ಬೆಳಗಾವಿ : ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಸಮೀಪ ನಡೆದ ದುರ್ಘಟನೆ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಪತಿಯ ಎದುರೇ ಮೃತಪಟ್ಟ ಪತ್ನಿ.
ಮೂಡಲಗಿ ತಾಲೂಕಿನ ಸಂಗಣಕೇರಿಯ ವೈದ್ಯೆ ಡಾ. ಆಶಾ ಕೋಳಿ (32) ಸ್ಥಳದಲ್ಲೇ ಸಾವು. ಆಶಾ ಪತಿ ಡಾ. ಭೀಮಪ್ಪ ಕೋಳಿ, ಚಾಲಕ ಮಹೇಶ ಖೋತ ಘಟನೆಯಲ್ಲಿ ಗಂಭೀರ ಗಾಯ. ಲಾರಿ ಹಿಂಬದಿಗೆ ರಭಸವಾಗಿ ಡಿಕ್ಕಿ ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜು.
ಧಾರವಾಡದಿಂದ ಬೆಳಗಾವಿ ಕಡೆಗೆ ಬರುವಾಗ ಹಿರೇಬಾಗೇವಾಡಿ ಬಳಿ ದುರ್ಘಟನೆ.
ಗಾಯಾಳುಗಳನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ. ಸುನಿಲ ಮುಂಜಾಲೆ