Breaking News

ಸುಧೀರ ಗಡ್ಡೆಗೆ ಶುಭ ಕೋರಿದ ರಾಜು ಸೇಠ

Spread the love

ಸುಧೀರ ಗಡ್ಡೆಗೆ ಶುಭ ಕೋರಿದ ರಾಜು ಸೇಠ

ಭಡಕಲ್ ಗಲ್ಲಿ, ಚವಾಟ ಗಲ್ಲಿ, ಖಡಕ್ ಗಲ್ಲಿ ಯುವಕ ಮಂಡಳದಿಂದ ಆಚರಣೆ

ಬೆಳಗಾವಿ: ಕಾಂಗ್ರೆಸ್‌ನ ನಿಷ್ಠಾವಂತ, ಅಪ್ಪಟ ಕಾರ್ಯಕರ್ತ ಸುಧೀರ ಗಡ್ಡೆ ಅವರ 43ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಸೇಠ ಸೇರಿದಂತೆ ಅನೇಕ ಗಣ್ಯಮಾನ್ಯರು ಸುಧೀರ ಗಡ್ಡೆ ಅವರಿಗೆ ಶುಭಾಶಯ ಕೋರಿದರು.

ನಗರದ ಭಡಕಲ್ ಗಲ್ಲಿಯಲ್ಲಿರುವ ಗಡ್ಡೆ ಡೆವಲಪರ್ಸ್ ಕಚೇರಿಯಲ್ಲಿ ಅದ್ಧೂರಿಯಾಗಿ ಜನ್ಮದಿನವನ್ನು ಆಚರಿಸಲಾಯಿತು. ಭಡಕಲ್ ಗಲ್ಲಿ, ಚವಾಟ ಗಲ್ಲಿ, ಖಡಕ್ ಗಲ್ಲಿ, ಕಣಬರ್ಗಿಯ ವಿವಿಧ ಸಂಘಟನೆಗಳು ಹಾಗೂ ಯುವಕ ಮಂಡಳಗಳ ಕಾರ್ಯಕರ್ತರು ಜನ್ಮದಿನದ ಶುಭಾಶಯ ಕೋರಿದರು. ಸುಧೀರ ಗಡ್ಡೆ ಅವರಿಗೆ ಶಾಲು ಹೊದಿಸಿ, ಹೂ ಮಾಲೆ ಹಾಕಿ ಶುಭಾಶಯ ತಿಳಿಸಿದರು.

ಸುಧೀರ ಗಡ್ಡೆ ಅವರು ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು. ಪರಸ್ಪರ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಜನ್ಮದಿನದ ಶುಭಾಶಯ ತಿಳಿಸಿದರು.

ಜನ್ಮದಿನ ಸಮಾರಂಭದಲ್ಲಿ ಮುಖಂಡರಾದ ಮತೀನ ಶೇಖಅಲಿ, ಸಮೀವುಲ್ಲಾ ಮಾಡಿವಾಲೆ, ಇಮ್ರಾನ್ ಫತ್ತೇಖಾನ, ಅಸ್ಲಂ ಬಿಜಾಪುರೆ, ಮಹೇಶ ಶೀಗಿಹಳ್ಳಿ, ರಾಚಯ್ಯ ಹಿರೇಮಠ, ತುಷಾರ ಗಡ್ಡೆ, ವಿನಾಯಕ ಉಪ್ಪಾರ, ಖಡಕ್ ಗಲ್ಲಿ, ಭಡಕಲ್ ಗಲ್ಲಿ, ಚವಾಟ ಗಲ್ಲಿ ಯುವಕ ಮಂಡಳ ಕಾರ್ಯಕರ್ತರು ಹಾಗೂ ಕಣಬರ್ಗಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

4 + 17 =