ಲೇಖಕಿ ಜಯಶ್ರೀ ಅಬ್ಬಿಗೇರಿಗೆ ಶ್ರೇಷ್ಠ ಸಾಧಕ ರತ್ನ ಪ್ರಶಸ್ತಿ

ಯುವ ಭಾರತ ಸುದ್ದಿ ನಾಗನೂರ:
ಬೈಲಹೊಂಗಲ ತಾಲೂಕಿನ ನಾಗನೂರ ಸರ್ಕಾರಿ ಎಸ್‌ಪಿಎಮ್ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಜಯಶ್ರೀ ಅಬ್ಬಿಗೇರಿ ಅವರಿಗೆ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆ ರಾಯಚೂರು ಇವರ ವತಿಯಿಂದ ಲಿಂಗಸೂರಿನ ಶ್ರೀ ವಿಜಯ ಮಹಂತೇಶ್ವರ ಅನುಭವ ಮಂಟಪದಲ್ಲಿ ಇತ್ತೀಚಿಗೆ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತ್ಯುತ್ತಮ ಸಾಹಿತ್ಯ ಸೇವೆಗಾಗಿ ರಾಜ್ಯ ಮಟ್ಟದ ಶ್ರೇಷ್ಠ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
YuvaBharataha Latest Kannada News