ನಿಪ್ಪಾಣಿ ಪೊಲೀಸರ ಕಾರ್ಯಾಚರಣೆ : ಇಬ್ಬರು ಕಳ್ಳರ ಬಂಧನ, 16.10 ಲಕ್ಷ ಮೌಲ್ಯದ 23 ದ್ವಿಚಕ್ರ ವಾಹನಗಳ ವಶ
ಯುವ ಭಾರತ ಸುದ್ದಿ ಬೆಳಗಾವಿ :
ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ನಿಪ್ಪಾಣಿ ಶಹರ ಪೊಲೀಸ್ ಠಾಣೆಯ ಪೊಲೀಸರು ಬಂಧಿತ ಖದೀಮರಿಂದ ಸುಮಾರು 16.10 ಲಕ್ಷ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
17 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ, ಹೆಚ್ಚುವರಿ ಎಸ್ ಪಿ ಎಂ. ವೇಣುಗೋಪಾಲ, ಚಿಕ್ಕೊಡಿ ಡಿಎಸ್ ಪಿ ಬಸವರಾಜ ಯಲಗಾರ, ನಿಪ್ಪಾಣಿ ಸಿಪಿಐ ಎಸ್.ಸಿ.ಪಾಟೀಲ ಅವರ ಮಾರ್ಗದರ್ಶನದಲ್ಲಿ ನಿಪ್ಪಾಣಿ ಶಹರ ಪಿಎಸ್ ಐ ವಿನೋದ ಪೂಜಾರಿ ಅವರ ನೇತೃತ್ವದಲ್ಲಿ ನಿಪ್ಪಾಣಿ ಶಹರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಎಸ್ ಐ ಎಂ. ಜಿ. ಮುಜಾವರ, ಆರ್.ಜಿ. ದಿವಟಿ, ಪಿ.ಎಂ.ಗಸ್ತಿ, ಎಂ.ಬಿ.ಕಲ್ಯಾಣಿ ಹಾಗೂ ಗಜಾನನ ಬೋವಿ, ಸಲೀಂ ಮುಲ್ಲಾ, ಎಸ್.ಎನ್. ಅಸ್ಕಿ, ಯಾಸೀನ ಮೌಲಾ ಕಳಾವಂತ, ಇವರೊಂದಿಗೆ 17 ರಂದು ನಿಪ್ಪಾಣಿ ಶಹರ ಹದ್ದಿಯ ಶಿರಗುಪ್ಪಿ ರಸ್ತೆಯ ಕ್ರಾಸ್ ಹತ್ತಿರ ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಲಾಯಿತು.
ಬಳಿಕ ಅವರ ಬಳಿ ಇದ್ದ ಒಂದು ಮೋಟಾರ ಸೈಕಲ್‌ನ್ನು ಜಪ್ತ ಮಾಡಿ,
ಹೆಚ್ಚಿನ ತನಿಖೆ ನಡೆಸಲಾಗಿತ್ತು. ಈ ಆರೋಪಿತರು ಧಾರವಾಡ ಜಿಲ್ಲೆಯ ಧಾರವಾಡ ಉಪನಗರ
ಠಾಣಿ-02, ಬೆಳಗಾವಿ ಶಹರ ವ್ಯಾಪ್ತಿಯ ಮಾರ್ಕೇಟ್ ಪೊಲೀಸ್ ಠಾಣೆ 1, ಎಪಿಎಂಸಿ ಪೊಲೀಸ್ ಠಾಣೆ 1,
ಮಾರಿಹಾಳ ಪೊಲೀಸ್ ಠಾಣೆ-4, ಬೆಳಗಾವಿ ಜಿಲ್ಲೆಯ ಸಂಕೇಶ್ವರ ಠಾಣೆ, ಬೈಲಹೊಂಗಲ-1, ನಿಪ್ಪಾಣಿ ಶಹರ
ಪೊಲೀಸ್ ಠಾಣೆ-01 ಹಾಗೂ ಇನ್ನೂ 12 ಮೋಟಾರು ಸೈಕಲುಗಳನ್ನು ಕಳವು ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿರುತ್ತದೆ.
ಇವರಿಂದ ನಿಪ್ಪಾಣಿ ಶಹರ ಪೊಲೀಸ್ ಠಾಣಾ ಗುನ್ನಾ ನಂ.29/2023 ಕಲಂ:379 ಐಪಿಸಿ ಪ್ರಕರಣದಲ್ಲಿ
ಕಳುವಾದ ಒಂದು ಮೋಟರ್ ಸೈಕಲ್ ಹಾಗೂ ಈ ಮೇಲ್ಕಂಡಂತೆ ಇತರ ಕಡೆಗಳಲ್ಲಿ ಸದರಿ ಆರೋಪಿತರು ಕಳ್ಳತನ
ಮಾಡಿರುವ ಇತರ 22 ಮೋಟರ್ ಸೈಕಲ್ ಹೀಗೆ ಒಟ್ಟು ರೂ. 16,10,000/-ಕಿಮ್ಮತ್ತಿನ 23 ಮೋಟರ್
ಸೈಕಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು
ಪ್ರಶಂಶೆ ವ್ಯಕ್ತಪಡಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.