ಸಂಕ್ರಾಂತಿ ಮುನ್ನ ಭವಿಷ್ಯ ನುಡಿದ ಕೋಡಿ ಶ್ರೀ

ಯುವ ಭಾರತ ಸುದ್ದಿ ಹೊಸಪೇಟೆ :
ವಿಶೇಷ ಸಂದರ್ಭಗಳಲ್ಲಿ ಅತ್ಯಂತ ನಿಖರ ಭವಿಷ್ಯ ನುಡಿಯುವ ಕೋಡಿ ಶ್ರೀ ಇದೀಗ ಮತ್ತೆ ಭವಿಷ್ಯ ನುಡಿದಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆಯ ಬಿಜೆಪಿ ನಾಯಕಿ ರಾಣಿ ಸಂಯುಕ್ತ ಅವರ ನಿವಾಸದಲ್ಲಿ
ಪಾದಪೂಜೆ ಸ್ವೀಕರಿಸಿದ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಭಕ್ತ ಕುಟುಂಬದವರು ಶುಕ್ರವಾರ ಪಾದಪೂಜೆ ಮಾಡಿದ್ದಾರೆ.
ಪಾದಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಶ್ರೀ ಭವಿಷ್ಯ ನುಡಿದಿದ್ದಾರೆ.
ನಾನು ಈ ಹಿಂದೆ ಭವಿಷ್ಯ ನುಡಿದಿದ್ದೆ. ಅದರಂತೆ ಆ ಭವಿಷ್ಯ ನಿಜವಾಗಿದೆ ಎಂದು ಕೋಡಿ ಶ್ರೀಗಳು ಹೇಳಿದ್ದಾರೆ.
ಇಂದು ಹೇಳಿದ್ದೇನು ?
ಕರ್ನಾಟಕದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ , ದೊಡ್ಡ ತಲೆಗಳು ಉರುಳುತ್ತವೆ ಎಂದು ಹೇಳಿದ್ದಾರೆ.
ಒಲೆ ಹೊತ್ತಿ ಉರಿದರೆ ನಿಲ್ಲಬಹುದು , ಧರೆ ಹೊತ್ತಿ ಉರಿದರೆ ನಿಲ್ಲದು ಎಂದಿದ್ದಾರೆ . ಇದೇ ವರ್ಷ 2023 ಕ್ಕೆ ಜಾಗತಿಕ ಮಟ್ಟದಲ್ಲಿ ಈ ರೀತಿಯ ಸಮಸ್ಯೆ ಎದುರಾಗಲಿದೆ . ಸಾಧು ಸಂತರಿಗೆ ಸಮಸ್ಯೆಯಾಗಲಿದೆ . ಜಾಗತಿಕವಾಗಿ ಬಹಳ ದೊಡ್ಡ ಸಮಸ್ಯೆ ಕಾಡುತ್ತದೆ ಎಂದಿದ್ದಾರೆ.
2022 ಸಂವತ್ಸರದ ಪ್ರಾರಂಭದಲ್ಲಿಯೇ ನಾನು ಭವಿಷ್ಯ ಹೇಳಿದ್ದೆ . ಮಳೆ , ಸಿಡಿಲು , ಬೆಂಕಿ ಕಾಟ , ಮತಾಂಧತೆ ಹೆಚ್ಚುತ್ತೆ , ಸಾವು – ನೋವು ಆಗುತ್ತೆ ಅಂತಾ ಹೇಳಿದ್ದೆ . ಜನ ಅಶಾಂತಿಯಿಂದ ಇರುತ್ತಾರೆ . ಭೂಮಿ ಕುಸಿಯುತ್ತೆ ಎಂದು ಹೇಳಿದ್ದೆ . ಈಗ ನಾವು ಹೇಳಿದಂತೆಯೇ ಆಗಿದೆ ಎಂದು ಅವರು ಹೇಳಿದ್ದಾರೆ.
YuvaBharataha Latest Kannada News