ಮೂಡಲಗಿ: ಕೋವಿಡ್ ಬಂದಿದ್ದೆ ಬಂದಿದ್ದು, ಸರ್ಕಾರ ನಿರ್ವಹಣೆ ಜೊತೆಗೆ ಒಂದಿಲ್ಲೊಂದು ಎಡವಟ್ಟು ಮಾಡುತ್ತಲೇ ಬಂದಿದೆ. ಸರಕಾರದ ತಂತ್ರಾಂಶದಲ್ಲಿ ಎಡವಟ್ಟು ಮಾಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
ಹೌದು ಲಸಿಕೆ ಪಡೆಯದಿದ್ದರೂ ಸರ್ಟಿಫಿಕೇಟ್ ದೊರೆಯುತ್ತದೆ. ಕೆಲವರಿಗೆ ಕೋವಿಡ್ ಲಸಿಕೆ ಪಡೆದರೂ ಪ್ರಮಾಣಪತ್ರ ಬಾರದಿರುವ ಪ್ರಕರಣಗಳಿವೆ. ಆದರೆ ಇಲ್ಲಿ ವ್ಯಕ್ತಿಯೊಬ್ಬರು ಇನ್ನೂ ಲಸಿಕೆಯನ್ನೇ ಹಾಕಿಸಿಕೊಂಡಿಲ್ಲ. ಆಗಲೇ ಅವರ ಹೆಸರಿನಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರ ಬಂದಿದೆ.
2ನೇ ಡೋಸ್ ಪಡೆಯದೆ ಸಂದೇಶ ನೋಡಿ ಶಾಕ್ ಆಗಿದೆ.
ಮೂಡಲಗಿ ಪಟ್ಟಣದ ಗಾಂಧಿ ಚೌಕ ನಿವಾಸಿ ಈಶ್ವರ ಢವಳೇಶ್ವರ ಜುಲೈ 30 2021ಕ್ಕೆ ಲಸಿಕಾ ಕೇಂದ್ರದಲ್ಲಿ ಮೊದಲ ಡೋಸ್ ಲಸಿಕೆ ಪಡೆದಿದ್ದರು. 2ನೇ ಡೋಸ್ ಅನಿವಾರ್ಯ ಕಾರಣಗಳಿಂದಾಗಿ ಹೋಗಲು ಸಾಧ್ಯವಾಗಿಲ್ಲ.
ಅದಕ್ಕಾಗಿ ಶುಕ್ರವಾರ ಎರಡನೇ ಡೋಸ್ ಅವರ ಮೊಬೈಲ್ ಲ್ಲಿಯೇ ಪ್ರಮಾಣ ಪತ್ರ ಡೌನ್ಲೋಡ್ ಮಾಡಿ ತೋರಿಸಿದ್ದಾರೆ.
ಇದರಿಂದ ಈಶ್ವರ ಅವರಿಗೆ ಆಶ್ಚರ್ಯವಾಗಿದೆ. ನಾನು ಇನ್ನೂ ಎರಡನೇ ಡೋಸ್ ತೆಗೆದುಕೊಂಡಿಲ್ಲ. ನಂತರ ಈಶ್ವರ ಎರಡು ಡೋಸ್ ಹಾಕಿಸಿಕೊಂಡಿದ್ದರೇ ನಾನೇಕೆ ಮತ್ತೆ ಲಸಿಕೆ ತೆಗೆದುಕೊಳ್ಳಲು ಬರುತ್ತಿದ್ದೆ. ಸರಕಾರವಾಗಲಿ, ವೈದ್ಯರಾಗಲಿ ಮೂರನೇ ಡೋಸ್ಗೆ ಅವಕಾಶ ನೀಡಿದ್ದಾರೆಯೇ..? ನಾನೇಕೆ ಹೆಚ್ಚಿನ ಡೋಸ್ ಪಡೆಯಲಿ? ಎಂದು ಪ್ರಶ್ನಿಸಿದ್ದಾರೆ.