ಮುರಗೋಡ : ಜೂ. 29 ಕ್ಕೆ ಶ್ರೀ ಸದ್ಗುರು ಸಂತ ಬಾಳುಮಾಮಾ ಜಾತ್ರೆ ಆರಂಭ
ಮುರಗೋಡ:
ಸಮೀಪದ ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ಜಾತ್ರೆ ಜೂ.29 ಹಾಗೂ 3೦ ರಂದು ವಿಜೃಂಭಣೆಯಿಂದ ನೆರವೇರಲಿದೆ.
ಜೂ. 29 ರಂದು ಬೆಳಗ್ಗೆ ಪೂಜೆ, ನಾಮಜಪ, ಸಂಜೆ ಸುತ್ತಮುತ್ತಲಿನ ನಾನಾ ಗ್ರಾಮಗಳ ಡೊಳ್ಳಿನ ವಾಲಗ,
ದೇವರ ಪಲ್ಲಕ್ಕಿಗಳು ಕೂಡುವುದು. ರಾತ್ರಿ ವಿವಿಧ
ಮನರಂಜನಾ ಕಾರ್ಯಕ್ರಮ ನಡೆಯುವವು.
ಜೂ.3೦ ರಂದು ಬೆಳಗ್ಗೆ ಮಹಾ ರುದ್ರಾಭಿಷೇಕ, ಮಂತ್ರಪಠಣ, ವಿಶೇಷ ಪೂಜೆ, ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ, ನೈವೇದ್ಯ, ತೀರ್ಥಪ್ರಸಾದ ವಿತರಣೆ, ನಂತರ ನಾನಾ ಗ್ರಾಮಗಳ ಪಲ್ಲಕ್ಕಿಗಳ ಉತ್ಸವ ಮೆರವಣಿಗೆ, ಡೊಳ್ಳು
ಕುಣಿತ, ಭಂಡಾರ ಎರಚಾಟ, ಸುಮಂಗಲೆಯರ ಆರತಿ, ಕುಂಭ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ
ಸಂಚರಿಸುವುದು. ಮಧ್ಯಾಹ್ನ ಮಹಾಪ್ರಸಾದ ವಿತರಣೆ, ನಂತರ ಸೇವೆ ಸಲ್ಲಿಸಿದ ಭಕ್ತರ ಸನ್ಮಾನ ಸೇರಿದಂತೆ ನಾನಾ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮ ನಡೆಯಲಿವೆ. ತವಗ ಶ್ರೀ ಬಾಳಯ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಗಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಸೂರಣ್ಣವರ, ರಂಗ ಕಲಾವಿದ ಯಲ್ಲಪ್ಪ ನಾಯ್ಕರ, ಗ್ರಾ.ಪಂ. ಸದಸ್ಯೆ ಮಂಜುಳಾ ನಾಯ್ಕರ ನೇತೃತ್ವ ವಹಿಸುವರು. ಪಿಡಿಒ ಜಿ.ಎಂ. ಗಿರೆನ್ನವರ, ಮೋಹನಗೌಡ ಪಾಟೀಲ, ರಾಯಪ್ಪ
ಹುಣಶೀಕಟ್ಟಿ, ಸೋಮಪ್ಪ ಮಳಗಲಿ, ಈರಪ್ಪ ಉಣ್ಣಿ, ಬಾಳೇಶ ಮೆಟಗುಪ್ಪಿ, ಸಂತೋಷ ಕಾರಿ, ಕಾರ್ತಿಕ ಪಾಟೀಲ, ಫಕೀರಗೌಡ ಮುದಿಗೌಡರ, ಶಿವು ದಳವಾಯಿ, ಗೋಪಾಲ ಮಲಕಾಜನವರ, ರಾಜು
ಮರಮಣ್ಣವರ ಹಾಗೂ ನಾನಾ ಶ್ರೀಗಳು, ಗಣ್ಯರು,
ಜನಪ್ರತಿನಿಗಳು ಪಾಲ್ಗೊಳ್ಳಲಿದ್ದಾರೆ.