Breaking News

ಎನ್‌ಸಿಪಿ ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್ ನೇಮಕ

ಎನ್‌ಸಿಪಿ ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್ ನೇಮಕ ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ಎನ್‌ಸಿಪಿ ಉಪಾಧ್ಯಕ್ಷ ಪ್ರಫುಲ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಘೋಷಿಸಲಾಗಿದೆ. ಶರದ್ ಪವಾರ್ ಅವರು 1999 ರಲ್ಲಿ ಪಿ.ಎ. ಸಂಗ್ಮಾ ಅವರ ಜೊತೆ ಸೇರಿ ಸ್ಥಾಪಿಸಿದ ಪಕ್ಷದ 25 ನೇ ವಾರ್ಷಿಕೋತ್ಸವದಲ್ಲಿ ಈ ಘೋಷಣೆ ಮಾಡಲಾಯಿತು. ಸುಪ್ರಿಯಾ ಸುಳೆ ಅವರನ್ನು ಎನ್‌ಸಿಪಿಯ ಕೇಂದ್ರ …

Read More »

ಸ್ಕರ್ಟ್, ಶಾರ್ಟ್ಸ್ ಹಾಕಿದ್ರೆ ದೇವಸ್ಥಾನಕ್ಕೆ ಪ್ರವೇಶವಿಲ್ಲ

ಸ್ಕರ್ಟ್, ಶಾರ್ಟ್ಸ್ ಹಾಕಿದ್ರೆ ದೇವಸ್ಥಾನಕ್ಕೆ ಪ್ರವೇಶವಿಲ್ಲ ಮುಂಬೈ : 18 ಪ್ರಸಿದ್ಧ ದೇವಸ್ಥಾನದಲ್ಲಿ ಇದೀಗ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಹರಿದ ಫ್ಯಾಶನ್ ಜೀನ್ಸ್, ಸ್ಕರ್ಟ್, ಶಾರ್ಟ್ಸ್ ಹಾಕಿ ದೇವಸ್ಥಾನ ಪ್ರವೇಶಿಸುವಂತಿಲ್ಲ. ಈ ರೀತಿಯ ಉಡುಪುಗಳಿಗೆ ನಿಷೇಧ ಹೇರಲಾಗಿದೆ. ಮಹಾರಾಷ್ಟ್ರದ ಮಂದಿರ ಮಹಾ ಸಂಘ ಹಾಗೂ ಹಿಂದೂ ಜನಜಾಗೃತಿ ಸಂಘಟನೆ ಈ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಮಹಾರಾಷ್ಟ್ರದ 18 ದೇವಸ್ಥಾನಗಳಲ್ಲಿ ಹರಿದ ಫ್ಯಾಶನ್ ಜೀನ್ಸ್, ಸ್ಕರ್ಟ್, ಶಾರ್ಟ್ಸ್ ಹಾಕಿ ಪ್ರವೇಶಿಸುವಂತಿಲ್ಲ. …

Read More »

ಫೋನ್ ಇನ್ ಕಾರ್ಯಕ್ರಮ ಇಂದು

ಫೋನ್ ಇನ್ ಕಾರ್ಯಕ್ರಮ ಇಂದು ಬೆಳಗಾವಿ : ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಅಧೀಕ್ಷಕರ ಫೋನ್‌ ಇನ್ ಕಾರ್ಯಕ್ರಮ ಜೂನ್ 10 ರಂದು ಬೆಳಗ್ಗೆ 9:00 ರಿಂದ 11 ಗಂಟೆವರೆಗೆ ನಡೆಯಲಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆ : 0831-2405226 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More »

ವಿದ್ಯಾರ್ಥಿಗಳು ಈ ಶಾಲೆಗೆ ಬರಲು ಹೆದರುವುದು ಏಕೆ ? ಕೊನೆಗೂ ನೆಲಸಮಕ್ಕೆ ಸಿದ್ದತೆ

ವಿದ್ಯಾರ್ಥಿಗಳು ಈ ಶಾಲೆಗೆ ಬರಲು ಹೆದರುವುದು ಏಕೆ ? ಕೊನೆಗೂ ನೆಲಸಮಕ್ಕೆ ಸಿದ್ದತೆ ಭುವನೇಶ್ವರ : ವಿದ್ಯಾರ್ಥಿಗಳು ಈ ಶಾಲೆಗೆ ಬರಲು ಹೆದರುವುದು ಏಕೆ ಗೊತ್ತೆ ? ಕೊನೆಗೂ ಈ ಶಾಲೆಯ ನೆಲಸಮಕ್ಕೆ ರಾಜ್ಯ ಸರಕಾರವೇ ಮುಂದಾದ ಬೆಳವಣಿಗೆ ನಡೆದಿದೆ. ತ್ರಿವಳಿ ರೈಲು ದುರಂತದಲ್ಲಿ ಮೃತರಾದವರ ಶವಗಳನ್ನು ಇರಿಸಿದ್ದ 65 ವರ್ಷ ಹಳೆಯದಾದ ಬಹನಾಗ ಗ್ರಾಮದ ಪ್ರೌಢ ಶಾಲೆಯ ಕಟ್ಟಡವನ್ನು ಕೆಡವಲು ಸರ್ಕಾರ ಶುಕ್ರವಾರ ಅನುಮತಿ ನೀಡಿದೆ. ಶಾಲೆಯಲ್ಲಿ ಶವ …

Read More »

ಬಿಎಂಟಿಸಿ ಬಸ್ ಗೆ ಜೂನ್ 11 ರಂದು ಸಿಎಂ ಸಿದ್ದರಾಮಯ್ಯ ಕಂಡಕ್ಟರ್ !

ಬಿಎಂಟಿಸಿ ಬಸ್ ಗೆ ಜೂನ್ 11 ರಂದು ಸಿಎಂ ಸಿದ್ದರಾಮಯ್ಯ ಕಂಡಕ್ಟರ್ ! ಬೆಂಗಳೂರು: ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ ಯೋಜನೆ’ ಜೂನ್ 11ರ ಭಾನುವಾರ ಜಾರಿಯಾಗಲಿದ್ದು, ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅಂದು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ನಲ್ಲಿ ಕಂಡಕ್ಟರ್ ಆಗಿ ಮಹಿಳೆಯರಿಗೆ ಸಿದ್ದರಾಮಯ್ಯ ಉಚಿತ ಬಸ್ ಟಿಕೆಟ್ ವಿತರಿಸಲಿದ್ದಾರೆ. ಮೆಜೆಸ್ಟಿಕ್ ನಲ್ಲಿ ಯೋಜನೆಗೆ ವಿಭಿನ್ನವಾಗಿ ಚಾಲನೆ ನೀಡಲಿರುವ ಸಿದ್ದರಾಮಯ್ಯ, ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ …

Read More »

ಜುಲೈನಲ್ಲಿ ಬಜೆಟ್ ಅಧಿವೇಶನ

ಜುಲೈನಲ್ಲಿ ಬಜೆಟ್ ಅಧಿವೇಶನ ಬೆಂಗಳೂರು: ವಿಧಾನಸೌಧದಲ್ಲಿ ಜುಲೈ 3 ರಿಂದ 14ರವರೆಗೆ 10 ದಿನ ಬಜೆಟ್ ಅಧಿವೇಶನ ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಮೊದಲ ದಿನ ಜುಲೈ 3ರಂದು ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಜುಲೈ 7 ರಂದು ಮುಖ್ಯಮಂತ್ರಿ ಬಜೆಟ್ ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More »

ಸೀಡ್ ಬಾಲ್ ಬಿತ್ತುವ ಮೂಲಕ ಪರಿಸರ ಹೆಚ್ಚಿಸಲು ಜಾಗೃತಿ

ಸೀಡ್ ಬಾಲ್ ಬಿತ್ತುವ ಮೂಲಕ ಪರಿಸರ ಹೆಚ್ಚಿಸಲು ಜಾಗೃತಿ ಬೆಳಗಾವಿ : ಕೆಎಲ್‌ಇ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜು ಪ್ಲಾಸ್ಟಿಕ್‌ಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಮುಂಬರುವ ಮಾನ್ಸೂನ್‌ಗಾಗಿ ಬಂಜರು ಪ್ರದೇಶಗಳಿಗೆ 1000+ ಸೀಡ್ ಬಾಲ್ ಅನ್ನು ಬಿತ್ತುತ್ತದೆ. ಕೆಎಲ್‌ಇ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಕೇಟರಿಂಗ್ ಟೆಕ್ನಾಲಜಿ ಮತ್ತು ಎನ್‌ಎಸ್‌ಎಸ್ ಘಟಕ ಸಂಖ್ಯೆ. 12 ರಂದು ಪ್ಲಾಸ್ಟಿಕ್ ಮಾಲಿನ್ಯವನ್ನು ವಿಶ್ವ ಪರಿಸರ ದಿನಾಚರಣೆಯನ್ನು ಮಂಗಳವಾರ ನಗರದ ಜೆಎನ್‌ಎಂಸಿ ಕ್ಯಾಂಪಸ್‌ನ …

Read More »

ಯಾವ ಸಚಿವರಿಗೆ ಯಾವ ಜಿಲ್ಲೆಯ ಹೊಣೆ ? ಇಲ್ಲಿದೆ ಪಟ್ಟಿ !

ಯಾವ ಸಚಿವರಿಗೆ ಯಾವ ಜಿಲ್ಲೆಯ ಹೊಣೆ ? ಇಲ್ಲಿದೆ ಪಟ್ಟಿ ! ಬೆಂಗಳೂರು : ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಇದ್ದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ ನೋಡಿ. ಯಾರಿಗೆ ಯಾವ ಜಿಲ್ಲೆಯನ್ನು ನೀಡಲಾಗಿದೆ ಎಂಬುದರ ಪಟ್ಟಿ ಇಲ್ಲಿದೆ. ಡಿ.ಕೆ.ಶಿವಕುಮಾರ- ಬೆಂಗಳೂರು ನಗರ ಉಸ್ತುವಾರಿ …

Read More »

ಕರೆಂಟ್ ಶಾಕ್: ಬಿಲ್ ಕಟ್ಟದಿರಲು ನೇಕಾರರ ನಿರ್ಧಾರ

ಕರೆಂಟ್ ಶಾಕ್: ಬಿಲ್ ಕಟ್ಟದಿರಲು ನೇಕಾರರ ನಿರ್ಧಾರ ಬೆಳಗಾವಿ: ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ಘೋಷಿಸಿರುವ ಸರ್ಕಾರ, ಇನ್ನೊಂದೆಡೆ ಮಗ್ಗಗಳ ವಿದ್ಯುತ್ ದರ ಹೆಚ್ಚಿಸುವ ಮೂಲಕ ನೇಕಾರರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ. ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇನ್ನು ಮುಂದೆ ವಿದ್ಯುತ್ ಬಿಲ್ ಕಟ್ಟದಿರಲು ನೇಕಾರರು ನಿರ್ಧರಿಸಿದ್ದಾರೆ. ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ನೇಕಾರರು ವಿದ್ಯುತ್ ಬಿಲ್ ಕಟ್ಟದೇ …

Read More »

ಬೆಳಗಾವಿಯಲ್ಲಿ ರವಿವಾರ ಯಕ್ಷಗಾನ ಪ್ರದರ್ಶನ

ಬೆಳಗಾವಿಯಲ್ಲಿ ರವಿವಾರ ಯಕ್ಷಗಾನ ಪ್ರದರ್ಶನ ಬೆಳಗಾವಿ : ಕುಂದಾಪುರ ಕೋಣಿ ಶ್ವೇತಛತ್ರ ಯಕ್ಷಮಿತ್ರ ಇವರಿಂದ ಯಕ್ಷ ದಿಗ್ಗಜರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನ ಜೂನ್ 11 ರಂದು ಸಂಜೆ 5 ಕ್ಕೆ ನಗರದ ಕೋನವಾಳಗಲ್ಲಿಯ ಲೋಕಮಾನ್ಯ ರಂಗ ಮಂದಿರದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಚಂದ್ರ ಹೆಗಡೆ ಹಿಲ್ಲೂರು(ಭಾಗವತಿಕೆ), ನವೀನ ಭಂಡಾರಿ ಕಡತೋಕ (ಮದ್ದಳೆ), ಶ್ರೀನಿವಾಸ ಪ್ರಭು(ಚಂಡೆ), ಶಶಿಕಾಂತ ಶೆಟ್ಟಿ ಕಾರ್ಕಳ, ಸಚಿನ್ …

Read More »