ವಸ್ತು ಸಂಗ್ರಹಾಲಯಗಳು ಗತವೈಭವದ ದಿಕ್ಸೂಚಿ : ಡಾ. ಎಸ್. ಕೆ. ಮೇಲಕಾರ ಬೆಳಗಾವಿ : ವಸ್ತುಸಂಗ್ರಹಾಲಯಗಳು ಗತಕಾಲದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತವೆ. ನಮ್ಮ ಪೂರ್ವಜರ ಭವ್ಯ ಸಂಸ್ಕೃತಿಯ ವೈಭವಕ್ಕೆ ಸಂಬಂಧಿಸಿದ ವಸ್ತುಗಳನ್ನು ರಕ್ಷಿಸಿ, ಸಂಗ್ರಹಿಸಿ ಮುಂದಿನ ಜನಾಂಗಕ್ಕೆ ವರ್ಗಾಯಿಸುವುದು ನಮ್ಮ ಆದ್ಯತೆಯಾಗಬೇಕು. ಪ್ರತಿ ತಾಲ್ಲೂಕು, ಹಳ್ಳಿಗಳಲ್ಲಿ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಸ್. ಕೆ. ಮೇಲಕಾರ ಕರೆ ನೀಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ …
Read More »ಸುಳೇಭಾವಿ ಶ್ರೀ ಮಹಾರಾಣಿ ದೇವಿ ಜಾತ್ರಾ ಮಹೋತ್ಸವ ಇಂದು
ಸುಳೇಭಾವಿ ಶ್ರೀ ಮಹಾರಾಣಿ ದೇವಿ ಜಾತ್ರಾ ಮಹೋತ್ಸವ ಇಂದು ಬೆಳಗಾವಿ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾರಾಣಿ ದೇವಿಯ ಜಾತ್ರಾ ಮಹೋತ್ಸವ ಮೇ 30ರಂದು ಮಂಗಳವಾರ ಸಡಗರ-ಸಂಣ್ರಮದಿಂದ ನೆರವೇರಲಿದೆ. ಬೆಳಗ್ಗೆ 6 ಗಂಟೆಗೆ ಶ್ರೀ ಮಹಾರಾಣಿ ದೇವಿಗೆ ಅಭಿಷೇಕ, ವಿಶೇಷ ಅಲಂಕಾರ, ಆರತಿ ಬೆಳಗಿ, ಪೂಜೆ ಸಲ್ಲಿಸಲಾಗುವುದು. ನಂತರ ಗ್ರಾಮಸ್ಥರು ಸುಳೇಭಾವಿ ಗ್ರಾಮದ ಲಕ್ಷ್ಮೀ ಗಲ್ಲಿಯ ಶ್ರೀ ಯಲ್ಲಮ್ಮನ ದೇವಿಗೆ ಉಡಿ ತುಂಬಿ ನಂತರ …
Read More »ಮೇ 31ರಿಂದ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನಾರಂಭ
ಮೇ 31ರಿಂದ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನಾರಂಭ ಯುವ ಭಾರತ ಸುದ್ದಿ ಬೆಂಗಳೂರು: 2023-24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಇಂದಿನಿಂದ ಶಾಲೆಗಳು ತೆರೆಯಲಿದ್ದು, ಮೇ 31ರಿಂದ ರಾಜ್ಯಾದ್ಯಂತ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನಾರಂಭಗೊಳ್ಳಲಿವೆ. ಮೇ 29 ಮತ್ತು 30ರಂದು ಶಾಲೆಗಳನ್ನು ಸಂಪೂರ್ಣ ಸ್ವತ್ಛಗೊಳಿಸಿ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಶಿಕ್ಷಣ ಇಲಾಖೆಯಿಂದ ಸೂಚಿಸಲಾಗಿದೆ. ಇನ್ನು ಮಕ್ಕಳು ತರಗತಿಯಲ್ಲಿ ಕೂತು ಪಾಠ …
Read More »ಕುಷ್ಟಗಿ ಬಳಿ ಅಪಘಾತ : ಸಿಎಂ ಪರಿಹಾರ ಘೋಷಣೆ
ಕುಷ್ಟಗಿ ಬಳಿ ಅಪಘಾತ : ಸಿಎಂ ಪರಿಹಾರ ಘೋಷಣೆ ಬೆಂಗಳೂರು: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯ ಕಲಕೇರಿ ಬಳಿ ಭಾನುವಾರ ಸಂಜೆ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ತಲಾ ₹2ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕೊಪ್ಪಳ ಜಿಲ್ಲೆಯ ಕುಷ್ಟಗಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಳೆಯ ಮಕ್ಕಳು ಸೇರಿದಂತೆ 6 …
Read More »ಸಚಿವ ಖಾತೆ ಹಂಚಿಕೆ
ಸಚಿವ ಖಾತೆ ಹಂಚಿಕೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಸಚಿವರಿಗೆ ಭಾನುವಾರ ರಾತ್ರಿ ಖಾತೆ ಹಂಚಿಕೆ ಮಾಡಲಾಗಿದೆ. ಸಾರಿಗೆ ಖಾತೆ ಹಂಚಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆಯನ್ನೂ ನೀಡಲಾಗಿದೆ. ಯಾರಿಗೆ, ಯಾವ ಖಾತೆ? ಸಿದ್ದರಾಮಯ್ಯ (ಮುಖ್ಯಮಂತ್ರಿ); ಹಣಕಾಸು, ಆಡಳಿತ ಸುಧಾರಣೆ, ಗುಪ್ತಚರ, ವಾರ್ತಾ ಇಲಾಖೆ ಮತ್ತು ಹಂಚಿಕೆಯಾಗದೆ ಉಳಿಿರುವ ಖಾತೆಗಳು ಡಿ.ಕೆ. ಶಿವಕುಮಾರ್ (ಉಪ ಮುಖ್ಯಮಂತ್ರಿ); ಜಲಸಂಪನ್ಮೂಲ, …
Read More »ಸಚಿವ ಖಾತೆ ಹಂಚಿಕೆ
ಸಚಿವ ಖಾತೆ ಹಂಚಿಕೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಸಚಿವರಿಗೆ ಭಾನುವಾರ ರಾತ್ರಿ ಖಾತೆ ಹಂಚಿಕೆ ಮಾಡಲಾಗಿದೆ. ಸಾರಿಗೆ ಖಾತೆ ಹಂಚಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆಯನ್ನೂ ನೀಡಲಾಗಿದೆ. ಯಾರಿಗೆ, ಯಾವ ಖಾತೆ? ಸಿದ್ದರಾಮಯ್ಯ (ಮುಖ್ಯಮಂತ್ರಿ); ಹಣಕಾಸು, ಆಡಳಿತ ಸುಧಾರಣೆ, ಗುಪ್ತಚರ, ವಾರ್ತಾ ಇಲಾಖೆ ಮತ್ತು ಹಂಚಿಕೆಯಾಗದೆ ಉಳಿಿರುವ ಖಾತೆಗಳು ಡಿ.ಕೆ. ಶಿವಕುಮಾರ್ (ಉಪ ಮುಖ್ಯಮಂತ್ರಿ); ಜಲಸಂಪನ್ಮೂಲ, …
Read More »ಮುಂದೂಡಿಕೆ : ಮಳೆ ನಿಂತರೆ ಮಾತ್ರ ಇಂದು ಫೈನಲ್
ಮುಂದೂಡಿಕೆ : ಮಳೆ ನಿಂತರೆ ಮಾತ್ರ ಇಂದು ಫೈನಲ್ ಅಹಮದಾಬಾದ್: 2023ರ ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಮಳೆ ಅಡ್ಡಿಪಡಿಸಿದ್ದು, ಪಂದ್ಯವನ್ನು ಮೇ 29(ಸೋಮವಾರ)ಕ್ಕೆ ಮುಂದೂಡಲಾಗಿದೆ. ನಿರಂತರವಾಗಿ ಮಳೆ ಸುರಿದ ಕಾರಣ ಪಂದ್ಯವನ್ನು ಮುಂದೂಡಲಾಗಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗೂ ನಾಲ್ಕು ಬಾರಿ ಕಪ್ ಜಯಿಸಿರುವ ಚೆನ್ನೈ ಸೂಪರ್‌ಕಿಂಗ್ಸ್ ಮುಖಾಮುಖಿಯಾಗಿವೆ.
Read More »ಹೊಸ ಸಂಸತ್ತಿನ ಉದ್ಘಾಟನೆ
ಹೊಸ ಸಂಸತ್ತಿನ ಉದ್ಘಾಟನೆ ಹೊಸ ಸಂಸತ್ತನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು. ಬಹು ನಂಬಿಕೆಯ ಪ್ರಾರ್ಥನಾ ಸಮಾರಂಭ ನಡೆಯಿತು. ಹೊಸ ಸಂಸತ್ತಿನ ಉದ್ಘಾಟನೆ ಸಂದರ್ಭದಲ್ಲಿ ಪೂಜೆ ಮತ್ತು ಬಹು ನಂಬಿಕೆಯ ಪ್ರಾರ್ಥನೆಯನ್ನು ನಡೆಸಲಾಯಿತು. ಪ್ರಧಾನಮಂತ್ರಿ ಅವರು ಸ್ಮರಣಾರ್ಥ ಫಲಕವನ್ನು ಅನಾವರಣಗೊಳಿಸಿದರು. ವೀಕ್ಷಕರು ಪ್ರಧಾನಿ ಮೋದಿಗೆ ‘ಸೆಂಗೊಲ್’ ಹಸ್ತಾಂತರಿಸಿದರು ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೂತನ ಸಂಸತ್ ಭವನವನ್ನು ಉದ್ಘಾಟಿಸಿದರು. ಲೋಕಸಭಾ ಸ್ಪೀಕರ್ ಕುರ್ಚಿಯ ಬಳಿ ಐತಿಹಾಸಿಕ ರಾಜದಂಡ …
Read More »ಸಂಪುಟದಲ್ಲಿ ಹತ್ತಿರದ ಸಂಬಂಧಿಗಳು
ಸಂಪುಟದಲ್ಲಿ ಹತ್ತಿರದ ಸಂಬಂಧಿಗಳು ಬೆಂಗಳೂರು : ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಹತ್ತಿರದ ಸಂಬಂಧಿಗಳು ಸ್ಥಾನ ಪಡೆದುಕೊಂಡಿದ್ದಾರೆ. ಚಿಂತಾಮಣಿ ಕ್ಷೇತ್ರದಲ್ಲಿ ಮೂರನೇ ಸಲ ಗೆದ್ದಿರುವ ಎಂ.ಪಿ.ಸುಧಾಕರ ಹಾಗೂ ಬ್ಯಾಟರಾಯನಪುರ ಕ್ಷೇತ್ರ ಪ್ರತಿನಿಧಿಸಿರುವ ಕೃಷ್ಣ ಬೈರೇಗೌಡ ಸಂಬಂಧಿಗಳು. ಕೃಷ್ಣ ಬೈರೇಗೌಡ ಅವರ ತಂದೆ ಮಾಜಿ ಸಚಿವ ಸಿ.ಬೈರೇಗೌಡ ಅವರ ಅಕ್ಕ ಶಾಂತಮ್ಮ ಅವರು ಸುಧಾಕರ್ ಅವರ ತಾಯಿ. ಹೀಗಾಗಿ ಇಬ್ಬರು ಹತ್ತಿರದ ಸಂಬಂಧಿಗಳಾಗಿದ್ದಾರೆ.
Read More »ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಡಂಗುರ ಸಾರಿದ ವ್ಯಕ್ತಿ !
ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಡಂಗುರ ಸಾರಿದ ವ್ಯಕ್ತಿ ! ದಾವಣಗೆರೆ: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಬೆನ್ನಲ್ಲೇ ಗೋಣಿವಾಡ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತಮಟೆ ಬಾರಿಸುತ್ತ ‘ಯಾರೂ ಇನ್ಮುಂದೆ ಕರೆಂಟ್ ಬಿಲ್ ಕಟ್ಟಂಗಿಲ್ಲ’ ಎಂಬ ಸಂದೇಶ ಸಾರಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ‘ಇವತ್ತಿನಿಂದ ಯಾರೂ ಇನ್ಮುಂದೆ ಕರೆಂಟ್ ಬಿಲ್ ಕಟ್ಟಂಗಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಆರ್ಡರ್ ಮಾಡಿ ಕಳುಹಿಸಿದ್ದಾರೆ’ …
Read More »