ಸೋಲು-ಗೆಲುವಿಗಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಅತ್ಯಂತ ಮುಖ್ಯ : ಕಿರಣ ಜಾಧವ

ಯುವ ಭಾರತ ಸುದ್ದಿ ಬೆಳಗಾವಿ :
ಕನ್ನಡ ಮಹಿಳಾ ಸಂಘ, ಸಾಹಿತ್ಯ ಕಲಾ ವೇದಿಕೆ ವತಿಯಿಂದ ರಾಗ ರಂಜಿನಿ ಕನ್ನಡ ಗೀತೆಗಳ ಸ್ಪರ್ಧೆ ಟಿಳಕವಾಡಿಯ ರೈಲ್ವೆ ಗೇಟ್ ಬಳಿಯ ವೇರ್ಣೇಕರ ಭವನದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಬಿಜೆಪಿ ನಾಯಕ ಕಿರಣ ಜಾಧವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂತಹ ಸ್ಪರ್ಧೆಗಳು ಪ್ರತಿಭೆಯನ್ನು ಹೊರ ತರುವಲ್ಲಿ ಅತ್ಯಂತ ಸಹಾಯಕವಾಗಿ ಪರಿಣಮಿಸುತ್ತವೆ. ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸೋಲು- ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಅತ್ಯಂತ ಮುಖ್ಯ ಎಂದು ತಿಳಿಸಿದರು.
ಸಂಘಟನೆಗಳ ವತಿಯಿಂದ ಕಿರಣ ಜಾಧವ ಅವರನ್ನು ಸನ್ಮಾನಿಸಲಾಯಿತು.
YuvaBharataha Latest Kannada News