ಭೋವಿ ಯುವ ಸಂಘದಿಂದ ರಾಜ್ಯಮಟ್ಟದ ಭೋವಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಯುವ ಭಾರತ ಸುದ್ದಿ ಬಸವನಬಾಗೇವಾಡಿ:
ಭೋವಿ ಸಮಾಜವು ಕಾಯಕವನ್ನು ನಂಬಿದಂತ ಸಮಾಜ ಈ ಸಮುದಾಯದ ಯುವಕರನ್ನು ಸಂಘಟಿಸಿ ಸದೃಢ ಸಮಾಜ ಮಾಡುವ ಸಂಕಲ್ಪದೊಂದಿಗೆ ಭೋವಿ ಪ್ರೀಮಿಯರ್ ಕ್ರಿಕೆಟ್ ಟೂರ್ನಾಮೆಂಟವನ್ನು ಭೋವಿ ಜಗದ್ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆರಂಭಿಸಿದ ಈ ಪಂದ್ಯಾವಳಿ ಯಶಸ್ವಿಯಾಗಿ 5ನೇ ಆವೃತ್ತಿ ಆರಂಭಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಎಸ್ ಬಿರಾದಾರ್ ಹೇಳಿದರು
ಪಟ್ಟಣದ ಬಿ.ಎಲ್.ಡಿ.ಇ ಕಾಲೇಜ್ ಮೈದಾನದಲ್ಲಿ ಭೋವಿ ಯುವ ಸಂಘದಿಂದ ರಾಜ್ಯಮಟ್ಟದ ಭೋವಿ ಪ್ರೀಮಿಯರ್ ಲೀಗಗೆ ಚಾಲನೆ ನೀಡಿ ಮಾತನಾಡಿದ ಅವರು ಭೂವಿ ಸಮಾಜ ಇಂದಿಗೂ ಕೂಡ ಹಿಂದುಳಿದಿದೆ ಸರ್ಕಾರದ ಸೌಲಭ್ಯಗಳನ್ನು ಭೋವಿ ಜನಾಂಗದ ಕಟ್ಟು ಕಡೆ ಮನುಷ್ಯನಿಗೆ ತಲುಪಿದಾಗ ಮಾತ್ರ ಸಮಾಜ ಮುಂದು ಬರಲು ಸಾಧ್ಯ ಶೋಷಣೆ ಅನ್ಯಾಯಕ್ಕೆ ಒಳಗಾದ ಅವಕಾಶ ವಂಚಿತ ಸಮುದಾಯಗಳು ಮುಖ್ಯ ವಾಹಿನಿಗೆ ತರುವುದರಲ್ಲಿ ಸಮಾಜದ ಹಇ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಗಲಿರಳು ಶ್ರಮಿಸುತ್ತಿದ್ದಾರೆ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದ ಈ ಸಮುದಾಯಕ್ಕೆ ಸರ್ಕಾರದ ಮೀಸಲಾತಿ ಇದ್ದರೂ ಕೂಡ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ ಕಾರಣ ತಾಂತ್ರಿಕವಾಗಿ ವೈಜ್ಞಾನಿಕ ಯುಗದಲ್ಲೂ ಭೋವಿ ವಡ್ಡರ ಜನಾಂಗವೂ ಇಂದಿಗೂ ತಮ್ಮ ಹಳೆ ಕುಲಕಸಬವನ್ನು ನಂಬಿ ಜೀವನ ನಡೆಸುತ್ತಿದ್ದಾರೆ ಸಮಾಜದ ಏರಿಕೆ ಆಗಬೇಕಾದರೆ ಸಮುದಾಯದ ಮಕ್ಕಳಲ್ಲಿ ಶಿಕ್ಷಣದ ಜಾಗೃತಿಯಾಗಬೇಕು ಶಿಕ್ಷಣದಲ್ಲಿ ಮುಂದೆ ಬಂದರೆ ಮಾತ್ರ ಸರಕಾರಿ ಉದ್ಯೋಗವನ್ನು ಪಡೆಯಲು ಸಾಧ್ಯ ಈ ಎಲ್ಲ ವಿಚಾರಗಳನ್ನು ಒಳಗೊಂಡಂತೆ ಈ ಕ್ರಿಕೆಟ್ ಲೀಗ್ ವನ್ನು ಆಯೋಜಿಸಿ ಭೂವಿ ಸಮಾಜದ ಯುವಕರನ್ನು ಸದೃಢ ಮಾಡಿ ಸಮಾಜ ಸಂಘಟನೆ ಮಾಡುವ ಮುಖ್ಯ ಉದ್ದೇಶವನ್ನು ಈ ಸಂಘಟನೆ ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂತೋಷ್ ಹೊಳಲೂರ ಬಸವರಾಜ್ ಕೋಟಿ ಸಂಗಮೇಶ್ ಓಲೆಕಾರ್ ಮಾತನಾಡಿದರು ಪುರಸಭೆಯ ಮಾಜಿ ಅಧ್ಯಕ್ಷ ಜಗದೀಶ್ ಕೊಟ್ರಶೆಟ್ಟಿ ಬೋವಿ ಸಮಾಜದ ಜಿಲ್ಲಾಧ್ಯಕ್ಷರಾದ ರಾಮು ಹೊಸಪೇಟೆ ಉದಯಕುಮಾರ್ ಮಾಂಗಲೇಕರ್ ತಾಲೂಕ ಅಧ್ಯಕ್ಷರಾದ ಪರಶುರಾಮ್ ಜಮಖಂಡಿ ರವಿಗೌಡ ಚಿಕ್ಕೋ೦ಡ ರಾಜು ಮುಳವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಸುನಿಲ್ ಜಮಖಂಡಿ ಸ್ವಾಗತಿಸಿ ನಿರೂಪಿಸಿದರು ವಂದಿಸಿದರು.