ಬೆಳಗಾವಿ : ಎರಡನೇ ಹೆಂಡತಿ ಬಿಟ್ಟು ತನ್ನ ಬಳಿಯೇ ಇರುವಂತೆ ಪೀಡಿಸುತ್ತಿದ್ದ ಮೊದಲ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನು 25 ವರ್ಷದ ಶಮಾ ರಿಯಾಜ್ ಪಠಾಣ್ ಎಂದು ಗುರುತಿಸಲಾಗಿದೆ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಘಟನೆ ನಡೆದಿದ್ದು. ಕೊಲೆಯಾದ ಶಮಾ ಮತ್ತು ರಿಯಾಜ್ ಪಠಾಣ್ 10 ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ಕಳೆದ ಒಂದುವರೆ ವರ್ಷದ ಹಿಂದೆ ರಿಯಾಜ್ ಪಠಾನ್, ಫರ್ಜಾನಾ ಪಠಾನ್ ಜೊತೆ ಎರಡನೇ ಮದುವೆಯಾಗಿದ್ದನು. ಮೂರು ದಿನ ಮೊದಲ ಹೆಂಡತಿಯ ಮನೆಯಲ್ಲಿರುತ್ತಿದ್ದ ರಿಯಾಜ್, 4 ದಿನ ಎರಡನೇ ಹೆಂಡತಿಯ ಮನೆಯಲ್ಲಿ ಇರುತ್ತಿದ್ದ.ಆದರೆ ಮೊದಲ ಹೆಂಡತಿ ಶಮಾ ಎರಡನೇ ಹೆಂಡತಿಯನ್ನು ಬಿಟ್ಟು, ತನ್ನ ಜೊತೆಯೆ ಇರುವಂತೆ ಪಟ್ಟು ಇಡಿದಿದ್ದಳು, ಆದರೆ ರಿಯಾಜ್ ಇದಕ್ಕೆ ಒಪ್ಪದ ಹಿನ್ನೆಲೆ ಶಮಾ ರಿಯಾಜ್ ವಿರುದ್ಧ ಕೇಸ್ ಹಾಕಲು ಪ್ಲಾನ್ ರೂಪಿಸಿದ್ದಳು.
ಇದರಿಂದ ಕುಪಿತನಾಗಿದ್ದ ರಿಯಾಜ್ ಇದನ್ನು ತನ್ನ ಎರಡನೇ ಹೆಂಡತಿಯ ಬಳಿಯಲ್ಲಿ ಹೇಳಿಕೊಂಡಿದ್ದನು. ಈ ವಿಚಾರವನ್ನು ತಿಳಿದ ಎರಡನೇ ಹೆಂಡತಿ, ಶಮಾಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಎರಡನೇ ಹೆಂಡತಿಯ ಮಾತು ಕೇಳಿದ ರಿಯಾಜ್ ಶಮಾ ಮಲಗಿದ್ದ ವೇಳೆಯಲ್ಲಿ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.ಕೊಲೆ ಮಾಡಿದ ರಿಯಾಜ್ ತನ್ನ ಹೆಂಡತಿ ಮತ್ತು ಮಗನೊಂದಿಗೆ ಪರಾರಿಯಾಗಿದ್ದು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮುರಗೋಡು ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.