ಪ್ರಾ. ಬಿ.ಎಸ್. ಗವಿಮಠರಿಗೆ ಕುವೆಂಪು ಪುರಸ್ಕಾರ ಪ್ರದಾನ

ಯುವ ಭಾರತ ಸುದ್ದಿ ಬೆಂಗಳೂರು : ಕರ್ನಾಟಕ ರಾಜಕೀಯವಾಗಿ ಏಕೀಕರಣ ಆಗಿದೆ. ಆದರೆ ಭಾವನಾತ್ಮಕವಾಗಿ ಆಗಿಲ್ಲ. ರಾಜಧಾನಿ ಜನ ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸುತ್ತಿಲ್ಲ. ಕರ್ನಾಟಕ ಏಕೀಕರಣಕ್ಕೆ ಉತ್ತರ ಕರ್ನಾಟಕದವರು ಹೋರಾಟ ಮಾಡಿದ್ದಾರೆ, ತ್ಯಾಗ ಮಾಡಿದ್ದಾರೆ. ಬೆಳಗಾವಿ ಸಲುವಾಗಿ ಇಡೀ ಕರ್ನಾಟಕ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಪ್ರಾಚಾರ್ಯ ಬಿ.ಎಸ್. ಗವಿಮಠ ನುಡಿದರು.
ಬೆಂಗಳೂರಿನಲ್ಲಿ ಕನ್ನಡ ಜನ ಶಕ್ತಿ ಕೇಂದ್ರ ಕುವೆಂಪು ದರ್ಶನ ಮತ್ತು ಪ್ರಸ್ತುತತೆ ವಿಚಾರ ಸಂಕಿರಣದಲ್ಲಿ ಕುವೆಂಪು ಪುರಸ್ಕಾರ
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಖ್ಯಾತ ವಿದ್ವಾಂಸ ಮತ್ತು ಮಾಜಿ ಕ.ಸಾ.ಪ. ಅಧ್ಯಕ್ಷ ಡಾ. ನಾಗರಾಜ್ ಹಂಪನಾ ಅಧ್ಯಕ್ಷತೆ ವಹಿಸಿದ್ದರು. ಅವರು ಗವಿಮಠರಿಗೆ ಕುವೆಂಪು ಪುರಸ್ಕಾರ ಪ್ರದಾನವನ್ನು ಮಾಡಿದರು.
YuvaBharataha Latest Kannada News