ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ಸಿಗಲಿ

ವಿಶ್ವಸಂಸ್ಥೆ :
ಭಾರತ, ಬ್ರೆಜಿಲ್, ಜರ್ಮನಿ, ಜಪಾನ್ ಹಾಗೂ ಆಫ್ರಿಕಾ ದೇಶಗಳ ಪ್ರಾತಿನಿಧ್ಯಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ಸ್ಥಾನಗಳನ್ನು ಹೆಚ್ಚಿಸುವಂತೆ ಬ್ರಿಟನ್ ಕರೆ ನೀಡಿದೆ.
ಭದ್ರತಾ ಮಂಡಳಿಯ ಸುಧಾರಣೆಗೆ ಇದು ಸಕಾಲವೆಂದು ಹೇಳಿದೆ.
ವಿಶ್ವಸಂಸ್ಥೆಯಲ್ಲಿನ ಬ್ರಿಟನ್ ಕಾಯಂ ಪ್ರತಿನಿಧಿ ಮತ್ತು ಭದ್ರತಾ ಮಂಡಳಿಯ ಜುಲೈ ತಿಂಗಳ ಅಧ್ಯಕ್ಷತೆ ವಹಿಸಿರುವ ರಾಯಭಾರಿ ಬಾರ್ಬರಾ ವುಡ್‌ವರ್ಡ್ ಅವರು, ಭದ್ರತಾ ಮಂಡಳಿಯ ಜುಲೈ ತಿಂಗಳ ಕಾರ್ಯಕ್ರಮಗಳ ಕುರಿತು ಈ ಹೇಳಿಕೆ ನೀಡಿದ್ದಾರೆ.
ಭಾರತ, ಬ್ರೆಜಿಲ್, ಜರ್ಮನಿ ಮತ್ತು ಜಪಾನ್‌ಗೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ನೀಡಲು ಬ್ರಿಟನ್ ಬೆಂಬಲಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ವುಡ್‌ವರ್ಡ್ ಅವರು ನಾಲ್ಕು ದೇಶಗಳನ್ನು ನಾವು ಬೆಂಬಲಿಸುತ್ತಿರುವುದರ ಹಿಂದಿನ ನಮ್ಮ ಚಿಂತನೆಯು ಭಾಗಶಃ ಭೌಗೋಳಿಕ ಸಮತೋಲನಕ್ಕೆ ಸಂಬಂಧಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
YuvaBharataha Latest Kannada News