ಸಿದ್ದೇಶ್ವರ ಸ್ವಾಮೀಜಿ ಜಗತ್ತಿನ ಮಹಾನ್ ಸಂತರು
ಯುವ ಭಾರತ ಸುದ್ದಿ ಬಸವನಬಾಗೇವಾಡಿ : ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮಿಗಳು ಇಡೀ ಜಗತ್ತೇ ಕಂಡ ಮಹಾನ್ ಸಂತರು ಹಾಗೂ ತತ್ವಜ್ಞಾನಿಯಾಗಿದ್ದರೂ ಎಂದು ಲೇಖಕ ಹಾಗೂ ಸಾಹಿತಿ ಪ್ರೊ ಪಂಚಾಕ್ಷರಿ ಹಿರೇಮಠ ಹೇಳಿದರು
ಅವರು ಸ್ಥಳಿಯ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸೃಜನಶೀಲ ಸಾಹಿತ್ಯ ಪರಿಷತ್ತು ಚನ್ನಬಸವೇಶ್ವರ ಪ್ರತಿಷ್ಠಾನ ಹಾಗೂ ಅಕ್ಕನ ಬಳಗದ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು ಭಾರತ ದೇಶದ ಬಹುದೊಡ್ಡ ಮೇಧಾವಿಗಳು ಅವರಾಗಿದ್ದರು ಎಂದು ಹೇಳಿದರು.
ನುಡಿ ನಮನ ಕಾರ್ಯಕ್ರಮದಲ್ಲಿ ಗಿರಿಜಾ ಪಾಟೀಲ ಮುತ್ತು ಪತ್ತಾರ ಶ್ರೀಶೈಲ್ ಶಿರಗುಪ್ಪಿ ಎಚ್ಎಸ್ ಬಿರಾದಾರ್ ಬಸಮ್ಮ ಹಂಜಗಿ ಶಿಕ್ಷಕಿ , ಹೊಸಮಠ, ವಿವೇಕಾನಂದ ಕಲ್ಯಾಣ ಶೆಟ್ಟಿ ಶಾಂತಾ ಚೌರಿ ಕಡೆಮನಿ ಮೊದಲಾದರು ಮಾತನಾಡಿ ಶ್ರೀಗಳು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಸ್ಥಳೀಯ ವಿರಕ್ತ ಮಠದ ಸಿದ್ದಲಿಂಗ ಸ್ವಾಮಿಗಳು ಮಾತನಾಡಿ ಅಲ್ಲಮಪ್ರಭುಗಳ ವಚನದಂತೆ ಬದುಕಿನದ್ದಕ್ಕೂ ಬಾಳಿ ಬೆಳಗಿದ ಮಹಾಸಂತರು ಅವರಾಗಿದ್ದರು ಎಂದು ಹೇಳಿದರು. ಕನ್ನಡ ನಾಡು ಈ ಜಗತ್ತಿಗೆ ಅವರನ್ನು ಕೊಡುಗೆಯಾಗಿ ನೀಡಿದ್ದು ನಾವೆಲ್ಲ ಸ್ಮರಿಸಬೇಕು ಎಂದು ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಣ್ಣ ಮರ್ತರ ವಹಿಸಿದ್ದರು.