ಲಿಂಗಾಯತ ಸಮಾಜದ ಹಿರಿಯರಾದ ಲಕ್ಷ್ಮಣ ಹುಳ್ಳೇರ ನಿಧನಕ್ಕೆ -ಸಚಿವ ರಮೇಶ ಜಾರಕಿಹೊಳಿ ಸಂತಾಪ!

ಯುವ ಭಾರತ ಸುದ್ದಿ ಗೋಕಾಕ: ನಗರದ ನಿವಾಸಿ ಯೋಗಿಕೊಳ್ಳ ರಸ್ತೆ ನಿವಾಸಿ, ಲಿಂಗಾಯತ ಸಮಾಜದ ಹಿರಿಯರು ಹಾಗೂ ಹಿರಿಯ ರಾಜಕಾರಣಿ ಲಕ್ಷ್ಮಣ ಬಸಪ್ಪ ಹುಳ್ಳೇರ (67) ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾದರು.ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.
ಸಚಿವ ರಮೇಶ ಜಾರಕಿಹೊಳಿ ಸಂತಾಪ: ಆಕಸ್ಮೀಕವಾಗಿ ಸಿಧನರಾದ ಲಕ್ಷ್ಮಣ ಬಸಪ್ಪ ಹುಳ್ಳೇರ ಅವರು ಸಮಾಜಕ್ಕೆ ಸಾಕಷ್ಟು ಕೊಡೆಗುಯನ್ನು ನೀಡಿದ್ದರು. ಅವರ ಅಗಲಿಕೆಯಿಂದ ಲಿಂಗಾಯತ ಸಮಾಜ ಹಾಗೂ ಇನ್ನುಳಿದ ಸಮಾಜಗಳ ತುಂಬಲಾರದ ನಷ್ಟ ಉಂಟಾಗಿದೆ. ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಗೆ ತಮ್ಮನ್ನು ತಾವು ಮುಡಿಪಾಗಿಸಿಕೊಂಡಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
YuvaBharataha Latest Kannada News