ಅಮಿತ್ ಶಾ ಜೊತೆ ಸುದೀರ್ಘ ಚರ್ಚಿಸಿದ ಸಾಹುಕಾರ್ !

ಯುವ ಭಾರತ ಸುದ್ದಿ ದೆಹಲಿ : ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ರಾಜಕೀಯ ಚಾಣಕ್ಯ ಎಂದೇ ಗುರುತಿಸಲ್ಪಟ್ಟಿರುವ ಅಮಿತ್ ಷಾ ಅವರೊಂದಿಗೆ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಸುದೀರ್ಘ ಚರ್ಚೆ ನಡೆಸಿದ್ದಾರೆ.
ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಬೆಳಗಾವಿ ಜಿಲ್ಲೆ ಹಾಗೂ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಪಡೆಯುವ ನಿಟ್ಟಿನಲ್ಲಿ ಇಬ್ಬರು ನಾಯಕರು ರಣತಂತ್ರ ಹೆಣೆದಿದ್ದಾರೆ. ಬಿಜೆಪಿ ಗೆಲ್ಲಲು ಬೇಕಾದ ಕಾರ್ಯತಂತ್ರಗಳನ್ನು ರಮೇಶ ಜಾರಕಿಹೊಳಿ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಅನ್ನು ಕಟ್ಟಿ ಹಾಕಲು ಬೇಕಾಗಿರುವ ರಣನೀತಿಗಳನ್ನು ಸಹ ಅಮಿತ್ ಶಾ ಅವರಿಗೆ ರಮೇಶ ಜಾರಕಿಹೊಳಿ ಅವರು ವಿವರಿಸಿದ್ದಾರೆ.
ಒಟ್ಟಾರೆ, ವಿಧಾನ ಸಭಾ ಚುನಾವಣೆಗೂ ಕೆಲ ತಿಂಗಳುಗಳು ಮುನ್ನ ಇಬ್ಬರು ನಾಯಕರು ನಡೆಸಿದ ಮಾತುಕತೆ ಫಲಪ್ರದವಾಗಿದೆ.
YuvaBharataha Latest Kannada News