ಕ್ಯಾಲೆಂಡರ್ ಬಿಡುಗಡೆ
ಯುವ ಭಾರತ ಸುದ್ದಿ ವಿಜಯಪುರ : ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳು ಕೋವಿಡ್ -19 ನಲ್ಲಿ ಸಲ್ಲಿಸಿದ ಸೇವೆ ಗಣನೀಯ” ಡಿ.ಎಚ್.ಓ. ಡಾ. ಸುರೇಶ ಎಸ್.ಚವ್ಹಾಣ ಹೇಳಿದರು.
ಪಟ್ಟಣದಲ್ಲಿ ಗುರುವಾರದಂದು ಡಿ.ಎಚ್.ಓ ಕಛೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಐದನೇ
ವರ್ಷದ ೨೦೨೩ ನೇ ಸಾಲಿನ ದಿನ ದರ್ಶಿಕೆ (ಕ್ಯಾಲೆಂಡರ) ಬಿಡುಗಡೆಮಾಡಿ ಮಾತನಾಡಿದ ಡಾ. ಸುರೇಶ ಚವ್ಹಾಣ, ಜಿಲ್ಲಾ ಆರೋಗ್ಯ ಮತ್ತು ಕುಟುಬ
ಕಲ್ಯಾಣ ಅಧಿಕಾರಿಗಳು ಕೋಡಿವಡ್ -೧೯ ಪ್ಯಾಂಡಮಿಕ ಸಂದರ್ಭದಲ್ಲಿ ಜಿಲ್ಲೆಯಲ್ಲಿ ರೋಗ ಲಕ್ಷಣಗಳು ಕಂಡು ಬಂದ ರೋಗಿಗಳನ್ನು ಮೊದಲು ಜೀವದ ಹಂಗು ತೊರೆದು ಸ್ಲಾö್ಯಬ್ ಮತ್ತು ಆರ್‌ಟಿಪಿಸಿಆರ್ ಪರೀಕ್ಷೆ ಮಾಡುವ ಮೂಲಕ ದೃಢಪಡಿಸುವದರೊಂದಿಗೆ ಕೋವಿಡ್ ಸಂಪೂರ್ಣವಾಗಿ ನಿಯಂತ್ರಣ ಹಂತಕ್ಕೆ ಬರುವವರೆಗೂ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಾರೆ. ಹಾಗೂ ಜಿಲ್ಲೆಯಲ್ಲಿ ಇಬ್ಬರು ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳು ಎರಡನೇ ಅಲೆಯಲ್ಲಿ
ಕೋವಿಡ್‌ನಿಂದ ಅಸುನಿಗಿರುವುದೇ ಇವರ ಕಾರ್ಯ ನಿಷ್ಠೆಗೆ ಸಾಕ್ಷಿ ಎಂದು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿಯು ಸಹ ಇದೇ ರೀತಿ ಕರ್ತವ್ಯ ನಿಷ್ಟೇಯಿಂದ ಕೆಲಸ ಮಾಡಿ ಜಿಲ್ಲೆಯ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಿ ರಾಜ್ಯದಲ್ಲಿ ಇಲಾಖೆಯ ಸಾಧನೆಯನ್ನು ಉತ್ತಮ ಸ್ಥಾನಕ್ಕೇರಿಸಲು
ಸಹಕರಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷರಾದ ಸಂತೋಷ ಯರಗಲ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಆರೋಗ್ಯ
ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳಿಗೆ ಆರೋಗ್ಯ ಕೇಂದ್ರಗಳಲ್ಲಿ ಇನ್ನಷ್ಟು ಹೆಚ್ಚಿನ ಮೂಲಭೂತ
ಸೌಕರ್ಯಗಳನ್ನು ಇಲಾಖೆ ಅಥವಾ ಜಿಲ್ಲಾಡಳಿತ ಒದಗಿಸಿದ್ದಲ್ಲಿ ಪ್ರಯೋಗಾಲಯದಲ್ಲಿ ಗುಣಮಟ್ಟದ ಪರೀಕ್ಷೆ ಮತ್ತು ಫಲಿತಾಂಶವನ್ನು ನೀಡಲು ನಮ್ಮ ವೃತ್ತಿಬಾಂಧವರು ಸದಾ ಸಿದ್ದವಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳಾಧ ಡಾ.ಕೆ.ಸಿ. ಗುಂಡಬಾವಡಿ, ಜಿಲ್ಲಾ ರೋಗ ವಾಹಕ ಅಶ್ರಿತರೋಗಗಳ
ನಿಯಂತ್ರಣ ಅಧಿಕಾರಿ ಡಾ. ಜೈಬುನ್ನಿಸಾ ಬೀಳಗಿ, ಜಿಲ್ಲಾ ಕುಷ್ಠರೋಗ ಮತ್ತು ಅಂಧತ್ವ ನಿವಾರಣಾಧಿಕಾರಿಗಳಾಧ ಡಾ. ಸಂಪತ ಎಂ. ಗುಣಾರಿ, ಜಿಲ್ಲಾ
ಸವೇಕ್ಷಣಾಧಿಕಾರಿಗಳಾಧ ಡಾ. ಕವಿತಾ ದೊಡ್ಡಮನಿ, ವಿಜಯಪುರ ತಾಲೂಕಾ ಅರೋಗ್ಯ ಅಧಿಕಾರಿ ಡಾ. ಪರಶುರಾಮ ಎ. ಹಿಡ್ನಳ್ಳಿ, ಸ.ಆ. ಕೇಂದ್ರ
ತಡವಲಗಾ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಚಂದು ರಾಠೋಡ, ಡಾ. ಕೆ.ಎಸ್.ಜಾಧವ, ಹಾಗೂ ಇಲಾಖೆಯ ಎಲ್ಲ ವೃಂದಗಳ ನೌಕರರ ಜಿಲ್ಲಾ
ಘಟಕದ ಜಿಲ್ಲಾ ಅಧ್ಯಕ್ಷರಾದ ಯಾಸೀನ್ ಕೆ. ಮೋಮಿನ್, ಪ್ರ.ಕಾರ್ಯದರ್ಶಿ ಆನಂದಗೌಡ ಎನ್.ಬಿರಾದಾರ, ಅವರುಗಳು ಅತಿಥಿಗಳಾಗಿ
ಭಾಗವಹಿಸಿ ಮಾತನಾಡಿದರು.ಸ
ಕಾರ್ಯಕ್ರಮವನ್ನು ಇಕ್ಬಾಲ್ ಮುದ್ದೇಬಿಹಾಳ ನಿರೂಪಿಸಿದರು. ಪ್ರಾರ್ಥನೆಯನ್ನು ವಿದ್ಯಾವತಿ ಭೂಪಾಳೆ, ಭಾರತಿ ಪೂಜಾರಿ ಮಾಡಿದರು.
ಸ್ವಾಗತವನ್ನು ಸಿದ್ಧರಾಮಯ್ಯ ಕೆ.ಪೂಜಾರಿ, ಪ್ರ.ಕಾರ್ಯದರ್ಶಿ ಮಾಡಿದರು. ಪ್ರಾಸ್ತಾವಿಕವಾಗಿ ವಿಠ್ಠಲ ಅಗರಖೇಡ, ಮತ್ತು ಸೋಮಶೇಖರ ಹಣಮಶೆಟ್ಟಿ ಮಾತನಾಡಿ ವೃಂದ ಬಾಂಧವರು ಎದುರಿಸುತ್ತಿರುವ ತೊಂದರೆಗಳ ಕುರಿತು ಮಾತನಾಡಿದರು.
ಸುರೇಶ ವಂಟಗೂಡಿ ವಂದಿಸಿದರು. ಸಿದ್ದು ಕುಬಕಡ್ಡಿ, ಅಲ್ತಾಫ್ ಕೆಂಭಾವಿ, ಸಂತೋಷ ಜಾಗೀರದಾರ, ಎಚ್.ಎಸ್.ಗೌಡರ, ಪ್ರಕಾಶ ಖವೇಕರ, ರೇಣುಕಾ
ಸಾಲವಾಡಗಿ, ಶಿವಲೀಲಾ ಅವಟಿ, ಅನೀಲ ಘೋರ್ಪಡೆ, ಸುನಿಲ ಪತ್ತಾರ, ಆಶ್ಪಾಕ ಮಕಾಂದಾರ ಉಪಸ್ಥಿತರಿದ್ದರು
.