ಮನ ಸೆಳೆದ ಸಾಹಿತ್ಯ ಸಮ್ಮೇಳನ ನುಡಿ ಜಾಥಾ
ಯುವ ಭಾರತ ಸುದ್ದಿ ಬಸವನಬಾಗೇವಾಡಿ : ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಡಿ.೨೫ ರಂದು ನಡೆಯಲಿರುವ ಬಸವನಬಾಗೇವಾಡಿ ತಾಲೂಕಿನ ೯ ನೇ ಕನ್ನಡ ಸಾಹಿತ್ಯ ಸಮ್ಮೇಳನದಂಗವಾಗಿ ಜಾಗೃತಿ ಮೂಡಿಸಲು ಶನಿವಾರ ವಿದ್ಯಾರ್ಥಿಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನುಡಿ ಜಾಥಾ ಜರುಗಿತು.
ನುಡಿ ಜಾಥಾಕ್ಕೆ ಮನಗೂಳಿ ಹಿರೇಮಠದ ಅಭಿನ ಸಂಗನಬಸವ ಶಿವಾಚಾರ್ಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಆರಂಭಗೊಂಡ ನುಡಿ ಜಾಥಾವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಶಾಲೆಗೆ ಆಗಮಿಸಿತು.
ಜಾಥಾದಲ್ಲಿ ಕನ್ನಡ ನುಡಿ ಜಾತ್ರೆಗೆ ಸರ್ವ ಕನ್ನಡ ಬಾಂಧವರು ಭಾಗವಹಿಸಿ, ಸಮ್ಮೇಳನದ ಯಶಸ್ವಿಗೆ ಕೈಜೋಡಿಸಿ, ಕನ್ನಡವನ್ನು ಬೆಳೆಸಿ ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಕನ್ನಡ ನುಡಿ ಜಾತ್ರೆಯ ಜಾಗೃತಿಯನ್ನು ಮೂಡಿಸಲಾಯಿತು.
ಜಾಥಾದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲೂಕು ಕಸಾಪ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ, ಮುಖಂಡರಾದ ಸುಭಾಸಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಸೋಮಪುರ,ವಿಶ್ವನಾಥಗೌಡ ಪಾಟೀಲ, ರಾಜುಗೌಡ ಪಾಟೀಲ,ಜಿ.ವೈ.ನಾಗರಾಳ, ಸಿದ್ರಾಮ ಬಿರಾದಾರ, ಕಸಾಪ ಪದಾಧಿಕಾರಿಗಳಾದ ಪಿ.ಜಿ.ಕುಲಕರ್ಣಿ, ಶಿವು ಮಡಿಕೇಶ್ವರ, ಬಸವರಾಜ ಮೇಟಿ, ಯಮನಪ್ಪ ಮಿಣಜಗಿ, ಪ್ರಭಾಕರ ಖೇಡದ,ಎ.ಎಂ.ಹಳ್ಳೂರ, ವೈ.ಕೆ.ಪತ್ತಾರ,ಕೊಟ್ರೇಶಿ ಹೆಗಡ್ಯಾಳ, ಬಿ.ಎಸ್.ಬಾಗೇವಾಡಿ, ಎಂ.ಎ.ಯಾಳವಾರ, ಬಿ.ವಿ.ಚಕ್ರಮನಿ, ಬಸವರಾಜ ಹಂಚಲಿ, ಸುಮಾ ಗಾಜರೆ,ವೈ.ಎನ್.ಬೇವೂರ, ಬಸವರಾಜ ನಾಯ್ಕೋಡಿ ಸೇರಿದಂತೆ ಇತರರು ಭಾಗವಹಿಸಿದ್ದರು.