Breaking News

ಲೋಕಸಭಾ ಚುನಾವಣೆ ಬಜೆಟ್ ; ಡಾ. ಸೋನಾಲಿ ಟೀಕೆ

Spread the love

ಲೋಕಸಭಾ ಚುನಾವಣೆ ಬಜೆಟ್ ; ಡಾ. ಸೋನಾಲಿ ಟೀಕೆ

ಬೆಳಗಾವಿ :
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ಬಜೆಟ್ ಮಂಡಿಸಿದೆ. ಸಿದ್ದರಾಮಯ್ಯನವರು ನಮ್ಮದು “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬ ಮೂಲ ತಂತ್ರ ವೆಂದು ಅಭಿವೃದ್ಧಿ, ಸಾಮಾಜಿಕ ನ್ಯಾಯದ ಪರ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳಿರುವುದು ಅತ್ಯಂತ ಹಾಸ್ಯಾಸ್ಪದ ಎಂದು ಬಿಜೆಪಿ ನಾಯಕಿ ಡಾ. ಸೋನಾಲಿ ಸರನೋಬತ್ ಟೀಕಿಸಿದ್ದಾರೆ.

ಈ ಬಜೆಟ್ ನೋಡಿದರೆ ಎಲ್ಲದೇ ಸರ್ವರಿಗೂ ಸಮಪಾಲು, ಎಲ್ಲದೇ ಸರ್ವರಿಗೂ ಸಮಬಾಳು ಈ ಬಜೆಟ್ ಅತ್ಯಂತ ರಾಜಕೀಯ ಪ್ರೇರಿತ ಬಜೆಟ್ ಆಗಿದೆ. ಈ ಬಜೆಟ್ ಅಲ್ಪಸಂಖ್ಯಾತರ ಓಲೈಕೆಗಾಗಿಯೇ ಮೀಸಲಿಟ್ಟಂತಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಎಲ್ಲಿದೇ ಅಭಿವೃದ್ಧಿ, ಎಲ್ಲಿದೇ ಸಾಮಾಜಿಕ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

ಬಹುಸಂಖ್ಯಾತ ಹಿಂದುಗಳಿಗೆ ಅಭ್ಯುದೋಯಕ್ಕೆ ಯಾವುದೇ ರೀತಿಯ ಅನುದಾನ ಮತ್ತು ಯೋಜನೆಗಳಿಲ್ಲ. ಇದೊಂದು ಜನವಿರೋಧಿ ಬಜೆಟ್. ಮೊದಲ ವರ್ಷವೇ 85 ಸಾವಿರ ಕೋಟಿ ರೂ. ಸಾಲ ತೋರಿಸಿದ್ದಾರೆ.
ಯಾವುದೇ ಮುಂದಾಲೋಚನೆ ಇಲ್ಲದೇ, ಯಾವುದೇ ರಾಜ್ಯದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಎಪಿಎಂಸಿ ಕಾಯ್ದೆ ರದ್ದು,
ಭಾಗ್ಯಲಕ್ಷ್ಮೀ ಯೋಜನೆ (ಭಾಗ್ಯಲಕ್ಷ್ಮೀ ಬಾಂಡ್) ರದ್ದು,
ಜಿಲ್ಲೆಗೊಂದು ಸ್ಥಾಪಿಸಿದ್ದ ಗೋಶಾಲೆ ಯೋಜನೆ ರದ್ದು,
ನೂತನ ಶಿಕ್ಷಣ ನೀತಿ ರದ್ದು (ಎನ್.ಇ.ಪಿ), ಅಗ್ನಿವೀರ ಯೋಜನೆಗೆ ಯುವಕರಿಗೆ ತರಬೇತಿ ಯೋಜನೆ ರದ್ದು, ಮಕ್ಕಳ ಉಚಿತ ಬಸ್ ಯೋಜನೆ ರದ್ದು, ಸ್ವಾಮಿ ವಿವೇಕಾನಂದ ಯುವಕ ಸಂಘಗಳ ರದ್ದು, ವಿವೇಕ ಶಾಲಾ ಕೊಠಡಿಗಳ ಕಟ್ಟಡ ಮಾಡುವ ಯೋಜನೆ ರದ್ದು,
ಭೂಸಿರಿ ಯೋಜನೆ ರದ್ದು, ಅಂತರ್ಜಲ ಹೆಚ್ಚಿಸುವ “ಜಲನಿಧಿ” ಯೋಜನೆ ರದ್ದು ಮಾಡಲಾಗಿದೆ.

ಇದೊಂದು ಲೋಕಸಭಾ ಚುನಾವಣೆಯ ತಯಾರಿ ಬಜೆಟ್ ಆಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಭಿವೃದ್ಧಿ ಚಿಂತನೆಗಳಿಲ್ಲ ಎನ್ನುವುದು ಈ ಬಜೆಟ್‌ನಲ್ಲಿ ಕಾಣುತ್ತಿದೆ ಎಂದು ಅವರು ದೂರಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

3 × 5 =