ಮುರಗೋಡ : ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ : ಕ್ರಿಯಾಶಿಲತೆ, ಪ್ರಾಮಾಣಿಕ ಕಾರ್ಯಕ್ಕೆ
ಜನಮನ್ನಣೆ
ಮುರಗೋಡ:
ಬದುಕಿನಲ್ಲಿ ಕ್ರಿಯಾಶೀಲತೆ, ಸೇವಾ ಮನೋಭಾವ, ಜನ ಹಿತ ಬಯಸುವ ಗುಣ ಬೆಳೆಸಿಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿಭಾಯಿಸಿದಲ್ಲಿ ಜನಮನ್ನಣೆ ಗಳಿಸಲು ಸಾಧ್ಯ ಎಂದು ಡಾ.ಮಹಾಂತೇಶ ಹೂಗಾರ ಹೇಳಿದರು.
ಸ್ಥಳೀಯ ಚಿದಂಬರ ನಗರದ ದುರದುಂಡೀಶ್ವರಮಠ
ಹಾಲ್‌ನಲ್ಲಿ ಅಮ್ಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಶ್ರಾವಣ ಮಾಸದ ಪಾದಯಾತ್ರಾ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಎಸ್‌ಎನ್‌ವಿಬಿಎಸ್ ಪ್ರೌಢ ಶಾಲೆಯಲ್ಲಿ ಮೂವತೈದು ವರ್ಷ ಕಾರ್ಯ
ನಿರ್ವಹಿಸಿದ್ದ ಚುಟುಕು ಕವಿ, ಅತ್ಯುತ್ತಮ ಶಿಕ್ಷಕ, ಕರುನಾಡ ಕಂದ, ಚುಟುಕು ಶ್ರೀ ಪ್ರಶಸ್ತಿ ಪುರಷ್ಕೃತ ಶಿವಪ್ರಸಾದ ಹುಲೆಪ್ಪನವರಮಠ ದಂಪತಿ ನಿವೃತ್ತಿ
ಹೊಂದಿದ್ದರ ಪ್ರಯುಕ್ತ ಸನ್ಮಾನಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದ ವೃತ್ತಿ ಜೀವನದಲ್ಲಿ ಒಳ್ಳೆಯ ನಡೆ-
ನುಡಿಯೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಪ್ರಾಮಾಣಿಕಸೇವೆ ಸಲ್ಲಿಸಿ ಸಾಹಿತ್ಯ ಕ್ಷೇತ್ರದಲ್ಲಿ ಹತ್ತು ಹಲವು ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ನಿವೃತ್ ಶಿಕ್ಷಕ ಶಿವಪ್ರಸಾದ ಹುಲೆಪ್ಪನವರಮಠ ಅವರ ವಿಶ್ರಾಂತ ಜೀವನ ಸುಖಕರವಾಗಿರಲಿ
ಎಂದರು.
ಸಾನಿಧ್ಯ ವಹಿಸಿದ್ದ ಹಿರೇಮಠ ಶ್ರೀ ಗುರುಮಹಾಂತೇಶ ಸ್ವಾಮೀಜಿ, ಡಾ. ಮಹಾಂತೇಶ ಬೆಂಡಿಗೇರಿ, ಡಾ. ಎನ್.ಎಂ. ಪಾಟೀಲ, ಸೀಮಾ ಹೂಗಾರ,
ಬಾಬು ಪಾಟೀಲ ಮಾತನಾಡಿದರು. ಮಂಜುಳಾ ಬೆಂಡಿಗೇರಿ, ಮಹಾಂತೇಶ ಡಿಮಠ, ಸರೋಜಾದೇವಿ
ಡಿಮಠ, ಪಾರ್ವತಿ ಹುಲೆಪ್ಪನವರಮಠ, ಕಲಾ ಶಿಕ್ಷಕ
ಮಹಾಂತೇಶ ಕಾರಗಿ, ಅಶೋಕ ಚಿನಗುಂಡಿ, ಮಹಾಂತೇಶ ಸೊಗಲದ, ಬಸವರಾಜ ಪೂಜಾರ, ರಾಜು ಹೆದ್ದೂರಶೆಟ್ಟಿ ಮತ್ತಿತರರು ಇದ್ದರು. ಬಾಬು ಸಣಕಲ್ ನಿರೂಪಿಸಿ ವಂದಿಸಿದರು.ಇನ್ನಿತರ ಹಲವು ಪ್ರತಿಭಾವಂತರನ್ನು ಸನ್ಮಾನಿಸಲಾಯಿತು.