ಲಖನ್ ಸಾಹುಕಾರ್ ಗೆ ಭರ್ಜರಿ ಸ್ವಾಗತ!!

ಯುವ ಭಾರತ ಸುದ್ದಿ ಗೋಕಾಕ: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಭರ್ಜರಿ ವಿಜಯ ಸಾಧಿಸಿ ಚುನಾವಣಾ ಇಲಾಖೆಯಿಂದ ಪ್ರಮಾಣ ಪತ್ರ ಸ್ವೀಕರಿಸಿ ನಗರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹಾರ ತುರಾಯಿ ಮೂಲಕ ಭರ್ಜರಿ ಸ್ವಾಗತ ನೀಡಿದರು.

ಪಕ್ಷೇತರ ವಿಜೇತ ಅಭ್ಯರ್ಥಿ ಲಖನ್ ಜಾರಕಿಹೊಳಿ ನಗರದ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು, ನಂತರ ಗ್ರಾಮ ದೇವತೆ ಶ್ರೀ ಮಹಾಲಕ್ಷ್ಮಿ ದೇವಿ, ಹಾಗೂ ಶ್ರೀ ಹನುಮಂತ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ನೂರಾರು ಬೆಂಬಲಿಗರು ಇದ್ದರು.
YuvaBharataha Latest Kannada News