ಕುರುಬ ಸಮಾಜವನ್ನು ಪರಿಶಿಷ್ಠ ವರ್ಗ(ಎಸ್.ಟಿ)ಗೆ ಆಗ್ರಹಿಸಿ ದಿ.21 ಮುಖ್ಯಮಂತ್ರಿಗಳಿಗೆ ಮನವಿ!!

ಯುವ ಭಾರರ ಸುದ್ದಿ ಗೋಕಾಕ: ಕುರುಬ ಸಮಾಜವನ್ನು ಪರಿಶಿಷ್ಠ ವರ್ಗ (ಎಸ್.ಟಿ) ಮೀಸಲಾತಿಗೆ ಒಳಪಡಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಿದ್ದು, ಜಿಲ್ಲೆಯ ಎಲ್ಲ ಸಮಾಜ ಭಾಂದವರು ಶುಕ್ರವಾರ ದಿ.21-10-2022ರಂದು ಮುಂಜಾನೆ 11ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್ ಎಸ್ ನಸಲಾಪೂರೆ ಹಾಗೂ ಅಧ್ಯಕ್ಷ ಮಡ್ಡೆಪ್ಪ ತೋಳಿನವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
YuvaBharataha Latest Kannada News