Breaking News

ಕಿಚ್ಚ ಪತ್ರದಲ್ಲೇನಿದೆ ?

ಕಿಚ್ಚ ಪತ್ರದಲ್ಲೇನಿದೆ ? ಯುವ ಭಾರತ ಸುದ್ದಿ ಬೆಂಗಳೂರು : ಬಿಜೆಪಿ ವತಿಯಿಂದ ಕಿಚ್ಚ ಸುದೀಪ್​ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಸುದೀಪ್​ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದರು. ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದಾದ ಶಿಕಾರಿಪುರ ಕ್ಷೇತ್ರವ್ಯಾಪ್ತಿಯ ಶಿಕಾರಿಪುರ ಹಾಗೂ ಶಿರಾಳಕೊಪ್ಪಗಳಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ಪ್ರಚಾರ ನಡೆಸಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ …

Read More »

5 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ

5 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಜಿಲ್ಲಾ ಬಾಲಭವನ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ 15 ದಿನಗಳ ಉಚಿತ ಬೇಸಿಗೆ ಶಿಬಿರವನ್ನು ಮೇ 16 ರಿಂದ ಮೇ 30 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಆಯೋಜಿಸಲಾಗಿದೆ. ಶಿಬಿರದಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ …

Read More »

ಚುನಾವಣೆಗೆ ವೇತನ ಸಹಿತ ರಜೆ

ಚುನಾವಣೆಗೆ ವೇತನ ಸಹಿತ ರಜೆ ಯುವ ಭಾರತ ಸುದ್ದಿ ಬೆಳಗಾವಿ : ಭಾರತ ಚುನಾವಣಾ ಆಯೋಗವು ಮೇ 10 ರಂದು ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ ನಿಗದಿಪಡಿಸಿದೆ. ಅಂದು ರಾಜ್ಯಾದ್ಯಂತ ಎಲ್ಲಾ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಹಾಗೂ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬದ ರಜೆಗಳು) ಕಾಯ್ದೆಯ ಅರ್ಹ ಮತದಾರರಿಗೆ ವೇತನ ಸಹಿತ ರಜೆ …

Read More »

ಕೇರಳ ಸ್ಟೋರಿಗೆ ತೆರಿಗೆ ವಿನಾಯಿತಿ ಘೋಷಿಸಿದ ಆದಿತ್ಯನಾಥ

ಕೇರಳ ಸ್ಟೋರಿಗೆ ತೆರಿಗೆ ವಿನಾಯಿತಿ ಘೋಷಿಸಿದ ಆದಿತ್ಯನಾಥ ಯುವ ಭಾರತ ಸುದ್ದಿ ನವದೆಹಲಿ: ವಿವಾದಿತ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಈ ಕುರಿತು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶ ಸರ್ಕಾರವು ದಿ ಕೇರಳ ಸ್ಟೋರಿ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿತ್ತು. ಮತ್ತೊಂದೆಡೆ ವಿವಾದಿತ ಚಿತ್ರ ಪ್ರದರ್ಶನಕ್ಕೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ನಿಷೇಧ ಹೇರಲಾಗಿದೆ. …

Read More »

ಭಾರೀ ಪ್ರಮಾಣದಲ್ಲಿ ಹಣ ವಶ

ಭಾರೀ ಪ್ರಮಾಣದಲ್ಲಿ ಹಣ ವಶ ಯುವ ಭಾರತ ಸುದ್ದಿ ಬೆಂಗಳೂರು: ಮಾರ್ಚ್‌ 29 ರಂದು ಜಾರಿಯಾದ ಕರ್ನಾಟಕ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಆರಂಭವಾದ ಬಳಿಕ 147.46 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. 2018ರ ಚುನಾವಣೆಗೆ ಹೋಲಿಕೆ ಮಾಡಿದರೆ ಇದು ಶೇ 100 ರಷ್ಟು ಹೆಚ್ಚು. ರಾಜ್ಯದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಸ್ಥಿರ, ಫ್ಲೈಯಿಂಗ್ ಸ್ಕ್ವಾಡ್‌ಗಳು ಕಾರ್ಯಾಚರಣೆ ಮಾಡಿದ್ದು ಒಟ್ಟು 375.60 ಕೋಟಿ ಮೌಲ್ಯದ ನಗದು, …

Read More »

ಬಹಿರಂಗ ಪ್ರಚಾರ ಮಾಡಿದರೆ ಕ್ರಮ ದಾಖಲು

ಬಹಿರಂಗ ಪ್ರಚಾರ ಮಾಡಿದರೆ ಕ್ರಮ ದಾಖಲು ಯುವ ಭಾರತ ಸುದ್ದಿ ಬೆಳಗಾವಿ : ವಿಧಾನಸಭಾ ಚುನಾವಣಾ ಅಂಗವಾಗಿ ಮೇ 10 ರಂದು ಮತದಾನ ನಡೆಯಲಿದ್ದು, ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ ಶಾಂತಿಯುತ ಹಾಗೂ ಸುಗಮ ಮತದಾನ ಪ್ರಕ್ರಿಯೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ‌ನಿತೇಶ್ ಪಾಟೀಲ ತಿಳಿಸಿದರು. ನಗರದ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರದ ಆವರಣದಲ್ಲಿರುವ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ …

Read More »

ಅಂಕಲಗಿಗೆ ಕೀರ್ತಿ ತಂದ ಪೂಜಾ ದುಡಗುಂಟಿ

ಅಂಕಲಗಿಗೆ ಕೀರ್ತಿ ತಂದ ಪೂಜಾ ದುಡಗುಂಟಿ ಯುವ ಭಾರತ ಸುದ್ದಿ ಬೆಳಗಾವಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.92ರಷ್ಟು ಅಂಕ ಗಳಿಸುವ ಮೂಲಕ ಅಂಕಲಗಿ ಪಟ್ಟಣಕ್ಕೆ ಪೂಜಾ ಕೀರ್ತಿ ತಂದಿದ್ದಾಳೆ. ಅಂಕಲಗಿಯ ವಿದ್ಯಾರಣ್ಯ ಪ್ರಾಥಮಿಕ ಹಾಗೂ ಮಾಧ್ಯಮಿಕ ಕನ್ನಡ ಶಾಲೆಯ ವಿದ್ಯಾರ್ಥಿನಿ ಪೂಜಾ ರಾಜು ದುಡಗುಂಟಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ. 92 ಅಂಕ ಗಳಿಸಿ ಸಾಧನೆ ಮೆರೆದಿದ್ದಾಳೆ. ಹಿರಿಯ ಕೆಎಎಸ್ ಅಧಿಕಾರಿಗಳಾದ ಅಶೋಕ ದುಡಗುಂಟಿ, ಪರಶುರಾಮ ದುಡಗುಂಟಿ, ಪಾಲಕರಾದ ರಾಜು ಮತ್ತು ಮಹಾದೇವಿ …

Read More »

BIG BREAKING ರಮೇಶ ಜಾರಕಿಹೊಳಿಯವರ ವಿರುದ್ಧ ಕೊನೆಕ್ಷಣದಲ್ಲಿ ಆಡಿಯೋ-ವಿಡಿಯೋ ವೈರಲ್ ಮಾಡಲು ಭಾರೀ ಸಂಚು..?

BIG BREAKING ರಮೇಶ ಜಾರಕಿಹೊಳಿಯವರ ವಿರುದ್ಧ ಕೊನೆಕ್ಷಣದಲ್ಲಿ ಆಡಿಯೋ-ವಿಡಿಯೋ ವೈರಲ್ ಮಾಡಲು ಭಾರೀ ಸಂಚು..? ಯುವ ಭಾರತ ಸುದ್ದಿ ಬೆಳಗಾವಿ : ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ರಮೇಶ ಜಾರಕಿಹೊಳಿಯವರ ವರ್ಚಸ್ಸು ಕಡಿಮೆ ಮಾಡಲು ಪ್ರತಿಪಕ್ಷ ದಂಡು ಇನ್ನಿಲ್ಲದ ಷಡ್ಯಂತ್ರ ನಡೆಸಿರುವುದು ಇದೀಗ ಬಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅತ್ಯಂತ ಪ್ರಬಲರಾಗಿರುವ ಎದುರಾಳಿಗಳನ್ನು ಹಣಿಯಲು ವಿರೋಧ ಪಕ್ಷದ ಸುಳ್ಳಿನ ಫ್ಯಾಕ್ಟರಿಯಲ್ಲಿ ವಿಡಿಯೋ- ಆಡಿಯೋಗಳ ಬಹುದೊಡ್ಡ ಸಂಗ್ರಹವೇ ಇದೆ. ಇದು ರಾಜ್ಯದ …

Read More »

ನನಗೇ ಮೊದಲ ಸ್ಥಾನ ನೀಡಲು ಮತದಾರರ ನಿರ್ಧಾರ : ಎರಡನೇ ಸ್ಥಾನಕ್ಕೆ ಯಾರು ಬರುತ್ತಾರೆಂದು ವಿರೋಧಿಗಳಿಬ್ಬರೂ ಪೈಪೋಟಿ ನಡೆಸಿದ್ದಾರೆ: ಬಾಲಚಂದ್ರ ಜಾರಕಿಹೊಳಿ

ನನಗೇ ಮೊದಲ ಸ್ಥಾನ ನೀಡಲು ಮತದಾರರ ನಿರ್ಧಾರ : ಎರಡನೇ ಸ್ಥಾನಕ್ಕೆ ಯಾರು ಬರುತ್ತಾರೆಂದು ವಿರೋಧಿಗಳಿಬ್ಬರೂ ಪೈಪೋಟಿ ನಡೆಸಿದ್ದಾರೆ: ಬಾಲಚಂದ್ರ ಜಾರಕಿಹೊಳಿ ಯುವ ಭಾರತ ಸುದ್ದಿ ಮೂಡಲಗಿ :                   ಕ್ಷೇತ್ರದ ಮತದಾರರು ಈಗಾಗಲೇ ನಿರ್ಧಾರ ಮಾಡಿದ್ದು, ನನಗೆ ಮೊದಲ ಸ್ಥಾನ ನೀಡಲಿದ್ದಾರೆ. ಆದರೆ, ವಿರೋಧ ಪಕ್ಷದ ಅಭ್ಯರ್ಥಿಗಳು ಎರಡನೇ ನಂಬರ್‌ಗೆ ಯಾರು ಬರುತ್ತಾರೆ ಎಂದು ಸ್ಪರ್ಧೆ ಮಾಡುತ್ತಿದ್ದಾರೆ. ಮೊದಲ …

Read More »

ಎಸ್ಎಸ್ಎಲ್‌‌ಸಿಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ನೋಂದಾಯಿಸಲು ಮೇ 15 ರ ವರೆಗೆ ಅವಕಾಶ

ಎಸ್ಎಸ್ಎಲ್‌‌ಸಿಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ನೋಂದಾಯಿಸಲು ಮೇ 15 ರ ವರೆಗೆ ಅವಕಾಶ ಯುವ ಭಾರತ ಸುದ್ದಿ ಬೆಂಗಳೂರು : ರಾಜ್ಯದ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇಂದು ಸೋಮವಾರ ಪ್ರಕಟವಾಗಿದ್ದು, ಶೇ. 83.8 ಮಂದಿ ಉತ್ತೀರ್ಣರಾಗಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಇಂದಿನಿಂದಲೇ (ಮೇ 08 ರಿಂದ) ನೋಂದಣಿ ಆರಂಭವಾಗಿದ್ದು, ಮೇ 15ರ ವರೆಗೆ ಅವಕಾಶ ನೀಡಲಾಗಿದೆ. ಮರುಮೌಲ್ಯ ಮಾಪನ …

Read More »