ಬೆಳಗಾವಿಯಿಂದ ಗೋಕಾಕ ಸ್ಮಶಾನಕ್ಕೆ ಶಾಸಕ ಸತೀಶ ಜಾರಕಿಹೊಳಿ ಶಿಪ್ಟ್!!
ಯುವ ಭಾರತ ಸುದ್ದಿ, ಗೋಕಾಕ್: ಮೂಢನಂಬಿಕೆ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆ ಯಿಂದಪ್ರತಿ ವರ್ಷ ಡಿಸೆಂಬರ್ ೬ರಂದು ನಡೆಯುವ ಅಂಬೇಡ್ಕತ ಮಹಾಪರಿನಿರ್ವಾಣ ಕಾರ್ಯಕ್ರಮ ಬೆಳಗಾವಿ ಸ್ಮಶಾನದಿಂದ ಗೋಕಾಕ ಸ್ಮಶಾನಕ್ಕೆ ಸ್ಥಳಾಂತರಗೊಂಡಿದೆ.
ಈ ವರ್ಷ ಡಿ. ೬ರಂದು ನಡೆಯಲಿರುವ ಸ್ಮಶಾನದಲ್ಲಿಯ ಕಾರ್ಯಕ್ರಮ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯಾದ್ಯಂತ ಜನಸಮುದಾಯದಲ್ಲಿ ವೈಚಾರಿಕ ಜಾಗೃತಿ ಮತ್ತು ಸ್ವಾಭಿಮಾನವನ್ನು ಮೂಡಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಬರುತ್ತಿದೆ. ಇವುಗಳಲ್ಲಿ ಪ್ರತಿವರ್ಷ ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವಾದ ಡಿಸೆಂಬರ್ 6ರಂದು ಸಂಘಟಿಸುತ್ತಿರುವ ವಿರೋಧಿ ಪರಿವರ್ತನಾ ದಿನ ಪ್ರಮುಖವಾಗಿದೆ.
ಕಳೆದ ವರ್ಷದಂತೆ ಈ ವರ್ಷವೂ ಕೂಡ ಡಿಸೆಂಬರ್ 6 2020 ರಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಗೋಕಾಕದ ಮರಾಠ ಸಮಾಜದ ಸ್ಮಶಾನ ಭೂಮಿಯಲ್ಲಿ ಆಚರಿಸಲಾಗುತ್ತಿದೆ.
ಅಂದು ಬೆಳಗ್ಗೆ 11 ಗಂಟೆಗೆ ವೈಚಾರಿಕ ಕಾರ್ಯಕ್ರಮ ಜರಗಿ ಮಧ್ಯಾಹ್ನ ಸ್ಮಶಾನದಲ್ಲಿ ಸತೀಶ ಜಾರಕಿಹೊಳಿಯವರು ಕಾರ್ಯಕರ್ತರೊಂದಿಗೆ ಊಟಮಾಡುತ್ತಾರೆ. ಈ ವೈಚಾರಿಕ ಕಾರ್ಯಕ್ರಮದಲ್ಲಿ ನಾಡಿನ ಪ್ರಗತಿಪರ ಸ್ವಾಮೀಜಿಗಳು ಚಿಂತಕರು ಹಾಗೂ ವಿಚಾರವಾದಿಗಳು ಭಾಗವಹಿಸಲಿದ್ದಾರೆ. ಕೊರೊನಾದಿಂದಾಗಿ ಕಾರಣ ಕಾರ್ಯಕ್ರಮವನ್ನು ಕೊತೊನಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷರು ರವೀಂದ್ರ ನಾಯ್ಕರ ವಿವೇಕ್ ಜತ್ತಿ, ರಿಯಾಜ್ ಚೌಗಲಾ, ಮುನ್ನಾ ಭಾಗವಾನ್ ಉಪಸ್ಥಿತರಿದ್ದರು.