ಯುವ ಭಾರತ ಸುದ್ದಿ, ಗೋಕಾಕ: “ದಿಲ್ಲಿ ಚಲೋ” ರೈತರ ಪ್ರತಿಭಟನೆ ಮೇಲಿನ ಕೇಂದ್ರ ಸರಕಾರದ ದೌರ್ಜನ್ಯವನ್ನು ಖಂಡಿಸಿ ಹಾಗೂ ರೈತರ ಕೃಷಿ ಕೂಲಿಕಾರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರರ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮಂಗಳವಾರದAದು ಮನವಿ ಸಲ್ಲಿಸಿದರು.
ಕೃಷಿ ಸಂಬAಧಿತ ಮೂರು ಕಾಯ್ದೆಗಳು ಹಾಗೂ ವಿದ್ಯುತ್ ಕಾಯ್ದೆಯನ್ನು ರದ್ದು ಮಾಡಬೇಕು. ದಿಲ್ಲಿ ಚಲೋ ಹೋರಾಟಕ್ಕೆ ಹೊರಟಿದ್ದ ಲಕ್ಷಾಂತರ ರೈತರು ಕೃಷಿ ಕೂಲಿಕಾರರ ಮೇಲೆ ಲಾಠಿ ಚಾರ್ಜ ಜಲ ಪೀರಂಗಿಗಳ ದಾಳಿ ನಡೆಸಿರುವುದಕ್ಕೆ ನೈತಿಕ ಹೊಣೆಹೊತ್ತು ಪ್ರಧಾನಿ ಮೋದಿ ಅವರು ಬಹಿರಂಗವಾಗಿ ರೈತರ ಕ್ಷಮೆಯನ್ನು ಕೇಳಬೇಕು. ಹೋರಾಟಗಾರ ರೈತರಿಗೆ ಷರತ್ತುಗಳನ್ನು ಹಾಕುವುದನ್ನು ನಿಲ್ಲಿಸಬೇಕು. ಹೋರಾಟದ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಭೀಮಶಿ ಗದಾಡಿ, ಜಿಲ್ಲಾ ಅಧ್ಯಕ್ಷ ಗಣಪತಿ ಈಳಿಗೇರ, ಸತ್ಯಪ್ಪ ಮಲ್ಲಾಪೂರ, ಮುತ್ತೆಪ್ಪ ಭಾಗನ್ನವರ, ಮಂಜುನಾಥ್ ಪೂಜೇರಿ, ಶಂಕರ ಮದಿಹಳ್ಳಿ, ರಾಯಪ್ಪ ಗೌಡಪನ್ನವರ, ಭೀಮಪ್ಪ ಗೂಗಟಿ, ಭಂಗೆಪ್ಪ ಜಲ್ಲಿ, ಕುಮಾರ ತಿಗಡಿ ಸೇರಿದಂತೆ ಅನೇಕರು ಇದ್ದರು.
