ಮೂಡಲಗಿ : ಮೂಡಲಗಿಯಿಂದ ಗುರ್ಲಾಪೂರ ವರಗೆ ರಸ್ತೆ ಅಭಿವೃದ್ಧಿ ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ದಾಸಪ್ಪ ನಾಯಕ್ ಅವರು ಚಾಲನೆ ನೀಡಿದರು. ಇಂದು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪುರಸಭೆಯ SFC ವಿಶೇಷ ಅನುದಾನದ ಅಡಿಯಲ್ಲಿ 45 ಲಕ್ಷ ರೂ, ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಹಾಗೂ ಅತಿಶೀಘ್ರದಲ್ಲೇ ಈ ಅಭಿವೃದ್ಧಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. …
Read More »ಕಂದು ಬಣ್ಣಕ್ಕೆ ತಿರುಗಿದ ಬೆಳಗಾವಿ ಸುವರ್ಣ ವಿಧಾನಸೌಧ
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಕಟ್ಟಡದ ಹೊರ ಭಾಗದಲ್ಲಿ ಪಾಚಿ ಕಟ್ಟಿಕೊಂಡಿದ್ದು, ಕಂದು ಬಣ್ಣಕ್ಕೆ ತಿರುಗಿದೆ. ಇದು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆಯೇ ಎನ್ನುವ ಅನುಮಾನ ಮೂಡುವುದಕ್ಕೆ ಕಾರಣವಾಗಿದೆ. ಸತತ ಮಳೆಯ ಕಾರಣದಿಂದಾಗಿ ಸೌಧದ ಕಂಬಗಳು, ಚಾವಣಿ, ಹೊರಗಿನ ಗೋಡೆಗಳಲ್ಲಿ ಪಾಚಿ ಬೆಳೆಯುತ್ತಿದೆ. ಸೌಧವು ಸಹಜ ಸೌಂದರ್ಯ ಕಳೆದುಕೊಂಡಿದೆ. ಕಾಲಕಾಲಕ್ಕೆ ನಿರ್ವಹಣೆಯಲ್ಲಿ ಕೊರತೆ ಎದ್ದು ಕಾಣುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ‘ಬೆಂಗಳೂರಿನ ವಿಧಾನಸೌಧದಲ್ಲಿರುವ ಸಚಿವಾಲಯದ ಪ್ರಮುಖ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು. …
Read More »ಎರಡು ಕಡೆಯ ಕೇಸ್ ವಾಪಾಸ್ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ: ರಮೇಶ್ ಜಾರಕಿಹೊಳಿ
ಉಭಯ ತಂಡಗಳ ವಿರುದ್ಧ ಕೇಸ್ ದಾಖಲಾಗಿರುವ ಬಗ್ಗೆ ಮಾತನಾಡಿದ ಸಚಿವರು, ಪ್ರಕರಣ ವಾಪಸ್ ಬಗ್ಗೆ ಸಿಎಂ ಜತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಎರಡು ಕಡೆಯವರ ಪ್ರಕರಣ ವಾಪಸ್ ಪಡೆಯಲು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಮೂರ್ತಿ ಅಧಿಕೃತ ಮಾಡೋ ವಿಚಾರದ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಯುವ ಭಾರತ ಸುದ್ದಿ, ಬೆಳಗಾವಿ: ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿಯಲ್ಲಿ ಹೇಳಿಕೆ …
Read More »ಕಾರ್ಮಿಕರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ..!!
ಕಾರ್ಮಿಕರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ..!! ಯುವ ಭಾರತ ಸುದ್ದಿ, ಗೋಕಾಕ್: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳು ಸರಿಯಾಗಿ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಜಿಪ ಸದಸ್ಯ ಟಿ ಆರ್ ಕಾಗಲ ಕರೆ ನೀಡಿದರು. ರವಿವಾರಂದು ಸಚಿವ ರಮೇಶ ಜಾರಕಿಹೊಳಿ ಕಚೇರಿಯಲ್ಲಿ ಕಾರ್ಮಿಕ ಇಲಾಖೆಯಿಂದ ದಿನನಿತ್ಯ ವಸ್ತು ಆಹಾರ ಕಿಟ್ ವಿತರಿಸಿ ಮಾತನಾಡಿದರು. ನಗರದಲ್ಲಿ ಸುಮಾರು 500 ನೊಂದಾಯಿತ ಕಾರ್ಮಿಕರ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು. …
Read More »ಬಿಜೆಪಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ..!!
ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಸಂಸದ ಈರಣ್ಣಾ ಕಡಾಡಿ ಮಾರ್ಗದರ್ಶನ ಬಿಜೆಪಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಮಾಡಿದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ. ಯುವ ಭಾರತ ಸುದ್ದಿ, ಗೋಕಾಕ್ : ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರ ಮಾರ್ಗದರ್ಶನದಲ್ಲಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನಾಗಿ ಪಕ್ಷದ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಸಂಜಯ ಪಾಟೀಲ …
Read More »ಬೆಳಗಾವಿ ಜಿಲ್ಲೆಗೆ ಹದಿನೆಂಟು ನೀರಾವರಿ ಯೋಜನೆಗಳು – ಡಿಪಿಆರ್ ತಯಾರಿಸಲು ಅನುಮತಿಸಿದ- ಸಚಿವ ರಮೇಶ್ ಜಾರಕಿಹೊಳಿ..!!
ಬೆಳಗಾವಿ ಜಿಲ್ಲೆಗೆ ಹದಿನೆಂಟು ನೀರಾವರಿ ಯೋಜನೆಗಳು – ಡಿಪಿಆರ್ ತಯಾರಿಸಲು ಅನುಮತಿಸಿದ- ಸಚಿವ ರಮೇಶ್ ಜಾರಕಿಹೊಳಿ..!! ಯುವ ಭಾರತ ಸುದ್ದಿ, ಬೆಳಗಾವಿ ಜಿಲ್ಲೆಗೆ 11 ಹೊಸ ಏತ ನೀರಾವರಿ ಯೋಜನೆ ಗಳನ್ನು ಜಾರಿಗೊಳಿಸುವ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರ ಪ್ರಸ್ತಾಪಗಳಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಕರ್ನಾಟಕ ನೀರಾವರಿ ನಿಗಮ ನಿಯಮಿತವು ಅನುಮತಿ ನೀಡಿದೆ. ನಿನ್ನೆ ನಡೆದ ನಿಗಮದ ಅಂದಾಜು ಪರಿಶೀಲನಾ ಸಭೆಯಲ್ಲಿ …
Read More »ಸಂಗೊಳ್ಳಿ ರಾಯಣ್ಣ ಸಮಾಧಿಗೆ ಭೇಟಿ–ಸಚಿವರಾದ ರಮೇಶ ಜಾರಕಿಹೊಳಿ ಮತ್ತು ಕೆ.ಎಸ. ಈಶ್ವರಪ್ಪ..!!
ಸಂಗೊಳ್ಳಿ ರಾಯಣ್ಣ ಸಮಾಧಿಗೆ ಭೇಟಿ–ಸಚಿವರಾದ ರಮೇಶ ಜಾರಕಿಹೊಳಿ ಮತ್ತು ಕೆ.ಎಸ. ಈಶ್ವರಪ್ಪ..!! ಯುವ ಭಾರತ ಸುದ್ದಿ, ಖಾನಾಪುರ: ತಾಲೂಕಿನ ನಂದಗಡ ಕ್ಕೆ ಭೇಟಿ ನೀಡಿದ ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಈಶ್ವರಪ್ಪ. ಸಂಗೊಳ್ಳಿ ರಾಯಣ್ಣ ಗಲ್ಲಿಗೇರಿಸಿದ ಆಲದ ಮರವಿರುವ ಸ್ಥಳಕ್ಕೆ ಭೇಟಿ. ಸಂಗೊಳ್ಳಿ ರಾಯಣ್ಣ ಗಲ್ಲಿಗೇರಿಸಿದ ಸ್ಥಳದಲ್ಲಿರುವ ಹನುಮಂತನ ಮೂರ್ತಿಗೆ ಮತ್ತು ನಂದಗಡ ಗ್ರಾಮದ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸಚಿವರಿಂದ ಮಾಲಾರ್ಪಣೆ. ಬಳಿಕ …
Read More »ಶಿವಾಜಿ ಮತ್ತು ರಾಯಣ್ಣನನ್ನು ಅಪ್ಪಿಕೊಂಡ ಬಿಜೆಪಿ ಸರ್ಕಾರ..!!
ಶಿವಾಜಿ ಮತ್ತು ರಾಯಣ್ಣನನ್ನು ಅಪ್ಪಿಕೊಂಡ ಬಿಜೆಪಿ ಸರ್ಕಾರ..!! ಅಭಿಮಾನಿಗಳ ಜಯಘೋಶಗಳ ನಡುವೆ ಮೂವರು ಜನ ಸಚಿವರು ಇಬ್ಬರು ಮಹಾಪುರುಷರಿಗೆ ಗೌರವ ಸಮರ್ಪಿಸಿದರು. ಯುವ ಭಾರತ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರದ ಪಕ್ಕದಲ್ಲೇ ಇರುವ ಪೀರಣವಾಡಿ ಗ್ರಾಮದ ಮೂರ್ತಿ ವಿವಾದ ಇತ್ಯರ್ಥಗೊಳ್ಳುತ್ತಿದ್ದಂತೆಯೇ ಮಂತ್ರಿಗಳ ದಂಡು ಪೀರನವಾಡಿಗೆ ದೌಡಾಯಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ,ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ,ಅಬಕಾರಿ ಸಚಿವ ಎನ್ ನಾಗೇಶ ಅವರು ಇಂದು ಪೀರನವಾಡಿ ಗ್ರಾಮಕ್ಕೆ …
Read More »ಡಿಸಿ ಎಂ.ಜಿ.ಹಿರೇಮಠ, ಎಡಿಜಿಪಿ ಅಮರಕುಮಾರ್ ನೇತೃತ್ವದಲ್ಲಿ ಸಭೆಯಲ್ಲಿ ಪೀರನವಾಡಿ ವಿವಾದಕ್ಕೆ ತೆರೆ ..!!
ಡಿಸಿ ಎಂ.ಜಿ.ಹಿರೇಮಠ, ಎಡಿಜಿಪಿ ಅಮರಕುಮಾರ್ ನೇತೃತ್ವದಲ್ಲಿ ಸಭೆಯಲ್ಲಿ ಪೀರನವಾಡಿ ವಿವಾದಕ್ಕೆ ಸೌಹಾರ್ದತೆಯ ತೆರೆ ಬಿದ್ದಿದೆ… ಎಡಿಜಿಪಿ ಅಮರಕುಮಾರ್ ಪಾಂಡೆ ನಡೆಸಿದ, ಸಂಧಾನಸಭೆ ಸಕ್ಸಸ್..!! ಯುವ ಭಾರತ ಸುದ್ದಿ, ಬೆಳಗಾವಿ: ಜಿಲ್ಲೆಯ ಪೀರನವಾಡಿ ಗ್ರಾಮದ ಸರ್ಕಲ್ ಬಳಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಈಗ ಅಂತ್ಯಗೊಂಡಿದ್ದು ಎ.ಡಿ.ಜಿ.ಪಿ ಅಮರಕುಮಾರ್ ಪಾಂಡೆ ನೇತೃತ್ವದಲ್ಲಿ ಇಂದು ಬಗೆಹರೆದಿದೆ. ಅಮರಕುಮಾರ್ ಪಾಂಡೆ ಇಂದು ಕನ್ನಡಪರ ಸಂಘನೆಗಳು ಮತ್ತು ಮರಾಠಿ ಸಂಘಟನೆಯ ಮುಖಂಡರ ಮದ್ಯೆ …
Read More »ಮೂವರು ಮಕ್ಕಳಿಗೆ ವಿಷ ೂಣಿಸಿ ತಂದೆ ಆತ್ಮಹತ್ಯೆ.!
ಮೂವರು ಮಕ್ಕಳಿಗೆ ವಿಷ ೂಣಿಸಿ ತಂದೆ ಆತ್ಮಹತ್ಯೆ.! ಯುವ ಭಾರತ ಸುದ್ದಿ, ಗೋಕಾಕ್: ಸಮೀಪದ ಕಡಬಗಟ್ಟಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ತಂದೆ ತಾನು ವಿಷ ಸೇವಿಸಿ ಮಕ್ಕಳಿಗೂ ವಿಷ ಊಣಿಸಿ ತಂದೆ ಹಾಗೂ ಮಕ್ಕಳು ಸಾವನ್ನಪ್ಪಿದ ಘಟನೆ ಶುಕ್ರವಾರದಂದು ಜರುಗಿದೆ. ಮೃತರು ಹುಕ್ಕೇರಿ ತಾಲೂಕಿನ ರಾಜಕಟ್ಟಿ ಗ್ರಾಮದವರಾದ ಮಾರುತಿ ಯಲ್ಲಪ್ಪ ಪೂಜಾರಿ 37 ಹಾಗೂ ಮಕ್ಕಳಾದ ಯಲ್ಲಪ್ಪ 6, ಪೂಜಾ 4, ಸಮರ್ಥ 7 ಎಂದು ಗುರುತಿಸಲಾಗಿದೆ. …
Read More »