Breaking News

ಬಂಡೀಪುರದಲ್ಲಿ ಸಫಾರಿ ಮಾಡಿದ ಪ್ರಧಾನಿ ಮೋದಿ, ಹುಲಿ ದರ್ಶನ

Spread the love

ಬಂಡೀಪುರದಲ್ಲಿ ಸಫಾರಿ ಮಾಡಿದ ಪ್ರಧಾನಿ ಮೋದಿ, ಹುಲಿ ದರ್ಶನ

ಪ್ರಧಾನಿ ನರೇಂದ್ರ ಮೋದಿಯವರು ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಬೆಳ್ಳಿ-ಬೊಮ್ಮ​ ದಂಪತಿಗೆ ಸನ್ಮಾನಿಸಿದರು. ಬೆಳ್ಳಿ-ಬೊಮ್ಮ​ ದಂಪತಿ, ದಿ ಎಲಿಫೆಂಟ್​​ ವಿಸ್ಪರರ್ಸ್ ಸಾಕ್ಷಚಿತ್ರದಲ್ಲಿ ನಟಿಸಿದ್ದರು. ಈ ಸಾಕ್ಷಚಿತ್ರಕ್ಕೆ ಆಸ್ಕರ್​​ ಪ್ರಶಸ್ತಿ ಲಭಿಸಿತ್ತು. ಈ ವೇಳೆ ಪ್ರಧಾನಿ ಮೋದಿ ಆನೆಗಳಿಗೆ ಕಬ್ಬು ತಿನ್ನಿಸಿ ಸಂತಸ ಪಟ್ಟರು, ಫೋಟೋ ಕ್ಲಿಕ್ಕಿಸಿಕೊಂಡರು.

ಯುವ ಭಾರತ ಸುದ್ದಿ ಮೈಸೂರು:
ಪ್ರಾಜೆಕ್ಟ್ ಟೈಗರ್ 50 ವರ್ಷಗಳ ಅಂಗವಾಗಿ 20 ಕಿಲೋಮೀಟರ್ ಸಫಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ತಲುಪಿದರು. ಹುಲಿ ಯೋಜನೆಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯಕ್ಕೆ ಭೇಟಿ ನೀಡಿದ್ದಾರೆ.
ಅವರಿಗೆ ಆವಾಸಸ್ಥಾನ ಸುಧಾರಣೆಗಳು, ನೀರಿನ ರಂಧ್ರಗಳು ಮತ್ತು ಆನೆ ಶಿಬಿರಗಳನ್ನು ತೋರಿಸಲಾಯಿತು.
ಬಂಡಿಪುರದ ಬೋಳುಗುಡ್ಡದಿಂದ ಸಫಾರಿಗೆ ಆರಂಭವಾಯಿತು. ಮಾರ್ಗಮಧ್ಯೆ ಮಳ್ಳಾಳ ಕಳ್ಳಬೇಟೆ ಕ್ಯಾಂಪ್ ಬಳಿ ಕೊಂಚ ವಿರಾಮ ತೆಗೆದುಕೊಂಡರು. ಸೋಲಿಗರ ಕೈಯಲ್ಲಿ ತಯಾರಿಸಿದ ಗ್ರೀನ್ ಟೀ ಸವಿದ ಮೋದಿ ಅವರಿಗೆ ಸಫಾರಿ ವೇಳೆ ಮೋದಿಗೆ ಹುಲಿ ದರ್ಶನವಾಯಿತು. ಬರೋಬ್ಬರಿ 22 ಕಿಮೀ ಅನ್ನು ಮೋದಿ ಅವರು ಸಫಾರಿ ವಾಹನದಲ್ಲಿ ಕ್ರಮಿಸಿದರು.
ಕೆಕ್ಕನಹಳ್ಳ ಚೆಕ್ ಪೋಸ್ಟ್ ಬಳಿ ಸಫಾರಿ ವಾಹನದಿಂದ ಇಳಿದು ಸರ್ಕಾರಿ ವಾಹನದಲ್ಲಿ ರಸ್ತೆ ಮೂಲಕ ಮಧುಮಲೈ ಫಾರೆಸ್ಟ್ ಗೆ ಪಯಣ ಬೆಳೆಸಿದರು.

ತಮಿಳುನಾಡಿನ ಮಧುಮಲೈನ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಅನಾಥ ಆನೆ ಮರಿ ಸಾಕಿ ಬೆಳೆಸಿದ ಆಸ್ಕರ್ ಪ್ರಶಸ್ತಿ ವಿಜೇತ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ ಮತ್ತು ಬೆಳ್ಳಿ ದಂಪತಿ ಭೇಟಿ ಮಾಡಿ ಸನ್ಮಾನಿಸಿದರು.
ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರೀಕರಣಗೊಂಡ ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ

 

ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಂಡಿರುವ ಅನಾಥ ಆನೆ ರಘು ಮತ್ತು ಪುಟ್ಟ ಜಂಬೂವನ್ನು ಬೆಳೆಸಿದ ಬೊಮ್ಮನ್ ಮತ್ತು ಬೆಳ್ಳಿಯನ್ನು ಪ್ರಧಾನಿ ಮೋದಿ ಭೇಟಿಯಾಗಿ ಅವರನ್ನು ಸನ್ಮಾನಿಸಿದರು. ಈ ವೇಳೆ ಪ್ರಧಾನಿ ಮೋದಿ ಆನೆಗಳಿಗೆ ಕಬ್ಬು ತಿನ್ನಿಸಿ ಸಂತಸ ಪಟ್ಟರು, ಹಾಗೇ ಫೋಟೋ ಕ್ಲಿಕ್ಕಿಸಿಕೊಂಡರು. ದಂಪತಿ ಸಾಕ್ಷ್ಯಚಿತ್ರದ ಪ್ರಮುಖ ತಾರೆಗಳು.

ನಂತರ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕೆಎಸ್‌ಒಯು) ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿದ್ದಾರೆ.
ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿಯವರು ‘ಅಮೃತ್ ಕಾಲ’ ಸಂದರ್ಭದಲ್ಲಿ ಹುಲಿ ಸಂರಕ್ಷಣೆಗಾಗಿ ಸರ್ಕಾರದ ದೂರದೃಷ್ಟಿ ಯೋಜನೆಯನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಅನ್ನು ಪ್ರಾರಂಭಿಸುತ್ತಾರೆ. ಜೊತೆಗೆ ಹುಲಿ ಯೋಜನೆಯ 50 ವರ್ಷಗಳ ಸ್ಮರಣಾರ್ಥ ನಾಣ್ಯವನ್ನು ಸಹ ಬಿಡುಗಡೆ ಮಾಡಲಾಗುತ್ತದೆ.

 

ಅಂತಿಮವಾಗಿ, ಪ್ರಧಾನಿ 2022 ರ ಹುಲಿ ಗಣತಿ ಸಂಖ್ಯೆಯನ್ನು ಬಿಡುಗಡೆ ಮಾಡುತ್ತಾರೆ. 2967 ರ ಕೊನೆಯ ಜನಗಣತಿ ಅಂಕಿಅಂಶಕ್ಕಿಂತ ಆರು ಪ್ರತಿಶತದಷ್ಟು ಜಿಗಿತವಿದೆ ಎಂದು ಮೂಲಗಳು ಹೇಳುತ್ತವೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

five × 3 =