ಯುವ ಭಾರತ ಸುದ್ದಿ, ಗೋಕಾಕ: ಪಿಂಜಾರ ನದಾಫ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿ ಇಲ್ಲಿನ ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘ ತಾಲೂಕಾ ಘಟಕದ ವತಿಯಿಂದ ಮಂಗಳವಾರದAದು ತಹಶೀಲ್ದಾರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ನದಾಫ ಪಿಂಜಾರ ಜನಾಂಗವು ಶೈಕ್ಷಣಿಕವಾಗಿ, ಆರ್ಥಿಕ , ಔದ್ಯೋಗಿಕ, ಸಮಾಜಿಕವಾಗಿ ಅತ್ಯಂತ ಹಿಂದುಳಿದಿದೆ. ಈ ಜನಾಂಗದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮದ ಬೇಡಿಕೆಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು . ನಮ್ಮ ಬೇಡಿಕೆ ಇಡೆರಿರುವುದಿಲ್ಲ ಈ ಜನಾಂಗಕ್ಕೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿ ಸಮುದಾಯದ ಅಭಿವೃದ್ಧಿ ಪಡಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಂಜಾರ ನಧಾಪ ಸಂಘದ ತಾಲೂಕಾಧ್ಯಕ್ಷ ಮೀರಾಸಾಬ ನದಾಫÀ, ಉಪಾಧ್ಯಕ್ಷ ಗಜಬರ ನದಾಫ, ಮುಸ್ತಾಕ ನದಾಫ, ಬಾಬರ ಶೇಖ್, ಪೀರಸಾಬ ಲೋಕಾಪೂರ, ಶಬ್ಬೀರ ಚಿನ್ನಾಪೂರ, ಜಾಕೀರ ನದಾಫ, ಗೌಸ ನದಾಫ, ಯೂನುಸ್ ನದಾಫ, ಮಹ್ಮದ ನದಾಫ, ನೂರಹ್ಮದ ನದಾಫ, ಹುಸೇನಸಾಬ ನದಾಫ, ಮಹ್ಮದಲಿ ನದಾಫ, ನಜೀರಹ್ಮದ ನದಾಫ, ಹಸನಸಾಬ ನದಾಫ, ಮನ್ಸೂರ ನದಾಫ, ಗೌಸ ನದಾಫ. ಕಾಶಿಮ್ ನದಾಫ, ಸನೀಸ ನದಾಫ ಸೇರಿದಂತೆ ಅನೇಕರು ಇದ್ದರು.
