ಲೋಕಸಭಾ ಚುನಾವಣೆಗೆ ಪುತ್ರನ ಸ್ಪರ್ಧೆ ಎಂದ ಮಾಜಿ ಸಚಿವ

ಯುವ ಭಾರತ ಸುದ್ದಿ ಹಾವೇರಿ :
ಪುತ್ರ ಕೆ.ಇ. ಕಾಂತೇಶ್ ಹಾವೇರಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರ ಕಾಂತೇಶ್ ಸ್ಪರ್ಧಿಸುವ ಆಕಾಂಕ್ಷಿ ಹೊಂದಿದ್ದಾರೆ. ಟಿಕೆಟ್ ನೀಡುವಾಗ ಪಕ್ಷದ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ನೋಡಬೇಕು. ಸಂಸದ ಶಿವಕುಮಾರ್ ಉದಾಸಿ ಅವರು ವೈಯಕ್ತಿಕ ಕಾರಣಗಳಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಕಾಂತೇಶ್ ಹಾವೇರಿ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧೆಗೆ ಇಚ್ಛಿಸಿದ್ದಾರೆ. ಹಲವು ನಾಯಕರು ಹಾಗೂ ಮುಖಂಡರಿಗೆ ಕಾಂತೇಶ್ ಸ್ಪರ್ಧಿಸಲಿ ಎಂಬ ಬಯಕೆ ಇದೆ ಎಂದು ಹೇಳಿದರು.
YuvaBharataha Latest Kannada News