ಮಿರಗಿ ಶ್ರೀ ಸಂಗಮೇಶ್ವರ ದೇವರ ಜಾತ್ರೆ ರವಿವಾರ
ಯುವ ಭಾರತ ಸುದ್ದಿ ಇಂಡಿ :
ಮಿರಗಿ ಗ್ರಾಮದ ಭೀಮಾನದಿ ದಂಡೆಯ ಮೇಲಿರುವ ಶ್ರೀ ಸಂಗಮೇಶ್ವರ ದೇವರ ಜಾತ್ರಾ ಮಹೋತ್ಸವ ಜ.15 ಮಕರ ಸಂಕ್ರಮಣದಂದು ಜರುಗಲಿದೆ ಎಂದು ದೇವಸ್ಥಾನದ ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ದೇವರಿಗೆ ರುದ್ರಾಭಿಷೇಕ,ಸಹಸ್ರ ಬಿಲ್ವಾರ್ಚನೆ,ನಂತ ಮಧ್ಯಾಹ್ನ ೩ ಗಂಟೆಗೆ ನಾದ ಬಿಕೆ ಲಕ್ಷ್ಮೀ ದೇವಿ, ನಾದ ಕೆಡಿ ಗ್ರಾಮದ ಕನ್ನಲಿಂಗೇಶ್ವರ,ಬಸವೇಶ್ವರ ದೇವರು ಹಾಗೂ ಹಟ್ಟಿ,ಹರ‍್ಯಾಳ,ಭೋಸಗಾ ಗ್ರಾಮಗಳ ಪಲ್ಲಕ್ಕಿಗಳ ಆಗಮನವಾಗುವುದು.ಮಿರಗಿ ಗ್ರಾಮದ ಎಲ್ಲ ದೇವರ ಪಲ್ಲಕ್ಕಿಗಳೊಂದಿಗೆ ಭೀಮಾನದಿಯ ದಂಡೆಯ ಮೇಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ತೆರಳಿ,ಸಂಜೆ ಭೀಮಾನದಿ ಕೂಡಲದಲ್ಲಿ ದೇವರ ನುಡಿಗಳು ಜರುಗುವವು.ಸಂಜೆ ೯ ಗಂಟೆಗೆ ಗ್ರಾಮದ ಮಹಾದ್ವಾರದ ಮುಂದೆ ಮದ್ದು ಸುಡುವ ಕಾರ್ಯಕ್ರಮ,ನಂತರ ನಾಟಕ ಪ್ರದರ್ಶನ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.