Breaking News

ಶಿಕ್ಷಕರು ಮತ್ತು ಇಲಾಖೆಯ ನಡುವಿನ ಸಂಪರ್ಕ ಸಾಧಿಸುವಲ್ಲಿ ಶಿಕ್ಷಕರ ಸಂಘ ಮಹತ್ವದ್ದಾಗಿದೆ-ಬಾಲಚಂದ್ರ ಜಾರಕಿಹೊಳಿ.!

Spread the love


ಗೋಕಾಕ : ಶಿಕ್ಷಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಡುವಿನ ಸಂಪರ್ಕ ಸಾಧಿಸುವಲ್ಲಿ ಶಿಕ್ಷಕರ ಸಂಘ ಮಹತ್ವದ್ದಾಗಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದ ಆವರಣದಲ್ಲಿ ರವಿವಾರ ಸಂಜೆ ಮೂಡಲಗಿ ತಾಲೂಕು ಶಿಕ್ಷಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಸಮನ್ವಯತೆಯ ಆಧಾರದಲ್ಲಿ ಕರ್ತವ್ಯ ನಿರ್ವಹಿಸಿ ಯಶಸ್ವಿಯಾಗುವಂತೆ ಶುಭ ಕೋರಿದರು.
ಮೂಡಲಗಿ ತಾಲೂಕು ಘಟಕಕ್ಕೆ ಶಿಕ್ಷಕರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವುದು ಶಿಕ್ಷಕರಲ್ಲಿರುವ ಒಗ್ಗಟ್ಟನ್ನು ಪ್ರದರ್ಶಿಸಿದೆ. ಇದಕ್ಕಾಗಿ ವಲಯದ ಎಲ್ಲ ಶಿಕ್ಷಕರನ್ನು ಅಭಿನಂದಿಸುತ್ತೇನೆ. ಎಲ್ಲ ಸಮುದಾಯದಿಂದ ಶಿಕ್ಷಕರು ಪ್ರತಿನಿಧಿಸಿದ್ದಾರೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಸಾಮಾಜಿಕ ನ್ಯಾಯ ತತ್ವವನ್ನು ಜಾರಿಗೊಳಿಸಿದ್ದರು. ಅದರ ಮಾದರಿಯಲ್ಲಿಯೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದಿನ ಮಹಾನ್ ಪುರುಷರ ತತ್ವಾದರ್ಶದಲ್ಲಿ ಕೆಲಸ ನಿರ್ವಹಿಸುವಂತೆ ಅವರು ಹೇಳಿದರು.
ಸಮಾಜದಲ್ಲಿ ಬದಲಾವಣೆಯನ್ನು ತಂದು ಎಲ್ಲ ಸಮುದಾಯದ ಮಕ್ಕಳ ಜೊತೆಗೆ ಬೆರೆಯಬೇಕು. ಇಂದಿನ ಮಕ್ಕಳನ್ನು ನಾಳಿನ ಸತ್ಪçಜೆಗಳನ್ನಾಗಿ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ಹೊಂದಲು ಸಾಧ್ಯವೆಂದು ಅವರು ಹೇಳಿದರು.
ಶಿಕ್ಷಕರ ಸೇವಾ ಸೌಲಭ್ಯಗಳು, ಶಿಕ್ಷಕರ ವೇತನ ಸೌಲಭ್ಯಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಕಛೇರಿಯ ಜೊತೆಗೆ ಸತತ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ನೂತನ ನಿರ್ದೇಶಕರುಗಳು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕು. ಶಿಕ್ಷಕರು ಮನಸ್ಸು ಗೆಲ್ಲುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಅವರಿಂದ ಮೆಚ್ಚುಗೆ ಗಳಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು. ಸಂಘಕ್ಕೆ ಎಲ್ಲ ೨೦ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದಂತೆ ಸಂಘಕ್ಕೆ ಅಧ್ಯಕ್ಷರೂ ಸೇರಿದಂತೆ ಇನ್ನೂಳಿದ ಪದಾಧಿಕಾರಿಗಳನ್ನು ಸಹ ಅವಿರೋಧವಾಗಿ ಆಯ್ಕೆ ಮಾಡುವಂತೆ ಸಂಘದ ಪದಾಧಿಕಾರಿಗಳಿಗೆ ಸೂಚಿಸಿದರು.


ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ೨೦೨೦-೨೦೨೫ನೇ ಸಾಲಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಡಲಗಿ ತಾಲೂಕಾ ಘಟಕದ ನೂತನ ದಿಗ್ಧರ್ಶಕ ಮಂಡಳಿಯವರನ್ನು ಹೂ-ಮಾಲೆ ಹಾಕಿ ಅಭಿನಂದಿಸಿದರು.
ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರ ಸಂಘದ ಧ್ಯೇಯೋದ್ಧೇಶಗಳನ್ನು ವಿವರಿಸಿದರು. ಹೊಸ ಮಂಡಳಿಯವರನ್ನು ಅಭಿನಂದಿಸಿದರು.
ಹೊಸ ನಿರ್ದೇಶಕ ಮಂಡಳಿಯ ಸದಸ್ಯರು : ಎಸ್.ಎಂ. ಲೋಕನ್ನವರ, ಎಂ.ವಾಯ್. ಸಣ್ಣಕ್ಕಿ, ಬಿ.ಬಿ. ಕೇವಟಿ, ಆರ್.ಎಂ. ಮಹಾಲಿಂಗಪೂರ, ಎ.ಪಿ. ಪರಸನ್ನವರ, ಎಂ.ಜಿ. ಮಾವಿನಗಿಡದ, ಎಲ್.ಎಂ. ಬಡಕಲ್, ಕೆ.ಎಲ್. ಮೀಸಿ, ಎಲ್.ಎಂ. ಭೂಮನ್ನವರ, ವಾಯ್.ಡಿ. ಝಲ್ಲಿ, ಬಿ.ಎಲ್. ನಾಯಿಕ, ಬಿ.ಎ. ಡಾಂಗೆ, ಎಸ್.ಎಂ. ಕುರಣಗಿ, ಎಂ.ಎA. ಕಳಸನ್ನವರ, ಸುನೀತಾ ಎಸ್, ಲಕ್ಷಿö್ಮÃ ಹೆಬ್ಬಾಳ, ಎಲ್.ಎಸ್. ಯಲಿಗಾರ, ವ್ಹಿ.ಎಂ. ಪೂಜೇರಿ, ಆರ್.ಎಂ. ಹುಣಶ್ಯಾಳಕರ, ಎಸ್.ಜಿ. ರಾಮದುರ್ಗ.
ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಶಿಕ್ಷಕರ ಸಂಘದ ನಿರ್ದೇಶಕರುಗಳು ಸತ್ಕರಿಸಿದರು.


Spread the love

About Yuva Bharatha

Check Also

ಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.!

Spread the loveಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.! ಗೋಕಾಕ: ವಿಶ್ವದಲ್ಲಿ ಅತಿ …

Leave a Reply

Your email address will not be published. Required fields are marked *

nineteen − 8 =