ಶ್ರೀ ಪ್ರಸಂಗಸಾಗರ ಮುನಿಗಳ ಬೆಳಗಾವಿ ಪುರಪ್ರವೇಶ ಇಂದು
ಬೆಳಗಾವಿ :
ಆಚಾರ್ಯ ಪುಷ್ಪದಂತಸಾಗರ ಮುನಿಗಳ ಪರಮಶಿಷ್ಯರಾದ ಶ್ರೀ 108 ಪ್ರಸಂಗಸಾಗರಜೀ ಮುನಿಗಳ ಚಾರ್ತುಮಾಸ ಬೆಳಗಾವಿಯಲ್ಲಿ ನಡೆಯಲಿದ್ದು, ಜೂ.30 (ಶುಕ್ರವಾರ)ರಂದು ಶ್ರೀಗಳು ಬೆಳಗಾವಿ ನಗರಕ್ಕೆ ಪುರಪ್ರವೇಶ ಮಾಡಲಿದ್ದಾರೆ.
ಈಗಾಗಲೇ ವಿವಿಧಡೆ ಚಾರ್ತುಮಾಸ ನಡೆಸಿ ಧರ್ಮಪ್ರಭಾವನೆ ಕೈಗೊಂಡಿರುವ ಪ್ರಸಂಗಸಾಗರ ಮುನಿಗಳು ಬೆಳಗಾವಿಯಲ್ಲಿ ಚಾರ್ತುಮಾಸ ಆಚರಣೆ ಮಾಡಲಿದ್ದು, ಬೆಳಗಾವಿಯಲ್ಲಿಯೂ ಧರ್ಮಪ್ರಭಾವನೆಯ ಕಾರ್ಯಕ್ರಮಗಳು ನಡೆಯಲಿವೆ.
ಜೂ.30 ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಆರ್.ಟಿ.ಓ. ಸರ್ಕಲ್ ಬಳಿ ಶ್ರೀಗಳನ್ನು ಸಮಸ್ತ ಬೆಳಗಾವಿ ಜೈನ ಸಮಾಜದ ವತಿಯಿಂದ ಸ್ವಾಗತಿಸಿ ಬರಮಾಡಿಕೊಳ್ಳಲಾಗುವುದು. ನಂತರ ಮೆರವಣಿಗೆ ಮೂಲಕ ಕೋಟೆ ಆವರಣದಲ್ಲಿರುವ ಕಮಲ ಬಸದಿಗೆ ಶ್ರೀಗಳು ಭೇಟಿ ನೀಡಿ ಭಗವಂತರ ದರ್ಶನ ಪಡೆದು ಪಿ.ಬಿ,.ರೋಡ್ ಮುಖಾಂತರ ಮಠಬೀದಿಯ ಚಿಕ್ಕ ಬಸದಿಗೆ ಆಗಮಿಸಿ ಅಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಜುಲೈ 3 ರಂದು ಬೆಳಿಗ್ಗೆ 8 ಗಂಟೆಗೆ ಚಿಕ್ಕಬಸದಿಯಲ್ಲಿ ಗುರುಪೂರ್ಣಿಮೆ ನಿಮಿತ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜುಲೈ 7 ರಂದು ಮಧಾಹ್ನ 3 ಗಂಟೆಗೆ ಹಿಂದವಾಡಿಯ ಮಹಾವೀರ ಭವನದಲ್ಲಿ ಶ್ರೀಗಳ ಚಾರ್ತುಮಾಸ್ಯ ಪ್ರಾರಂಭದ ಕಳಶ ಸ್ಥಾಪನೆ ಕಾರ್ಯಕ್ರಮ ನಡೆಯಲಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಸಂಜಯ ಪಾಟೀಲ ಅವರ ಮಾರ್ಗದರ್ಶನದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗಾವಿ ಸುತ್ತಮುತ್ತಲಿನ ಜೈನ ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಚಾರ್ತುಮಾಸ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ವಿನಂತಿಸಿಕೊಂಡಿದ್ದಾರೆ.