Breaking News

ಹೊಸ ಉಪ ನೋಂದಣಿ ಕಛೇರಿಗೆ ಸ್ಥಳ ಪರಿಶೀಲನೆ.!!

Spread the love

ಹೊಸ ಉಪ ನೋಂದಣಿ ಕಛೇರಿಗೆ ಸ್ಥಳ ಪರಿಶೀಲನೆ ..!!

ಯುವ ಭಾರತ ಸುದ್ದಿ ಗೋಕಾಕ್ : ಮೂಡಲಗಿಗೆ ಹೊಸ ಉಪ ನೋಂದಣಿ ಕಛೇರಿ ಮಂಜೂರಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು  ಬುಧವಾರದಂದು ಕಛೇರಿಗೆ ಅಗತ್ಯವಿರುವ ಸ್ಥಳವನ್ನು ಪರಿಶೀಲನೆ ನಡೆಸಿದರು.

ಪಟ್ಟಣದ ತಹಶಿಲ್ದಾರರ ಕಚೇರಿಗೆ ಹೊಂದಿಕೊಂಡಿರುವ ಮೂರು ಕೊಠಡಿಗಳನ್ನು ಪರಿಶೀಲಿಸಿದ ಜಿಲ್ಲಾ ನೋಂದಣಿ (DR) ಅಧಿಕಾರಿ ಶಿವಕುಮಾರ ಅಪರಂಜಿ ಅವರು, ಈ ಮೂರು ಕೊಠಡಿಯಲ್ಲಿ ಹೊಸ ಉಪ ನೋಂದಣಿ ಕಚೇರಿಯನ್ನು ಆರಂಭಿಸಲಾಗುವುದು. ಶೀಘ್ರವಾಗಿ ಮೂಡಲಗಿಯಲ್ಲಿ ಕಚೇರಿ ಆರಂಭ ಮಾಡಲಾಗುವುದು ಎಂದು ಹೇಳಿದರು.

ಅರಭಾವಿ ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದ  ಫಲವಾಗಿ ಮೂಡಲಗಿಯಲ್ಲಿ ಹೊಸ ಕಚೇರಿ ಆರಂಭವಾಗಲಿದೆ. ಮೂಡಲಗಿ ತಾಲೂಕಿನ ಸಾರ್ವಜನಿಕರ ಹಿತದೃಷ್ಟಿಯಿಂದ ಗೋಕಾಕದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನೇ ಇಲ್ಲಿ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗುತ್ತದೆ.‌ ನಾಗರಿಕರು ಹಾಗೂ ರೈತರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಬೈಲಹೊಂಗಲ ಉಪ-ವಿಭಾಗಾಧಿಕಾರಿ (AC) ಡಾ. ಶಶಿಧರ ಬಗಲಿ, ತಹಶಿಲ್ದಾರ  ಡಿ.ಜೆ ಮಹಾತ, ಗೋಕಾಕ ಉಪ ನೋಂದಣಿ ಅಧಿಕಾರಿ ರವಿ ಸಂಕನಗೌಡ್ರ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು


Spread the love

About Yuva Bharatha

Check Also

ಸುವಿಚಾರ ಚಿಂತನ ಕಾರ್ಯಕ್ರಮ

Spread the loveಸುವಿಚಾರ ಚಿಂತನ ಕಾರ್ಯಕ್ರಮ ಗೋಕಾಕ: ಸಮೀಪದ ಹುಣಶ್ಯಾಳ ಪಿಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ದಿ.೧೮ರಂದು ಮಧ್ಯಾಹ್ನ …

Leave a Reply

Your email address will not be published. Required fields are marked *

3 × 2 =