ಪಿಕೆಪಿಎಸ್ ಚುನಾವಣೆ ರಮೇಶ ಜಾರಕಿಹೊಳಿ ಬೆಂಬಲಿತ ಸದಸ್ಯರ ಅವಿರೋಧ ಆಯ್ಕೆ.!

ಯುವ ಭಾರತ ಸುದ್ದಿ ಗೋಕಾಕ: ಕೊಳವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಐದು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿತ ಎಲ್ಲ ೧೨ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಾಸಕ ರಮೇಶ ಜಾರಕಿಹೊಳಿ, ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮಾರ್ಗದರ್ಶನದಲ್ಲಿ ನಡೆದ ಅವಿರೋಧ ಆಯ್ಕೆ ಪ್ರಕ್ರೀಯೆಯಲ್ಲಿ ನೂತನ ಸದಸ್ಯರಾಗಿ ಸಿದ್ದಪ್ಪ ಸಿದ್ದಪ್ಪ ರಂಗನ್ನವರ, ಹೊನ್ನಪ್ಪ ಲಕ್ಷö್ಮಪ್ಪ ದ್ಯಾಗಾನಟ್ಟಿ, ಬಾಳಪ್ಪ ಸಿದ್ದಪ್ಪ ವನಕಿ, ಪ್ರಕಾಶ ರಾಯಪ್ಪ ಪಡೆನ್ನವರ, ಲಕ್ಷö್ಮಪ್ಪ ಲಕ್ಷö್ಮಪ್ಪ ಕರಿಗಾರ, ವಿಠ್ಠಲ ಉದ್ದಪ್ಪ ಖಿಲಾರಿ, ಅಡಿವೆಪ್ಪ ಕಲ್ಲಪ್ಪ ಕರವಿನಕೊಪ್ಪ, ಮಲ್ಲವ್ವ ಆನಂದ ದಿಡ್ನವರ, ಶಹನಾಜ ಹಿಪ್ಪುರೆಹಮಾನ ಖಾಜಿ, ಭೀಮಪ್ಪ ಬಾಳಪ್ಪ ಪಾತ್ರೂಟ, ಬೀರಸಿದ್ದಪ್ಪ ಸಿದ್ರಾಮಪ್ಪ ಗಸ್ತಿ, ರಾಮೋಜಿ ಯಲ್ಲಪ್ಪ ಮಾಳಗಿ ಆಯ್ಕೆಯಾದರು.
ಕೊಳವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಸದಸ್ಯರು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಲಕ್ಕಪ್ಪ ಮಾಳಗಿ, ಕರೇಪ್ಪ ಬಡಿಗವಾಡ, ಮಾಯಪ್ಪ ಕೋಣಿ, ಮುತ್ತೆಪ್ಪ ಬೀರನಗಡ್ಡಿ, ಹನಮಂತಗೌಡ ಪಾಟೀಲ, ಲಕ್ಷö್ಮಣ ಖಿಲಾರಿ, ಭರಮಣ್ಣ ಲಟ್ಟಿ ಮತ್ತು ಅವಿರೋಧವಾಗಿ ಆಯ್ಕೆಯಾದ ಸದಸ್ಯರು ಮತ್ತು ಕೊಳವಿ, ಹುಲಿಕಟ್ಟಿ, ಬೆಣಚಿನಮರ್ಡಿ ಹಾಗೂ ದುಂಡಾನಟ್ಟಿ ಗ್ರಾಮದ ಹಿರಿಯರು ಸೇರಿದಂತೆ ಅನೇಕರು ಇದ್ದರು.
YuvaBharataha Latest Kannada News