Breaking News

ಮೋದಿ ಡಿಗ್ರಿ : ನಿನ್ನಂಥ 10 ಜನ್ರಿಗೆ ಬುದ್ಧಿ ಕಲಿಸ್ತಾನೆ ಮೋದಿ ಎಂದ ಮಹಾತಾಯಿ !

Spread the love

ಮೋದಿ ಡಿಗ್ರಿ : ನಿನ್ನಂಥ 10 ಜನ್ರಿಗೆ ಬುದ್ಧಿ ಕಲಿಸ್ತಾನೆ ಮೋದಿ ಎಂದ ಮಹಾತಾಯಿ !

ಯುವ ಭಾರತ ಸುದ್ದಿ ದೆಹಲಿ :
ಪ್ರಧಾನಿ ನರೇಂದ್ರ ಮೋದಿ ಅವರ ಪದವಿಯನ್ನು ಪ್ರಶ್ನೆ ಮಾಡಿದ್ದ ವ್ಯಕ್ತಿಗಳಿಗೆ ಬಾಲಿವುಡ್‌ನ ಹಿರಿಯ ನಟ ಅನುಪಮ್‌ ಖೇರ್‌ ಅವರ ತಾಯಿ ದುಲ್ಹಾರಿ ಖೇರ್‌ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅವರು ನೀಡಿದ ಉತ್ತರ ಈಗ ಮೋದಿ ವಿರೋಧಿಗಳಿಗೆ ಬಲವಾದ ಏಟು ನೀಡಿದಂತಿದೆ.

ಪ್ರಧಾನಿ ಮೋದಿ ಅವರ ಡಿಗ್ರಿ ಸರ್ಟಿಫಿಕೇಟ್‌ಅನ್ನು ನೀಡೋಕೆ ಸಾಧ್ಯವಿಲ್ಲ ಎಂದು ಗುಜರಾತ್‌ ಹೈಕೋರ್ಟ್‌ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಹೇಳಿದ್ದಲ್ಲದೆ, 25 ಸಾವಿರ ರೂಪಾಯಿ ದಂಡವನ್ನೂ ವಿಧಿಸಿತ್ತು. ಅದರ ಬೆನ್ನಲ್ಲಿಯೇ ಪ್ರಧಾನಿ ಮೋದಿಯ ಡಿಗ್ರಿ ಕುರಿತಾಗಿ ಮತ್ತಷ್ಟು ಚರ್ಚೆಗಳು ಆರಂಭವಾಗಿದೆ. ಅದರ ನಡುವೆ ಏಪ್ರಿಲ್‌ 2 ರಂದು ಮತ್ತೊಂದು ಸುತ್ತಿನ ಆರೋಪವನ್ನು ಮಾಡಿದ್ದ ಆಮ್‌ ಆದ್ಮಿ ಪಾರ್ಟಿ, ಹಾಗೇನಾದರೂ ಪ್ರಧಾನಿ ಮೋದಿ ಅವರ ಡಿಗ್ರಿಯ ಬಗ್ಗೆ ತನಿಖೆ ಮಾಡಿದರೆ, ಅದು ನಕಲಿ ಆಗಿರುವುದು ಖಂಡಿತಾ ಎಂದು ಹೇಳಿದ್ದಾರೆ. ಇದರ ನಡುವೆ ಅನುಪಮ್‌ ಖೇರ್‌ ಅವರ ತಾಯಿಯ ರಿಯಾಕ್ಷನ್‌ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಅನುಪಮ್‌ ಖೇರ್‌ ಸಾಮಾನ್ಯವಾಗಿ ತಮ್ಮ ತಾಯಿಯ ತಮಾಷೆಯ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡತ್ತಲೇ ಇರುತ್ತಾರೆ. ತಾಯಿಗೆ ಪ್ರಸ್ತುತ ಚರ್ಚೆಯಲ್ಲಿರುವ ಕೆಲವೊಂದು ವಿಚಾರಗಳ ಬಗ್ಗೆ ಪ್ರಶ್ನೆ ಮಾಡಿ ಅವರ ಮುಕ್ತ ಅಭಿಪ್ರಾಯವನ್ನು ಶೇರ್‌ ಮಾಡಿಕೊಳ್ಳುತ್ತಾರೆ.

ಅದೇ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಡಿಗ್ರಿ ಬಗ್ಗೆ ಇತ್ತೀಚೆಗೆ ಬಹಳ ಚರ್ಚೆ ಆಗುತ್ತಿದೆಯಲ್ಲ ಎಂದು ತಾಯಿ ದುಲ್ಹಾರಿ ಅವರಿಗೆ ರಾಜ್‌ ಖೇರ್‌ (ಸಹೋದರ) ಕೇಳಿದ್ದೇ ತಡ ಅವರ ಖಡಕ್‌ ಉತ್ತರ ಕೇಳಿ ಶಾಕ್‌ ಆಗಿದ್ದಾರೆ. ಮೋದಿ ಶಿಕ್ಷಿತನಲ್ಲ ಎಂದು ಕೆಲವರು ಹೇಳುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ, ‘ಹಾಗಿದ್ದರೆ ನೀನು ಹೋಗಿ ಅವರಿಗೆ ಕಲಿಸು. ನಿನ್ನಂಥ 10 ಜನ್ರಿಗೆ ಬುದ್ಧಿ ಕಲಿಸ್ತಾನೆ ಮೋದಿ. ಅವರು ಎಷ್ಟೆಲ್ಲಾ ಕೆಲಸ ಮಾಡ್ತಿದ್ದಾರೆ. ಸುಖಾಸುಮ್ಮನೆ ಕೆಲಸ ಇಲ್ಲದೆ ಕುಳಿತವರೆಲ್ಲ, ಮೋದಿಗೆ ಹೆಚ್ಚು ಕಲಿತವನಲ್ಲ ಎನ್ನುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಿಗೂ ಬುದ್ಧಿಯೇ ಇಲ್ಲ, ಆದ್ದರಿಂದ ಅಧ್ಯಯನಕ್ಕಿಂತ ಬುದ್ದಿ ಹೆಚ್ಚು ಮುಖ್ಯ’ ಎಂದು ಹೇಳಿದ್ದಾರೆ.

ಅನುಪಮ್ ಖೇರ್ ಅವರಂತೆ ಅವರ ತಾಯಿ ದುಲಾರಿ ಕೂಡ ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಸಾಮಾಜಿಕ ಮೀಡಿಯಾದಲ್ಲಿ ಅವರ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಕಳೆದ ವರ್ಷ ಜನವರಿ 26 ರಂದು, ಅನುಪಮ್ ಖೇರ್ ಅವರು ಗಣರಾಜ್ಯೋತ್ಸವದ ಪರೇಡ್ ವೀಕ್ಷಿಸಿದ ನಂತರ ಅವರ ತಾಯಿ ದುಲ್ಹಾರಿಗೆ ಮೋದಿಯನ್ನು ಆಶೀರ್ವದಿಸಿದ ವೀಡಿಯೊವನ್ನು ಹಂಚಿಕೊಂಡರು ಮತ್ತು ಅವರು ಮತ್ತೆ ಗೆಲ್ಲುತ್ತಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಒಮ್ಮೆ ಅನುಪಮ್ ಖೇರ್ ಅವರ ತಾಯಿ ದುಲಾರಿ ಅವರು ಪ್ರಧಾನಿ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ, ಮೋದಿ ಅವರಿಗೂ ಧನ್ಯವಾದ ಸಲ್ಲಿಸಿದ್ದರು.

माताश्री दुलारी का प्रधानमंत्री @narendramodi जी की पढ़ाई पर जानबूझकर उठते बेवक़ूफ़ाना सवालो का सटीक जवाब।जय हो।😂👏😎 #DulariRocks pic.twitter.com/PitXGW20Gp

— Anupam Kher (@AnupamPKher) April 7, 2023

ಕೋವಿಡ್‌ಗೂ ತುತ್ತಾಗಿದ್ದ ದುಲ್ಹಾರಿ ಖೇರ್‌, ಆ ಸಮಯದಲ್ಲಿ ಬದುಕುವುದೇ ಅನುಮಾನ ಎನ್ನುವ ಸ್ಥಿತಿಗೆ ಹೋಗಿದ್ದರು. ಈ ವೇಳೆ ತಾಯಿಯ ಆರೋಗ್ಯದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಅನುಮಪ್‌ ಖೇರ್‌ ಹಂಚಿಕೊಳ್ಳುತ್ತಿದ್ದರು. 82ನೇ ವಯಸ್ಸಿನಲ್ಲಿ ದುಲ್ಹಾರಿ ಖೇರ್‌, ಕೋವಿಡ್‌ ವಿರುದ್ಧ ಗೆದ್ದಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

13 + 12 =