ಗಂದಿಗವಾಡದಲ್ಲಿ ಪಜಾ, ಪಪಂ ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಚಾಲನೆ

ಯುವ ಭಾರತ ಸುದ್ದಿ ಇಟಗಿ :
ಗಂದಿಗವಾಡ ಗ್ರಾಮದಲ್ಲಿ ಬಹುದಿನಗಳ ಬೇಡಿಕೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಚಾಲನೆ ನೀಡಿದರು.
ಶಾಸಕಿ ಅಂಜಲಿ ನಿಂಬಾಳ್ಕರ್ ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನತೆಗೆ ಸ್ಮಶಾನಕ್ಕೆ ಹೋಗುವ ರಸ್ತೆ ಹದಗೆಟ್ಟಿದ್ದರಿಂದ ತುಂಬಾ ತೊಂದರೆಯಾಗುತ್ತಿತ್ತು. ರಾತ್ರಿ ಸಮಯದಲ್ಲೂ ಅಂತ್ಯಕ್ರಿಯೆಗೆ ಹೋಗಲು ಕಷ್ಟಪಡಬೇಕಾಗಿತ್ತು. ೪೭ ಲಕ್ಷ ೬೩ ಸಾವಿರ ವೆಚ್ಚದ ಡಾಂಬರೀಕರಣ ಕಾಮಗಾರಿ ಇದಾಗಿದೆ. ತಿಗಡೊಳ್ಳಿ-ಗಂದಿಗವಾಡ ರಸ್ತೆ ಅಭಿವೃದ್ಧಿಗೊಂಡಿದೆ. ಅಂಗವಾಡಿ ಕಟ್ಟಡ, ಶಾಲಾ ಕೊಠಡಿ, ಸೇರಿದಂತೆ ನಾಲ್ಕರಿಂದ ಐದು ಕೋಟಿ ಮೊತ್ತದಲ್ಲಿ ಈ ಗ್ರಾಮಕ್ಕೆ ನೀಡಿದ್ದೇನೆ ಎಂದರು.
ಗ್ರಾಪಂ ಅಧ್ಯಕ್ಷೆ ಮಲ್ಲವ್ವ ನಾಯ್ಕರ, ಜಗದೀಶ ಮೂಲಿಮನಿ, ರುದ್ರಪ್ಪ ದೇಶನೂರ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
YuvaBharataha Latest Kannada News