ಮಳೆ ಅಭಾವ : ತರಕಾರಿ ಬೆಲೆ ತುಟ್ಟಿ
ಯುವ ಭಾರತ ಸುದ್ದಿ ಬೆಂಗಳೂರು :
ಪ್ರಸಕ್ತ ವರ್ಷ ಮುಂಗಾರು ಮಳೆ ಅಭಾವದ ಕಾರಣ ತರಕಾರಿ ಬೆಲೆಯಲ್ಲಿ ಜಾಸ್ತಿಯಾಗಿದೆ. ಇದರಿಂದ ಜನಸಾಮಾನ್ಯರು ತರಕಾರಿ ಕೊಂಡುಕೊಳ್ಳುವುದು
ದುಸ್ತರವಾಗಿದೆ. ತರಕಾರಿ ಬೆಲೆ ಒಂದೇ ಸಮನೆ ಏರಿಕೆಯಾಗ ತೊಡಗಿದೆ.
ಕಳೆದ ಕೆಲವು ದಿನಗಳಿಂದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು, ಗ್ರಾಮಾಂತರ ಸೇರಿ ಸುತ್ತಮುತ್ತ ಸುರಿದ ಅಧಿಕ ಮಳೆಯಿಂದಾಗಿ ತರಕಾರಿಗಳು ಹಾಳಾಗಿದ್ದು ಬೆಂಗಳೂರಿಗೆ ತರಕಾರಿಗಳು ಸರಿಯಾಗಿ ಪೂರೈಕೆ ಆಗದಿರದ ಕಾರಣ ಸೊಪ್ಪು ತರಕಾರಿಗಳ ಬೆಲೆ ಗಗನಕ್ಕೇರಿದೆ. ಒಂದು ಕೆಜಿ ಬೀನ್ಸ್ ಬೆಲೆ ಶತಕ ದಾಟಿದ್ದು ನುಗ್ಗೆಕಾಯಿ ಬೆಲೆ 80 ಆಗಿದೆ.
ಕೆ ಆರ್ ಮಾರುಕಟ್ಟೆ ಕಲಾಸಿಪಾಳ್ಯ ಅಷ್ಟೇ ಅಲ್ಲದೆ ಹಾಪ್ ಕಾಮ್ಸ್ ನಲ್ಲೂ ತರಕಾರಿಗಳ ಬೆಲೆ 100 ದಾಟಿದ್ದು ಬೀನ್ಸ್ 145 ರೂ, ಗುಂಡುಬದನೆ 78 ರೂ. , ಬಟಾಣಿ 148 ರೂ, ಮೂಲಂಗಿ 46 ರೂ, ನವಿಲುಕೋಸು 63 ರೂ., ನುಗ್ಗೆಕಾಯಿ 80 ರೂ., ಬೆಂಡೆಕಾಯಿ 54 ರೂ, ಶುಂಠಿ 230 ರೂ, ಟೊಮೆಟೋ 46 ರೂ, ಬ್ರೊಕೋಲಿ 200 ರೂ.ಆಗಿದೆ.