Breaking News

ಜಾಗೃತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ : ಎನ್. ವಿ.ಶಿರಗಾಂವಕರ

Spread the love

ಜಾಗೃತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ : ಎನ್. ವಿ.ಶಿರಗಾಂವಕರ

ಯುವ ಭಾರತ ಸುದ್ದಿ ಬೆಳಗಾವಿ :
ಚುನಾವಣಾ ಮಾರ್ಗಸೂಚಿಯ ಅನ್ವಯದಂತೆ ಯಾವುದೇ ಗೊಂದಲಕ್ಕೆ ಒಳಗಾಗದೆ ಜಾಗರೂಕತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯಕ್ಕೆ ನೀಡಿದ ಸಲಕರಣೆ ಹಾಗೂ ನಮೂನೆಗಳ ಕುರಿತು ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಮಾಸ್ಟರ್ ತರಬೇತುದಾರಿಗೆ ಚಿಕ್ಕೋಡಿ ಆರ್. ಡಿ.ಪಿ.ಯು ಕಾಲೇಜು ಉಪನ್ಯಾಸಕರು ಹಾಗೂ ಜಿಲ್ಲಾ ಮಟ್ಟದ ತರಬೇತುದಾರ ಎನ್. ವ್ಹಿ ಶಿರಗಾಂವಕರ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ (ಏ.14) ನಡೆದ ಮಾಸ್ಟರ್ ತರಬೇತುದಾರರ (ALMT) ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಮತಗಟ್ಟೆಯಲ್ಲಿ ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳಬೇಕು.
ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ಅನೇಕ ಗೊಂದಲಗಳು ಎದುರಾಗಬಹುದು ಆದರೆ ಗೊಂದಲಕ್ಕೆ ಒಳಗಾಗದೆ ಚುನಾವಣಾ ಮಾರ್ಗಸೂಚಿಗಳು ಅನ್ವಯ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಬ್ಯಾಲೆಟ್ ಪೇಪರ್ ಕಲೆಕ್ಟ್, ಜೋಡಣೆ ಸರಿಯಾದ ಮಾದರಿಯಲ್ಲಿ ಮಾಡಲು ಸೂಚಿಸಬೇಕು. ಕರ್ತವ್ಯ ನಿರ್ವಹಣೆ ಸಮಯದಲ್ಲಿ ರಾಜಕಾರಣ ಹಾಗೂ ಸಂಬಂಧಿತ ವಿಷಯದ ಕುರಿತು ಚರ್ಚಿಸಬಾರದು. ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಹತ್ತಿರದ ಮನೆಗಳಿಗೆ ಭೇಟಿ ನೀಡಬಾರದು ಎಂದು ತಿಳಿಸಿದರು.

ಮತದಾನಕ್ಕೆ ನಿಗಪಡಿದ ಸಮಯದಲ್ಲಿ ತಾಂತ್ರಿಕ ತೊಂದರೆ ಆಗದಂತೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಮತದಾನಕ್ಕೂ ಮುನ್ನ ಅಣುಕು ಮತ ಚಲಾವಣೆ ಮಾಡುವುದರ ಮೂಲಕ ಮತ ಯಂತ್ರಗಳು ಚಾಲ್ತಿಯಲ್ಲಿದೆ ಎಂದು ಖಾತರಿ ಪಡಿಸಿಕೊಳ್ಳುವಂತೆ ಮತಗಟ್ಟೆ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ವಿವರಿಸಬೇಕು ಎಂದು ತಿಳಿಸಿದರು.

ಏಜೆಂಟರ ಅಪಾಯಿಂಟ್ ಲೆಟರ್ ಪರಿಶೀಲಿಸಿ, ಪಕ್ಷದ ಏಜೆಂಟರಿಗೆ ಪಾಸ್ ವಿತರಿಬೇಕು. ಮೋಕ್ ಪೋಲ್, ಸರ್ಟಿಫಿಕೆಟ್ ನಲ್ಲಿ ಸಹಿ ಹಾಗೂ ಇವಿಎಂ ಯಂತ್ರಗಳ ನಂಬರ್ ದಾಖಲಿಸಬೇಕು. ಪಕ್ಷಗಳ ಏಜೆಂಟರುಗಳು ಮತದಾರ ಜೊತೆ ಚರ್ಚೆ, ಮೊಬೈಲ್ ಬಳಕೆ ಹಾಗೂ ಮತಗಟ್ಟೆಯಿಂದ ಹೊರಗಡೆ ಹೋಗದಂತೆ ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸವಂತೆ ನಿರ್ದೇಶನ ನೀಡಬೇಕು ಎಂದು ತರಬೇತುದಾರ ಶಿರಗಾಂವಕರ ಅವರು ಹೇಳಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಮಾಡಿರುವ ಮತದಾನ ಖಚಿತ ಪಡಿಸಿಕೊಳ್ಳುಲು ತಿಳಿಸಬೇಕು. ಮತಯಂತ್ರಗಳನ್ನು ಬಳಸಿ, ಆರ್. ಓ, ಪಿ.ಆರ್. ಓ ಕೌಂಟಿನ ಸೂಪರ್ ವೈಸರ್ ಮೋಕ್ ಪೋಲ್ ಪ್ರಕ್ರಿಯೆ ಮೂಲಕ ಮತ ಯಂತ್ರಗಳ ಚಾಲ್ತಿಯಲ್ಲಿರುವ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಬೇಕು ಬಳಿಕ ಮತದಾನದ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ತಿಳಿಸಿದರು.

ಮತಯಂತ್ರಗಳ ಕಾರ್ಯನಿರ್ವಹಣೆ, ಅಣಕು ಮತದಾನ, ಮತಗಟ್ಟೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು, ಅರ್ಜಿ ನಮೂನೆಗಳನ್ನು ಭರ್ತಿ ಮಾಡುವ ವಿಧಾನ, ಮತದಾನದ ಸಾಮಗ್ರಿ, ಮತದಾನ ದಿನ ಪಡೆಯಬೇಕಾದ ಸಾಮಗ್ರಿಗಳು, ಮತಗಟ್ಟೆ ತಲುಪಿದ ಮೇಲೆ ಮಾಡುವ ಕೆಲಸ, ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, ವಿವಿಪ್ಯಾಟ್, ಮತದಾನ ಖಾತ್ರಿ ಮತ್ತು ಪ್ರದರ್ಶಕ ತೆರೆ ಯಂತ್ರಗಳನ್ನು ಜೋಡಿಸುವ ವಿಧಾನ ಕುರಿತು ಕಾರ್ಯಗಾರದಲ್ಲಿ ತರಬೇತಿ ನೀಡಲಾಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರ್ಷಲ್ ಭೋಯರ್, ಬಿಮ್ಸ್ ಆಡಳಿತಾಧಿಕಾರಿ ಪ್ರೀತಂ ನಸಲಾಪುರೆ, ಬೆಳಗಾವಿ ಉಪ ವಿಭಾಧಿಕಾರಿ ಬಲರಾಮ ಚವ್ಹಾಣ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three × 5 =