ಮೇ ಮೊದಲ ವಾರ SSLC ಫಲಿತಾಂಶ ಸಾಧ್ಯತೆ
ಯುವ ಭಾರತ ಸುದ್ದಿ ಬೆಂಗಳೂರು :
ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ, ಇದೀಗ SSLC ಪರೀಕ್ಷೆಯ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ.ಈ ಫಲಿತಾಂಶ ಮೇ ಮೊದಲ ವಾರದಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ. ಮಂಡಳಿಯು ಈಗಾಗಲೇ ಎಸ್‌ಎಸ್‌ಎಲ್‌ಸಿ ಕೀ ಉತ್ತರ ಬಿಡುಗಡೆ ಮಾಡಿದೆ.
2023 ನೇ ಸಾಲಿನ SSLC ಪರೀಕ್ಷೆಯು ಮಾರ್ಚ್ 31 ನೇ ದಿನಾಂಕದಲ್ಲಿ ಶುರುವಾಗಿ ಏಪ್ರಿಲ್ 15 ನೇ ದಿನಾಂಕಕ್ಕೆ ಮುಗಿದಿದ್ದು, ಈ ವರ್ಷ ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿದ್ದು, ಈಗಾಗಲೇ ಏಪ್ರಿಲ್ 18 ನೇ ದಿನಾಂಕದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಶಿಕ್ಷಣ ಇಲಾಖೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ಶುರು ಮಾಡಲಾಗಿದೆ.
ಇದೀಗ ಮೇ ಮೊದಲ ವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.