Breaking News

ಮಹಿಳೆಯರಿಂದ ಸಂಸ್ಕಾರ-ಸಂಸ್ಕೃತಿ ಉಳಿಯಲು ಸಾಧ್ಯ- ಘಟಪ್ರಭಾದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳುು

Spread the love

ಮಹಿಳೆಯರಿಂದ ಸಂಸ್ಕಾರ-ಸಂಸ್ಕೃತಿ ಉಳಿಯಲು ಸಾಧ್ಯ- ಘಟಪ್ರಭಾದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳುು!!

ಯುವ  ಭಾರತ ಸುದ್ದಿ ಗೋಕಾಕ : ಮಕ್ಕಳನ್ನು ಬಾಲ್ಯದಿಂದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದು ಘಟಪ್ರಭ ಕೆಂಪಯ್ಯಸ್ವಾಮಿ ಮಠದ ಮ.ನಿ.ಪ್ರ.ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ದೇಶ್ವರ ಜಾತ್ರ ಮಹೋತ್ಸವದ ಕುಂದರನಾಡೋತ್ಸವ-2022ದಲ್ಲಿ ಬುಧುವಾರ ಸಂಜೆ ನಡೆದ ಮಹಿಳಾ ಸಮಾವೇಶ ಹಾಗೂ ಮುತ್ತೆöÊದೆಯರಿಗೆ ಉಡಿತುಂಬುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಕ್ಕಮಹಾದೇವಿಯವರು ಬಸವಣ್ಣನ ಕಾಲದಲ್ಲಿ ಮಹಿಳಾ ಕ್ರಾಂತಿ ಮಾಡಿದ್ದರು. ಸಮಾಜದಲ್ಲಿ ಪ್ರತಿಯೊಂದು ಮನೆಗಳು ಉದ್ದಾರವಾಗಬೇಕೆಂದರೆ ಮಹಿಳೆಯ ಪಾತ್ರ ಪ್ರಮುಖವಾದದ್ದು. ಕಿತ್ತೂರುರಾಣಿ ಚೆನ್ನಮ್ಮ, ಒಣಕೆ ಓಬವ್ವ, ಝಾನ್ಸಿರಾನಿ ಲಕ್ಷಿö್ಮÃಭಾಯಿ ಅವರಂತಹ ಮಹಾನೀರು ಕಂಡಿದ್ದು ನಮ್ಮ ದೇಶ, ಮಹಿಳೆಯರಿಗೆ ಅಂತಹವರಿ ಆದರ್ಶವಗಬೇಕು. ನಾಡಿನಲ್ಲಿ ಅಕ್ಕಬಳಗವನ್ನು ಸಂಸ್ಥಾಪಿಸಿ ಮಹಿಳೆಯರಿಗೆ ಸ್ವಾತಂತ್ರö್ಯ ನೀಡಿದವರು ಹಾನಗಲ್ ಶ್ರೀಗಳು. ಪ್ರತಿಯೊಬ್ಬ ಮಹಿಳೆಯು ಶಿಕ್ಷಣ ಪಡೆದು ಉನ್ನತ ಹಂತಕ್ಕೆ ತಲುಪಬೇಕು ಎಂದು ಆಶೀರ್ವದಿಸಿದರು.
ಬೆಳಗಾವಿ ನಾಗನೂರು ರುದ್ರಕ್ಷಿಮಠದ ಮ.ನಿ.ಪ್ರ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ಪ್ರತಿಯೊಂದು ವಿಷಯದಲ್ಲಿ ತಾಯಿಯನ್ನು ಕಾಣುವ ದೇಶ ಭಾರತ. ಮಹಿಳೆಯರಿಗೆ ಇರುವ ಕರುಣೆ ಬೇರೆ ಯಾವುದೇ ವಸ್ತುವಿನಲ್ಲಿ ಕಾಣಲು ಅಸಾಧ್ಯ. ಅಮರಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀಮಠವನ್ನು ನಾಡಿನ ಶ್ರೇಷ್ಟ ಮಠಗಳನ್ನಾಗಿಸುವಲ್ಲಿ ಅವರು ಶ್ರಮಿಸುತ್ತಿದ್ದು ಅವರಿಗೆ ಪ್ರತಿಯೊಬ್ಬರು ಬೆನ್ನಲುಬಾಗಿ ನಿಲ್ಲಬೇಕು ಎಂದರು.
ಮಹಿಳಾ ಸಮಾವೇಶ ಅಂಗವಾಗಿ ಶ್ರೀಮಠದ ಭಕ್ತರಾದ ನೂತನ ಪಿಎಸ್‌ಐ ಗೀತಾರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಶ್ರೀಮಠದಿಂದ ಮುತ್ತೆöÊದೆಯರಿಗೆ ಉಡಿ ತುಂಬಲಾಯಿತು.
ಮೂಲಗದ್ದೆಯ ಚನ್ನಬಸವ ಸ್ವಾಮಿಗಳು, ವಿಶ್ವನಾಥ ದೇವರು, ಚನ್ನಬಸವ ದೇವರು ಅರಳಿಕಟ್ಟಿ, ಅನ್ನದಾನಿ ದೇವರು ಘಟಪ್ರಭ, ಯುವ ಧುರೀಣರಾದ ಪ್ರಕಾಶಗೌಡ್ರು ಪೋಲಿಸ್‌ಗೌಡ್ರು, ಬೆಳಗಾವಿ ಸಮಾಜ ಸೇವಕರಾದ ಮಹಾಂತೆಶ ವಕ್ಕುಂದ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

7 + two =