ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಜು. 10 ರವರೆಗೆ ಉಚಿತ ಬಸ್ ಪ್ರಯಾಣ
ಬೆಳಗಾವಿ :
ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಹೊಸದಾಗಿ ಶಾಲಾ ಕಾಲೇಜು ಪ್ರವೇಶಾತಿ ಪಡೆದ 1 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸೇವಾ ಸಿಂಧು ಮುಲಕ ಅರ್ಜಿ ಸಲ್ಲಿಕೆ ಜು,12 ರಿಂದ ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಸೇವಾಸಿಂಧು ಮುಖಾಂತರ ಸಲ್ಲಿಸಲಾದ ಅರ್ಜಿ ಸ್ವೀಕೃತಿ ಹಾಗೂ ಪೋಟೋ ಹೊಂದಿರುವ ಯಾವುದಾದರೂ ಅಧೀಕೃತ ಗುರುತಿನ ಚೀಟಿಯನ್ನು ತೋರಿಸಿ ನಿಗದಿತ ಮಾರ್ಗದ ನಿರ್ಧಿಷ್ಟ ಸೇವೆಯಲ್ಲಿ ಜು.10 ರ ವರೆಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳಿಗೆ ನೀಡಲಾದ ಸೌಲಭ್ಯವನ್ನು ಸದುಪಯೋಗ ಪಡೆಸಿಕೊಳ್ಳುವುದರೊಂದಿಗೆ ನೀಡಲಾದ ಕಾಲಾವಧಿಯಲ್ಲಿ ಸಂಸ್ಥೆಯ ಬಸ್ ಪಾಸ್ ಪಡೆಯಬಹುದಾಗಿದೆ.
ನಂತರದ ಅವಧಿಯಲ್ಲಿ ಪಾಸ್ ಇಲ್ಲದೇ ಇರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆಯಾದ ನಿರ್ದಿಷ್ಠ ಮಾರ್ಗದಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.