ಅವಧಿಗೆ ಮೊದಲೇ ಸಿದ್ಧವಾಗುತ್ತಿದೆ ರಾಮ ಮಂದಿರ !
ಯುವ ಭಾರತ ಸುದ್ದಿ ಅಯೋಧ್ಯೆ:
ಅಯ್ಯೋಧ್ಯೆ ಶ್ರೀರಾಮ ಮಂದಿರ ನಿಗದಿತ ಅವರಿಗೂ ಮೊದಲೇ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಶ್ರೀರಾಮ ಮಂದಿರ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಟ್ರಸ್ಟ್ ಪ್ರಕಾರ ಸೆಪ್ಟೆಂಬರ್ ವೇಳೆಗೆ ದೇವಸ್ಥಾನದ ಅಂತಿಮ ಘಟ್ಟ ಪೂರ್ಣವಾಗಲಿದೆ. ದೇವಸ್ಥಾನದ ಗರ್ಭಗುಡಿ ಅಷ್ಟ ಭುಜಾಕೃತಿಯಲ್ಲಿ ಇರಲಿದೆ. ಶೇ.75 ರಷ್ಟು ಪೂರ್ಣವಾಗಿದೆ. ಕೇವಲ 167 ಕಂಬಗಳನ್ನು ಅಳವಡಿಸುವ ಕಾರ್ಯ ಇದು ಮೇಲ್ಚಾವಣಿ ನಿರ್ಮಾಣ ಕಾರ್ಯ ಮೇ, ಜೂನ್ ನಲ್ಲಿ ಆರಂಭವಾಗಲಿದೆ ಎಂದು ಟ್ರಸ್ಟ್ ಮುಖ್ಯಸ್ಥ ಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.
ರಾಮ ಮಂದಿರವನ್ನು ಡಿಸೆಂಬರ್ ಅಂತ್ಯದ ವೇಳೆಗೆ ಮುಕ್ತಾಯಗೊಳಿಸುವ ಯೋಜನೆ ಇತ್ತು. 2024 ರ ಜನವರಿ 14 ರ ಮಕರ ಸಂಕ್ರಾಂತಿಯಂದು ರಾಮ ಮಂದಿರ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿತ್ತು. ಇದೀಗ ಮೂರು ತಿಂಗಳು ಮೊದಲೇ ಮಂದಿರ ನಿರ್ಮಾಣವಾಗಲಿದೆ. ಮಕರ ಸಂಕ್ರಾಂತಿಯಂದೇ ಲೋಕಾರ್ಪಣೆಯಾಗಲಿದೆ.