ಕೊರೋನಾ ಮಹಾಮಾರಿ ವಿರುದ್ಧ ಹೋರಾಡಲು ಲಸಿಕೆ ಸಂಜಿವೀನಿ-ಭೀಮಶಿ ಭರಮಣ್ಣವರ!!

ಯುವ ಭಾರತ ಸುದ್ದಿ, ಗೋಕಾಕ: ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡಲು ಲಸಿಕೆ ಸಂಜಿವೀನಿಯಾಗಿದ್ದು, ಎಲ್ಲರು ತಪ್ಪದೇ ಕೋವಿಡ್ ಲಸಿಕೆ ಪಡೆಯಬೇಕು ಎಂದು ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮಣ್ಣವರ ಹೇಳಿದರು.
ಅವರು, ಬಿಜೆಪಿ ಗೋಕಾಕ ನಗರ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ವತಿಯಿಂದ ಸೇವೆಯೇ ಸಂಘಟನೆ ಕಾರ್ಯಕ್ರಮದಡಿಯಲ್ಲಿ ನಗರದ ನ್ಯೂ ಇಂಗ್ಲೀಷ್ ಸ್ಕೂಲ್ ಲಸಿಕಾ ಕೇಂದ್ರದ ಆವರಣದಲ್ಲಿ ಮೇರಾ ಭೂತ ವ್ಯಾಕ್ಸಿನೇಶನ ಯುಕ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೋನಾ ಮಹಾಮಾರಿಯಿಂದ ಅನೇಕ ನಮ್ಮ ಪ್ರೀತಿ ಪಾತ್ರರನ್ನು ಈಗಾಗಲೇ ಕಳೆದುಕೊಂಡಿದ್ದೆವೆ. ಮುಂಬರುವ ದಿನಗಳಲ್ಲಿ ಮಹಾಮಾರಿ ಮೂರನೇ ಅಲೆಯ ರೂಪದಲ್ಲಿ ಹರಡಲಿದ್ದು ಲಸಿಕೆ ಪಡೆಯುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಂಚಾಲಕ ಕಿರಣ ಡಮಾಮಗರ, ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಒಡೇಯರ, ವೀರೇಂದ್ರ ಎಕ್ಕೇರಿಮಠ, ವಿಶ್ವನಾಥ ಜೋಶಿ, ಬಾಳೇಶ ಗಿಡ್ಡನವರ, ಅಡಿವೇಶ ಮಜ್ಜಿಗಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
YuvaBharataha Latest Kannada News