Breaking News

ವಿಶ್ವಕರ್ಮ ಸಮಾಜದಿಂದ ರಮೇಶ ಜಾರಕಿಹೊಳಿಗೆ ಬೆಂಬಲ

Spread the love

ವಿಶ್ವಕರ್ಮ ಸಮಾಜದಿಂದ ರಮೇಶ ಜಾರಕಿಹೊಳಿಗೆ ಬೆಂಬಲ

ಯುವ ಭಾರತ ಸುದ್ದಿ ಗೋಕಾಕ:
ವಿಶ್ವಕರ್ಮ ಸಮಾಜದ ಬಾಬು ಪತ್ತಾರ ನೇತ್ರತ್ವದಲ್ಲಿ ತಾಲೂಕಿನ ಎಲ್ಲಾ ವಿಶ್ವಕರ್ಮ ಸಮಾಜದ ಬಂಧುಗಳಿಂದ ರಮೇಶ ಜಾರಕಿಹೊಳಿಯವರಿಗೆ ಬೆಂಬಲ ವ್ಯಕ್ತವಾಗಿದೆ.

ವಿಧಾನಸಭೆ ಸಭೆ ಚುನಾವಣೆ ಸಮೀಸುತ್ತಿದ್ದಂತೆ ಎಲ್ಲಾ ಸಮಾಜದ ಮುಖಂಡರು ಪ್ರಚಾರ ಮಾಡಲು ಸನ್ನದ್ದರಾಗಿದ್ದಾರೆ. ಇಂದು ಗೋಕಾಕ ಮತಕ್ಷೇತ್ರದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳಿಂದ ಚುನಾವಣೆ ಪ್ರಚಾರದಲ್ಲಿ ರಮೇಶ ಜಾರಕಿಹೊಳಿಯವರಿಗೆ ಬೆಂಬಲ ನೀಡುವ ಮೂಲಕ ಮನೆ ಮನೆಗೆ ಹಾಗೂ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಕೈಗೊಂಡಿದ್ದರು.ಬಿಜೆಪಿ ಮಾಡಿದ ಕೆಲಸ ವಿಶ್ವಕರ್ಮರಿಗೆ ಹಲವು ಯೋಜನೆ ಗಳೊಂದಿಗೆ ವಿಶ್ವಕರ್ಮ ಸಮಾಜ ಗುರುತಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಬಾಬು ಪತ್ತಾರ ತಿಳಿಸಿದರು.

ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿಗೆ ಬೆಂಬಲ ನೀಡಿ ಬಹುಮತಗಳಿಂದ ಆಯ್ಕೆ ಮಾಡಬೇಕೆಂದು ಹೇಳಿದ್ದಾರೆ. ಪ್ರಚಾರ ಸಂದರ್ಭದಲ್ಲಿ ಅಂಬಿರಾವ್ ಪಾಟೀಲರು ಭೇಟಿ ನೀಡಿ ಸಮಾಜದ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಂತರ ಶಾಲು, ಮಾಲೆ ಹಾಕುವ ಮುಖಾಂತರ ರಮೇಶ ಜಾರಕಿಹೊಳಿಗೆ ಜೈ ಎಂದಿದ್ದಾರೆ. ಬೆಂಗಳೂರಿನಿಂದ ಬಂದು ಹೈವೊಲ್ಟೇಜ್ ಮತಕ್ಷೇತ್ರವಾದ ಗೋಕಾಕನಲ್ಲಿ ಮತ ಬೇಟೆಗೆ ಸಕಲ ಸಿದ್ದತೆ ಮಾಡಿಕೊಂಡು ಹಲವು ಗ್ರಾಮದ ವಿಶ್ವಕರ್ಮ ಸಮಾಜದ ಮುಖಂಡರಿಗೆ ಪ್ರತ್ಯೇಕವಾಗಿ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು.

ಅದೇ ರೀತಿ ಎಲ್ಲಾ ವಿಶ್ವಕರ್ಮ ಸಮಾಜದ ಮುಖಂಡರಿಗೆ ಎಲ್ಲಾ ರೀತಿಯ ಸರ್ಕಾರದ ಸೌಲಭ್ಯಗಳನ್ನು ಒದಗಿಸುತ್ತೆವೆ. ಇನ್ನೂ ಮುಂದಿನ ಹಂತದಲ್ಲಿ ನಿರುದ್ಯೋಗ ಯುವಕರಿಗೆ ಕೆಲಸ,ಬಡಿಗೇರ,ಕಂಬಾರ,ಪತ್ತಾರ,ಸುತಾರ,ಹೀಗೆ ಸಾಲ ಸೌಲಭ್ಯ ಒದಗಿಸುತ್ತೆವೆಂದು ಬಾಬು ಪತ್ತಾರ ಹೇಳಿದ್ದಾರೆ.

ವಿಶ್ವಕರ್ಮ ಸಮಾಜದ ನಿಗಮ ಮಂಡಳಿ ಅಧ್ಯಕ್ಷ ಬಾಬು ಪತ್ತಾರ ಹಾಗೂ ವಿಶ್ವಕರ್ಮ ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿ ಬೆಂಗಳೂರು, ಮಂಗಳೂರು, ಕಲಬುರಗಿ, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಹೀಗೆ ಎಲ್ಲಾ ಜಿಲ್ಲೆಯ ಸಮಸ್ಯೆಗೆ ಒಡೋಡಿ ಬರುವ ಏಕೈಕ ಸಮಾಜದ ಹೋರಾಟಗಾರ ಹಾಗೂ ವಿಶ್ವಕರ್ಮ ಸಮಾಜದ ಹಲವೂ ಸಭೆಗಳಿಗೆ ಮೂಲ ಕಾರ್ಯಕರ್ತರಾದ ಸಂತೋಷ ಪತ್ತಾರ (ಸಂತೋಷ ಪಿ ಕೆ) ಸಮಾಜದ ಯುವ ಮುಖಂಡರು ಹಾಗೂ ಗೊಕಾಕ ಹುಕ್ಕೇರಿ ಚಿಕ್ಕೊಡಿ ತಾಲೂಕಿನ ಅಧ್ಯಕ್ಷ ಮಲ್ಲಿಕಾರ್ಜುನ ಪತ್ತಾರ ವಿಶ್ವಕರ್ಮ ಸಮಾಜದ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷ ಉಮೇಶ ಪತ್ತಾರ, ಡಾ.ರಾಘವೇಂದ್ರ ಪತ್ತಾರ ಖ್ಯಾತ ವೈದ್ಯರು ಘಟಪ್ರಭಾ, ಹೀಗೆ ಅನೇಕ ಮುಖಂಡರುಗಳು ಭಾಗವಹಿಸಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

1 × three =