ಸಿಪಿಐ ಶ್ರೀಶೈಲ ಬ್ಯಾಕೋಡ್‌ಗೆ ಐರನ್ ಮ್ಯಾನ್ ಗೌರವ
ಗೋಕಾಕ
ಖಜಕಿಸ್ತಾನದಲ್ಲಿ ನಡೆದ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೂಡಲಗಿ ಪೊಲೀಸ್ ಠಾಣೆಯ ಸಿಪಿಐ ಶ್ರೀಶೈಲ ಬ್ಯಾಕೋಡ್ ಅವರು ಐರನ್ ಮ್ಯಾನ್ ಆಗಿ ಹೊರಹೊಮ್ಮುವ ಮೂಲಕ ಕರ್ನಾಟಕ ಪೊಲೀಸ್ ಇಲಾಖೆಯ ಮೊದಲ ಅಧಿಕಾರಿ ಹಾಗೂ ನಾಡಿನ ಹೆಮ್ಮೆಯ ಅಧಿಕಾರಿಯಾಗಿ ರಾಜ್ಯ ಪೊಲೀಸ್ ಇಲಾಖೆಯ ಕೀರ್ತಿ ಇಮ್ಮಡಿಗೊಳಿಸಿದ್ದಾರೆ.
ಸುಮಾರು ೬೪ ದೇಶದ ಸ್ಪರ್ಧಿಗಳಲ್ಲಿ ಸಿಪಿಐ ಶ್ರೀಶೈಲ ಕೂಡ ಭಾಗವಹಿಸಿ ಸ್ಪರ್ಧೆಯಲ್ಲಿ ೩.೮ ಕಿಮೀ ಈಜು, ೧೮೦ ಕಿಮೀ ಸೈಕ್ಲಿಂಗ್ ಮತ್ತು ೪೨ ಕಿಮೀ ಓಟವನ್ನು ೧೪.೩೦ ಗಂಟೆಯಲ್ಲಿ ಪೂರ್ಣಗೊಳಿಸಿ ಐರನ್ ಮ್ಯಾನ್ ಆಗಿದ್ದಾರೆ. ಪೊಲೀಸ್ ಇಲಾಖೆ ಸೇರಿದಂತೆ ಗಣ್ಯ ಮುಖಂಡರಿಂದ ಶ್ಲಾಘನೆ ವ್ಯಕ್ತವಾಗಿದ್ದು, ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.
ಕೋಟ್..
೬೪ ದೇಶದ ಸ್ಪರ್ಧಿಗಳಲ್ಲಿ ಮೂಡಲಗಿ ಪೊಲೀಸ್ ಠಾಣೆಯ ಸಿಪಿಐ ಶ್ರೀಶೈಲ ಬ್ಯಾಕೋಡ್ ಭಾಗವಹಿಸಿ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಇದು ನಮ್ಮ ರಾಜ್ಯ ಅಷ್ಟೆ ಅಲ್ಲದೆ ಇಡೀ ದೇಶವೇ ಹೆಮ್ಮೆ ಪಡುವ ವಿಷಯವಾಗಿದೆ. ಅವರಿಗೆ ಪೊಲೀಸ್ ಇಲಾಖೆಯಿಂದ ಅಭಿನಂದನೆಗಳು.
ಸಂಜೀವಕುಮಾರ ಪಾಟೀಲ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ.