಿ ಕಾಲೇಜು ಆಫ್ ಇಂಜನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಗ್ರಂಥಾಲಯ ಬಳಕೆದಾರರಿಗೆ ಗ್ರಂಥಾಲಯದ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಳಕೆದಾರರಿಗೆ ಯಾವುದೇ ಸಮಯದಲ್ಲಿ, ಎಂತಹ ವಿಷಯಗಳ ಕುರಿತು ಈ ಆ್ಯಪ್‌ನಲ್ಲಿ ಕೂಡಲೇ ಮಾಹಿತಿ ಲಭ್ಯವಾಗಲಿದೆ. ಇದನ್ನು ಎಲ್ಲರೂ ತಮಗೆ ಅಗತ್ಯವಾದ ಮಾಹಿತಿಯನ್ನು ಕ್ರೂಢೀಕರಿಸಲು ಮತ್ತು ಸಂಗ್ರಹಿಸಲು ಬಳಸಿಕೊಳ್ಳಬಹುದು. ಆ್ಯಪ್ ಬಳಕೆದಾರರ ಬೇಡಿಕೆ ಮತ್ತು ಅಗತ್ಯ ಮಾಹಿತಿಗಳನ್ನು ಪೂರೈಸುವುದರಲ್ಲಿ ಎರಡು ಮಾತಿಲ್ಲ ಎಂದರು.
ಡಾ.ಎಂ.ಎಸ್.ಶೇಷಗಿರಿ ಇಂಜನಿಯರಿಂದ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಫ್.ಪಾಟೀಲ ಮಾತನಾಡಿ, ತಂತ್ರಜ್ಞಾನ ಬಳಕೆಯಿಂದ ಗ್ರಂಥಾಲಯಗಳು ಡಿಜಿಟಲೀಕರಣವಾಗುತ್ತಿದ್ದು, ಸಮಯ ಹಾಗೂ ಸರಳ ಬಳಕೆಗೆ ಪೂರಕವಾಗಿದೆ. ಆ್ಯಪ್ ಪೋಷಕರಿಗೆ ಗ್ರಂಥಾಲಯ ಮತ್ತು ಅದರ ಸಂಪನ್ಮೂಲಗಳೊಂದಿಗೆ ಸಂಪರ್ಕ ಸಾಧಿಸಲು ನವೀನ ಮತ್ತು ಅನುಕೂಲಕರ ಮಾರ್ಗವನ್ನು ನೀಡುತ್ತದೆ. ಬಳಕೆದಾರರು ತಾವು ಹುಡುಕುತ್ತಿರುವುದನ್ನು ಹುಡುಕಲು ಮತ್ತು ಎಲ್ಲಿಂದಲಾದರೂ, ಯಾವುದೇ ಸಮಯದಲ್ಲಿ ಲೈಬ್ರರಿ ಸಂಪನ್ಮೂಲಗಳನ್ನು ಪ್ರವೇಶಿಸಲು ಇದು ಸುಲಭಗೊಳಿಸುತ್ತದೆ ಎಂದು ತಿಳಿಸಿದರು.
ಮುಖ್ಯ ಗ್ರಂಥಪಾಲಕ ಡಾ ಸತೀಶ ತೋಟಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆಯುವ ಹಾಗೂ ವಾಪಸ್ಸಾತಿ ಮಾಡುವ ಪ್ರಕ್ರಿಯೆಯನ್ನು ಈ ಆ್ಯಪ್ ಸುಲಭಗೊಳಿಸಿದೆ. ಗ್ರಂಥಾಲಯದದಿಂದ ತೆಗೆದುಕೊಂಡ ಪುಸ್ತಕಗಳ ಮಾಹಿತಿ ಹಾಗೂ ವಾಪಸ್ಸು ಕೊಡುವ ದಿನಾಂಕ, ಶುಲ್ಕವಿದ್ದರೇ ಗ್ರಂಥಾಲಯಕ್ಕೆ ಹೊಸದಾಗಿ ಬಂದ ಹೊಸ ಪುಸ್ತಕಗಳ ಹಾಗೂ ಗ್ರಂಥಾಲಯದ ವೇಳೆ, ರಜೆ ದಿನಗಳ ಹೀಗೆ ಹಲವಾರು ಮಾಹಿತಿಯನ್ನು ನೇರವಾಗಿ ಅವರ ಮೊಬೈಲಗೆ ಮೇಸೆಜ್ ಮೂಲಕ ಅವರಿಗೆ ಸೂಚಿಸುವ ವ್ಯವಸ್ಥೆ ಇದರಲ್ಲಿ ಇದೆ. ಪುಸ್ತಕಗಳ ಮರು ವಾಪಸ್ಸಾತಿಯ ದಿನ ಹಾಗೂ ದಂಡ ಆಗಿದ್ದರೇ ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕೆ ಹಾಗೂ ಜಾಗೃತಗೊಳಿಸಲು ಈ ಆ್ಯಪ್ ಅತ್ಯಂತ ಸಹಕಾರಿಯಾಗಿದೆ ಎಂದರು.
ಸಾಮಾನ್ಯವಾಗಿ ಫೇಸಬುಕ್, ಇ ಮೇಲ್ ಬಳಕೆಯನ್ನು ಮಾಡುವಾಗ ಯುಸರ್ ನೇಮ್ ಹಾಗೂ ಪಾಸವರ್ಡ್‌ನ್ನು ನಾವೇ ರೂಪಿಸಿಕೊಳ್ಳುತ್ತೇವೆ. ಆದರೆ, ಈ ಆ್ಯಪ್‌ನಲ್ಲಿ ವಿದ್ಯಾಲಯಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯಲ್ಲಿ ನೀಡುವ ಬಾರಕೊಡ್ ಅಥವಾ ಪಾಸವರ್ಡ್ ಮತ್ತು ಯುಸರ್ ನೇಮ್ ಬಳಿಸಿ ಈ ಆ್ಯಪ್ ಮೂಲಕ ನೇರವಾಗಿ ಪ್ರವೇಶಿಸಿ ಮತ್ತು ಗ್ರಂಥಾಲಯ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಇದರಲ್ಲಿ ಯಾವುದೇ ದತ್ತಾಂಶ ಪರಿಷ್ಕರಣೆ ಮಾಡುವಂತಿಲ್ಲ. ಇದರ ಮೂಲಕ ನಿರ್ವಾಕರ ಜೊತೆ ಸಂಪರ್ಕವನ್ನು ಸಾಧಿಸಬಹುದಾಗಿದೆ. ಅಲ್ಲದೆ ಬಳಕೆದಾರ ಯಾವುದೇ ಖಾಸಗಿ ಮಾಹಿತಿ ಬಹಿರಂಗವಾಗುವುದಿಲ್ಲ. ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳು ಈ ಆ್ಯಪ್‌ನ್ನು ಉಪಯೋಗಿಸಬಹುದು ಹಾಗೂ ಮಾಹಿತಿ ಸಂಗ್ರಹಣೆ ಸುಲಭ ಸಾಧ್ಯವಾಗಿದೆ. ಬಳಕೆದಾರ ತನ್ನ ತನ್ನ ಸಲಹೆಗಳನ್ನು ಸೂಚಿಸಬಹುದಾಗಿದೆ. ಇದು ಮುಖ್ಯವಾಗಿ ಸಂಶೋಧನಾ, ಪದವಿ ಹಂತದ ವಿದ್ಯಾರ್ಥಿಗಳಿಗೆ ಹಾಗೂ ಗ್ರಂಥಾಲಯದ ಸಿಬ್ಬಂದಿಗೆ ವರದಾನವಾಗಿದೆ ಎಂದು ತಿಳಿಸಿದರು.
ಕಾಲೇಜಿನ ಬಿಇ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮಹಮ್ಮದ್ ಪಟೇಲ ಮತ್ತು ಕು.ಧಿರಜ್ ಇಂಚಲಕರಂಜಿ ಗ್ರಂಥಾಲಯ ಆ್ಯಪ್‌ನ್ನು ಅಭಿವೃದ್ಧಿಗೋಳಿಸಿದ್ದಾರೆ. ಮೊಬೈಲ್ ಅಪ್ಲಿಕೇಶನ್ ಬಳಕೆದಾರರಿಗೆ ತಕ್ಷಣ ಹಾಗೂ ತ್ವರಿತವಾಗಿ ಗ್ರಂಥಾಲಯದ ಸೇವೆ ಪಡೆದುಕೊಳ್ಳಲು ಈ ಹೊಸ ಯೋಜನೆಯನ್ನು ರೂಪಿಸಲಾಗಿದೆ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಬೇಡಿಕೆ ಮತ್ತು ಅಗತ್ಯವನ್ನು ಈ ಆ್ಯಪ್ ಪೂರೈಸಲಿದೆ. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಡೀನ್‌ಗಳು ಮತ್ತು ಮುಖ್ಯಸ್ಥರು, ಗ್ರಂಥಾಲಯ ಸಿಬ್ಬಂದಿ, ಅಧ್ಯಾಪಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗೂಗಲ್ ಪ್ಲೆ-ಸ್ಟೋರ್‌ನಲ್ಲಿ ಈ ಅಪ್ಲಿಕೇಶನನ್ನು ಡೌನಲೋಡ್ ಮಾಡಿಕೊಳ್ಳುವ ಮೂಲಕ ಪ್ರತಿ ಬಾರಿ ಯುಸರ್ ನೇಮ್ ಹಾಗೂ ಪಾಸವರ್ಡ್‌ನ್ನು ನಮೂದಿಸದೇ ಗ್ರಂಥಾಲಯದ ವೆಬ್ ಒಪ್ಯಾಕ್‌ನ್ನು ಪ್ರವೇಶಿಸಬಹುದು. ಗ್ರಂಥಾಲಯ ಸಿಬ್ಬಂದಿಯ ನೇರವಿಲ್ಲದೆ ಗ್ರಂಥಾಲಯದ ಪುಸ್ತಕಗಳ ಸ್ಥಳವನ್ನು ಹಾಗೂ ಸದ್ಯದ ಪುಸ್ತಕದ ಲಭ್ಯತೆ ತಿಳಿದುಕೊಳ್ಳುವ ಮೂಲಕ ಜೊತೆಗೆ ಹೊಸ ಪುಸ್ತಕಗಳ ಶೋಧಕಾರ್ಯವನ್ನು ಮಾಡಬಹುದಾಗಿದೆ- ಸತೀಶ ತೋಟಾರ, ಮುಖ್ಯ ಗ್ರಂಥಪಾಲಕರು ಡಾ.ಎಂ.ಎಸ್.ಶೇಷಗಿರಿ ಕಾಲೇಜು ಆಫ್ ಇಂಜನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜು ಬೆಳಗಾವಿ.

Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

five + 12 =