ವಿಕಲಚೇತನ ವಿದ್ಯಾರ್ಥಿಗಳು ಸಂಕಲ್ಪ, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಮುನ್ನಡೆಯಬೇಕು: ಕಿರಣ ಜಾಧವ
ಯುವ ಭಾರತ ಸುದ್ದಿ ಬೆಳಗಾವಿ : ಅನೇಕ ಅಂಗವಿಕಲರು ಅಂಗವೈಕಲ್ಯಕ್ಕೆ ಹೆದರದೆ ಪರಿಸ್ಥಿತಿಯನ್ನು ಮೆಟ್ಟಿನಿಂತು ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ. ಇಂತಹವರ ಮಾದರಿಯನ್ನು ಕಣ್ಣೆದುರು ಇಟ್ಟುಕೊಂಡು ಸಾಮಾನ್ಯ ವಿಕಲಚೇತನರು ದೃಢ ಸಂಕಲ್ಪ, ಅವಿರತ ದುಡಿಮೆಯಿಂದ ಜೀವನದಲ್ಲಿ ಮುನ್ನಡೆಯಬೇಕು ಎಂದು ಬಿಜೆಪಿ ರಾಜ್ಯ ಒಬಿಸಿ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಸಕಲ ಮರಾಠ ಸಮಾಜದ ಸಂಚಾಲಕ ಕಿರಣ ಜಾಧವ ಹೇಳಿದರು.
ಶಹಾಪುರದ ಆಳ್ವಾನ್ ಗಲ್ಲಿಯಲ್ಲಿರುವ ಎಪಿಎಚ್ ಸ್ಪೋರ್ಟ್ಸ್ ಕ್ಲಬ್ ಆಫ್ ದಿ ಅಸೋಸಿಯೇಷನ್ ಆಫ್ ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ನಲ್ಲಿ ಅಂಗವಿಕಲ ಟೇಬಲ್ ಟೆನ್ನಿಸ್ ಅಥ್ಲೀಟ್ ಗಳ ಟೇಬಲ್ ಟೆನ್ನಿಸ್ ಅಂಕಣವನ್ನು ಉದ್ಘಾಟಿಸಿ ಮಾತನಾಡಿದರು.ಇಂದೋರ್‌ನಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಗೆ ಬೆಳಗಾವಿಯ ಅಂಗವಿಕಲ ಬ್ಯಾಡ್ಮಿಂಟನ್ ಆಟಗಾರರು ಆಯ್ಕೆಯಾಗಿದ್ದಾರೆ. ಈ ಬ್ಯಾಡ್ಮಿಂಟನ್ ಆಟಗಾರರನ್ನು ಕಿರಣ್ ಜಾಧವ್ ಸನ್ಮಾನಿಸಿದರು.
ಕಿರಣ್ ಜಾಧವ ಅವರು ಇಂದೋರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಆಯ್ಕೆಯಾದ ಬ್ಯಾಡ್ಮಿಂಟನ್ ಆಟಗಾರರನ್ನು ಅಭಿನಂದಿಸಿದರು.ಅಂಗವಿಕಲ ಕ್ರೀಡಾಪಟುಗಳು ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿ ಪ್ಯಾರಾಲಿಂಪಿಕ್ಸ್ ಮಟ್ಟಕ್ಕೆ ತಲುಪಿ ಕುಟುಂಬ ಮತ್ತು ಸಮಾಜಕ್ಕೆ ಕೀರ್ತಿ ತರಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಲ್ಲದೆ, 12 ನೇ ತರಗತಿವರೆಗೆ ಗುಣಾತ್ಮಕ ಶಿಕ್ಷಣ ಪಡೆದಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಸರಕಾರ ಕೂಡಲೇ ಉದ್ಯೋಗ ಸೌಲಭ್ಯ ಕಲ್ಪಿಸಬೇಕು. ಇದರಿಂದ ಅವರು ಸ್ವಂತವಾಗಿ ನಿಂತು ಆರ್ಥಿಕವಾಗಿ ಸಬಲರಾಗಬಹುದು ಎಂದು ಕಿರಣ್ ಜಾಧವ ಹೇಳಿದರು.
ಅಂಗವಿಕಲ ವಿದ್ಯಾರ್ಥಿಗಳು ಕಿರಣ ಜಾಧವ ಅವರ ಮುಂದೆ ತಮ್ಮ ಸಮಸ್ಯೆ ಹಾಗೂ ಅಡೆತಡೆಗಳನ್ನು ಮಂಡಿಸಿದರು. ಕಿರಣ ಜಾಧವ ಅವರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸುವುದಾಗಿ ತಿಳಿಸಿದರು.ಸಂತೋಷ ಜೋಶಿ, ರಾಘವೇಂದ್ರ ಅಣ್ವೇಕರ, ಸವ್ವಾಶೇರಿ, ಕತ್ತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.